ಶುಕ್ರವಾರ, ಏಪ್ರಿಲ್ 4, 2014

ಬುದ್ದಿಜೀವಿಗಳೋ ಬುದ್ದುಜೀವಿಗಳೋ?




ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಆಯ್ಕೆಯಾದರೆ ಭಾರತದಲ್ಲಿ ಸರ್ವಾಧಿಕಾರ ಸೃಷ್ಟಿಯಾಗುತ್ತದೆ ಎಂದು ಸಾಹಿತಿ ಯು.ಆರ್. ಅನಂತಮೂರ್ತಿ ಹೇಳಿದ್ದಾರೆ. ಅಲ್ಲಾ ಸ್ವಾಮಿ, ರಾಜ್ಯ ಸರ್ಕಾರದಲ್ಲಿ ಒಬ್ಬ ಮಂತ್ರಿ ಯನ್ನು ಸೇರಿಸಿಕೊಳ್ಳುವುದಕ್ಕೆ, ಲೋಕಸಭೆ ಅಭ್ಯರ್ಥಿ ಆಯ್ಕೆ ಪಟ್ಟಿ ಅಂತಿಮ ಮಾಡಲು, ದೆಹಲಿ ವಿಮಾನ ವೇರಿ ಮೇಡಂ ಮನೆ ಮುಂದೆ ರಾಜ್ಯ ನಾಯಕರು ಅಪ್ಪಣೆಗಾಗಿ ಕಾಯುತ್ತಾರಲ್ಲ ಇದು ಯಾವ ಧೋರಣೆ?

ಕಳೆದ ೬೦ ವರ್ಷ ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೇಸ್ ಪಕ್ಷ ಇಷ್ಟು ದಿನದವರೆಗೂ ನಡೆಸಿದ್ದು ಏನು? ಕಾಂಗ್ರೆಸ್ ನ ಹಿರಿಯ ಮುಖಂಡ ಜಾಫರ್ ಶರೀಫ್ ಗೆ ಟಿಕೆಟ್ ಕೊಡದೆ ಸತಾಯಿಸಿದ್ದು ಯಾವ ಸರ್ವಾಧಿಕಾರ ಧೋರಣೆ ಸ್ವಾಮಿ?

ಸ್ವಾಮಿ ಕಾರ್ನಾಡ್ ರೇ, ರಾಜಕೀಯ ಪಕ್ಷಗಳಿಂದ ರಾಜ್ಯ, ದೇಶದಲ್ಲಿ ಜಾತಿ ಧರ್ಮ ದ ಆಧಾರದಲ್ಲಿ ಓಲೈಕೆ ನಡೀತಾಯಿದೆ, ಅದೇಸಮಯದಲ್ಲಿ ನೀವು ಹೇಳ್ತಿದೀರ,  "ನಂದನ್ ನೀಲೇಕಣಿ ನಮ್ಮ ಸಂಭಂಧಿಕ ಅದಕ್ಕೆ ಅವರ ಪರ ಪ್ರಚಾರ ನಡೆಸ್ತಿದೀನಿ" ಅಂತೀರಿ, ಇದು ಸ್ವಜನ ಪಕ್ಷಪಾತ ವಲ್ಲದೆ ಇನ್ನೇನು?

"ಸ್ವಂತ ಶಕ್ತಿ" ಯಿಂದ ೭೦೦೦ ಕೋಟಿ ಆಸ್ತಿ ಮಾಡಿರುವ ನಂದನ್ ನೀಲೇಕಣಿ, ಅಷ್ಟು ಹಣ ಇಟ್ಕೊಂಡು ಏನು ಮಾಡ್ತಾರೆ? ಯಾವುದಾದರು ಜನಪರ ಕಾರ್ಯಕ್ರಮ ಅಷ್ಟೊಂದು ಹಣವನ್ನು ಬಳಸುವುದಕ್ಕೆ ನೀವ್ಯಾಕೆ ಸಲಹೆ ಕೊಡೋದಿಲ್ಲ?
ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರೈತ ವಿಠ್ಠಲ್ ಅರಭಾವಿ  ಚೆನ್ನಾಗಿ ಕುಡಿದು ಆತ್ಮ ಹತ್ಯೆ ಮಾಡಿಕೊಂಡ, ಅದಕ್ಕೆ ಸರ್ಕಾರಕ್ಕೆ ಯಾವುದೇ ಸಂಭಂದ ವಿಲ್ಲ ಅಂತ ಉಡಾಫೆಯಾಗಿ ಮಾತಾಡ್ತಾರೆ. ಪರಮೇಶ್ವರ್ ರವರು ದೇವೇಗೌಡ ಯಾವಾಗ ವಿಷ ಕುಡಿದು ಸಾಯ್ತಾರೆ ಅಂತ ಕಾಯ್ತಾಇದ್ದೇನೆ? ಅಂತ ಕೀಳು ಮಟ್ಟದಲ್ಲಿ ಮಾತಾಡ್ತರೆ ಇದೆಲ್ಲ ವನ್ನು ಖಂಡಿಸೋದಿಕ್ಕೆ ನಿಮಗೆ ಏನಾಗಿದೆ?

ಅಳುವ ಗಂಡಸರನ್ನು ನಗುವ ಹೆಂಗಸರನ್ನು ನಂಬಬಾರದು ಸಿದ್ಧರಾಮಯ್ಯನವರು ಹೆಚ್ ಡಿಕೆ ಗೆ ಲೇವಡಿ ಮಾಡಿದ್ದಾರೆ, ಇಂತಹ ಹೇಳಿಕೆಗೆ ನಿವ್ಯಾಕೆ ಅವರಿಗೆ ತಿಳಿ ಮಾತು ಹೇಳಲಿಲ್ಲ? ಈ ದೇಶದ ಹೆಂಗಸರು ಪ್ರತಿನಿತ್ಯ ಅಳುತ್ತಾ ಇರಬೇಕು ಎಂಬುದು ಅವರ ಅಭಿಪ್ರಾಯವಾಗಿದೆ ಎಂದು ಹೆಚ್ಡಿಕೆ ಟೀಕಿಸಿದ್ದಾರೆ.

ರಾತ್ರಿ 1 ಗಂಟೆಯವರೆಗೆ ಬಾರ್ ಮತ್ತು ಪಬ್ ತೆರೆಯಲು ಅವಕಾಶ ನೀಡಲಾಗಿದೆ, ಹಾಗಾದ್ರೆ ಕುಡಿಯುವುದನ್ನು ಪ್ರೋತ್ಸಾಹಿಸುವ ಸರ್ಕಾರ, ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸದ ಸರ್ಕಾರ ಜನಸಾಮಾನ್ಯರ ಸರ್ಕಾರವೇ?
ಅನಂತ್ ಕುಮಾರ್ ಬೆಂಗಳೂರಿಗಾಗಿ ಯಾವುದೇ ಕೆಲಸ ಮಾಡಿಲ್ಲ ಅಂತೀರಾ? ಹಾಗಾದ್ರೆ ಕಳೆದ ೧೦ ವರ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಯೆ ಸರ್ಕಾರ ಬೆಂಗಳೂರಿಗಾಗಿ ಏನು ಮಾಡಿದೆ ?

ಬೆಲೆ ಏರಿಕೆ ಹಾಗೂ ಆರ್ಥಿಕ ಸಮಸ್ಯೆಗಳಿಂದ ಜನಸಾಮಾನ್ಯರು ತತ್ತರಿಸಿದಾಗ, ನೀವು ಏನು ಮಾಡ್ತಾ ಯಿದ್ದಿರಿ? ನಿಮ್ಮ ಬುದ್ದಿ ಜೀವಿ ಬತ್ತಳಿಕೆಯಿಂದ ಕೇಂದ್ರ ಸರ್ಕಾರಕ್ಕೆ ಯಾಕೆ ಸಲಹೆ ಕೊಡಲಿಲ್ಲ?

ಪಾಕಿಸ್ತಾನ ಸೇನೆಯು ಭಾರತೀಯ ಸೈನಿಕರ ಶಿರಚ್ಛೇದ ಮಾಡಿದಾಗ, ಏನು ಮಾಡ್ತಾಯಿದ್ದಿರಿ? ಒಂದಾದರು ಹೇಳಿಕೆ ಕೊಟ್ಟು ಖಂಡಿಸಿದಿರಾ? ರಾಷ್ಟ್ರ ಸಾರ್ವಭೌಮತ್ವಕ್ಕೆ ಧಕ್ಕೆ ಯಾದಾಗ ಒಂದಾದರು ಪ್ರತಿಭಟನೆ ಮಾಡಿದ್ದೀರಾ ಸ್ವಾಮಿ?

ಯಾರನ್ನು ಕುಲಪತಿಯನ್ನಾಗಿ ನೇಮಕ ಮಾಡಬೇಕು, ಯಾರನ್ನು ಮಾಡಬಾರದು ಎಂಬ ಬಗ್ಗೆ ನನಗೆ ತಿಳಿದಿದೆ. ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಶೋಧನಾ ಸಮಿತಿ ರಚಿಸಿದ್ದೇ ನಾನು. ಹೊರಗಿನವರನ್ನು ಕುಲಪತಿಗಳನ್ನಾಗಿ ನೇಮಕ ಮಾಡಬಾರದು ಎಂದೇನೂ ನಿಯಮವಿಲ್ಲ. ಇದೆಲ್ಲ ನನ್ನ ಅಧಿಕಾರಕ್ಕೆ ಸಂಬಂಧಿಸಿದ್ದು ನನ್ನ ಅಧಿಕಾರವನ್ನು ಪ್ರಶ್ನಿಸಲು ಸಾಹಿತಿ ಯು.ಆರ್.ಅನಂತಮೂರ್ತಿ ಯಾರು ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹೇಳಿದಾಗ, ನಿಮ್ಮ ಮೆಚ್ಚಿನ ರಾಜಕೀಯ ಪಕ್ಷದ ಯಾವ ರಾಜಕಾರಣಿ ನಿಮ್ಮ ಪರವಾಗಿ ಮಾತಾಡಿದರು ಸ್ವಾಮಿ?

ನಿಮ್ಮ ಚಿಕಿತ್ಸೆಗಾಗಿ ಸುಮಾರು 11 ಲಕ್ಷ ರೂಪಾಯಿ ಈಗಾಗಲೇ ವೆಚ್ಚವಾಗಿದೆ. ಅಷ್ಟೊಂದು ದೊಡ್ಡ ಮೊತ್ತವನ್ನು ತಾವು ಭರ್ತಿ ಮಾಡಲು ಅಸಾಧ್ಯವೆಂದು ಹೇಳಿ, ಸರಕಾರದ ವತಿಯಿಂದ ಬಿಲ್ ಪಾವತಿ ಮಾಡುವಂತೆ ತಮ್ಮ ಕುಟುಂಬವು ರಾಜ್ಯ ಸರಕಾರಕ್ಕೆ ಮನವಿ ಮಾಡಿದೆ. ಯಾವುದೇ ಸಂಕೋಚ ವಿಲ್ಲದೆ ರಾಜ್ಯ ಸರ್ಕಾರದ ಮುಂದೆ ಕೈಯೊಡ್ಡು ತ್ತೀರಲ್ಲ, ಕರ್ನಾಟಕ ಜನ ಸಾಮಾನ್ಯರ ತೆರಿಗೆ ಹಣವನ್ನು ಸುಖಾ ಸುಮ್ಮನೆ ಕೊಡೋದಿಕ್ಕೆ ಹಣ ವೇನು ಆಕಾಶ ದಿಂದ ರಾಜ್ಯ ಸರ್ಕಾರದ ಖಜಾನೆ ಗೆ ಬಂದು ಬೀಳುತ್ತಾ?   ಕೆಲವೊಮ್ಮೆ ಅನ್ನಿಸುತ್ತೆ, ಸರ್ಕಾರದಿಂದ ಇಂತಹ ಹಲವಾರು ಪ್ರಯೋಜನ ಪಡೆಯಲು ತಾವು ಕಾಂಗ್ರೆಸ್ ಓಲೈಕೆ ಮಾಡೋದಿಕ್ಕೆ ನಿಂತ್ಕೋತೀರೋ ಏನೋ ಅಂತ.

ಕರ್ನಾಟಕದಲ್ಲಿ ಕನ್ನಡ ಬಾವುಟ, ಕನ್ನಡ ಹೆಸರಿನ ಫಲಕ ಗಳು, ಕನ್ನಡ ಮಾಧ್ಯಮ ಶಿಕ್ಷಣದ ಬಗ್ಗೆ ಕೋರ್ಟ್ ಗಳು ನಮಗೆ ವಿರುದ್ಧ ವಾದ ತೀರ್ಪು ಕೊಟ್ಟಿವೆ, ಸಾಹಿತಿಗಳಾದ ನಿಮಗೆ ಕನ್ನಡಿಗರ ಇಚ್ಚಾ ಶಕ್ತಿ, ಬದ್ಧತೆ ಯನ್ನು ಕಾಪಾಡುವ ಬಗ್ಗೆ ಕನಿಷ್ಟ ಒಂದು ಮಾತು ಇದುವರೆವಿಗೂ ನಿಮ್ಮಿಂದ ಬಂದಿಲ್ಲ, ನಿಮ್ಮ ಹಿತಾಸಕ್ತಿ ಏನು ಅಂತ ರಾಜ್ಯದ ಜನರಿಗೆ ಚೆನ್ನಾಗಿ ಅರ್ಥ ವಾಗಿದೆ ಸ್ವಾಮಿ.

http://www.vijaykarnatakaepaper.com/Details.aspx?id=12273&boxid=3293218


2 ಕಾಮೆಂಟ್‌ಗಳು:

  1. ರಂಗನಾಥರವರೆ, ನೀವು ನಿಮ್ಮ ಮೂಗಿನ ನೀರಕ್ಕೆ ಬರ್ಕೊಂಡಿದ್ದೀರಾ ಅನ್ಸುತ್ತೆ. ಜಾತೀಯತೆಯಿಂದ ನಮ್ಮ ದೇಶ ಹಾಳು ಆಗೋಗಿದೆ. ಮೋದಿರವರು ಪ್ರಧಾನಿಯಾಗಿ ಬಂದರೆ, ಖಂಡಿತ ಜಾತಿವಾದದಿಂದ, ಧರ್ಮವಾದದಿಂದ ನಮ್ಮ ದೇಶವನ್ನು ಒಡೆದುಹಾಕುತ್ತಾರೆ. "ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಆಯ್ಕೆಯಾದರೆ ಭಾರತದಲ್ಲಿ ಸರ್ವಾಧಿಕಾರ ಸೃಷ್ಟಿಯಾಗುತ್ತದೆ" ಎಂದು ಹೇಳಿರುವುದರಲಿ ನನಗೆ ಏನೂ ತಪ್ಪು ಕಾಣುವುದಿಲ್ಲ. ಇದುವರೆಗಿನ ಮೋದಿರವರ ಭಾಷಣಗಳನ್ನು ಕೇಳಿದರೆ ಸ್ಪಷ್ಟವಾಗುತ್ತೆ, ಅವರು "ನಾನು, ನನ್ನದು, ನನ್ನಿಂದಲೇ" ಅನ್ನೋದು ಬಿಟ್ಟು ಬೇರೆ ಏನನ್ನೂ ಹೇಳೋದಿಲ್ಲ. ಅವರ ಸರ್ಕಾರದಲ್ಲಿ ಎಷ್ಟೋ ಬುದ್ಧಿವಂತರು, ಶ್ರಮಜೀವಿಗಳು ಉತ್ತಮ ಕೆಲಸ ಮಾಡಿದ್ದಾರೆ ಗುಜರಾತಿನಲ್ಲಿ ಪ್ರಗತಿ ಪಡೆಯಲು. ಮೋದಿರವರಿಗೆ ಮಾರ್ಗದರ್ಶನ ನೀಡಿದ್ದಾರೆ. ಮೋದಿರವರು ಇದುವರೆಗೂ, ಯಾರೊಬ್ಬರನ್ನೂ ಪ್ರಶಂಶಿಸದೆ, ಎಲ್ಲದಕ್ಕೂ ನಾನೇ ಕಾರಣಕರ್ತನೆಂದು ಬ್ರಹ್ಮ, ಹಿಟ್ಲರ್ ತರ ಆಡ್ತಾ ಇದ್ದಾರೆ. ಅವರ ಮಾತನ್ನು ಯಾರಾದ್ರೂ ವಿರೋದಿಸಿದ್ರೆ, ಸಿಡಿದು ಬೀಳ್ತಾರೆ. ಇನ್ನೂ, ಇಂತಹ ಕೋತಿಯ ಕೈಲಿ ಮಾಣಕ್ಯಾ ಕೊಟ್ರೆ ಉಳಿಯುತ್ತಾ ಸ್ವಾಮಿ? ತಮ್ಮ ಸರ್ವಾಧಿಕಾರ ಮನೋಭಾವನೆಯಿಂದ ದೇಶನ ಹಾಳು ಮಾಡಿಬಿಡ್ತಾರೆ. ಮಾರಿಬಿಡ್ತಾರೆ. ಹುಶಾರಾಗಿರಿ. ಬಿಜೆಪಿ ಆಗಲೀ ಕಾಂಗ್ರೆಸ್ಸ್ ಆಗಲೀ ಸರ್ಕಾರ ನಡೆಸುವ ಯೋಗ್ಯತೆ ಇಲ್ಲ.

    ಪ್ರತ್ಯುತ್ತರಅಳಿಸಿ
  2. ರಂಗನಾಥ್ ಜೀ, ನಿಮ್ಮ ಪ್ರಶ್ನೆಗಳಿಗೆ ಅವರು ಉತ್ತರಿಸೋದು ಬೇಡ ಆ ಲದ್ದಿಜೀವಿಗಳು ಈ ಪ್ರಶ್ನೆಗಳನ್ನ ಓದಿದರೆ ಸಾಕು ಅವರು ಸುಧಾರಿಸಿಕೊಳ್ಳೋಕೆ ಕನಿಷ್ಠ ಅಂದ್ರೂ ಒಂದು ವಾರನಾದ್ರೂ ಬೇಕು.

    ಪ್ರತ್ಯುತ್ತರಅಳಿಸಿ

Click below headings