|
ಕಳೆದ ಮೂರು ದಿನಗಳಿಂದ ಒಮಾನ್ ನಲ್ಲಿ ಪ್ರತಿಭಟನೆಗಳ ಕಾವು ಶುರುವಾಗಿದೆ, . ದುಬೈ ಬಾರ್ಡರ್ ನಿಂದ ಕೇವಲ್ ೮೦ ಕಿ.ಮಿ ದೂರದಲ್ಲಿರುವ ವಾಣಿಜ್ಯ ನಗರಿ ಸೋಹಾರ್ ನಲ್ಲಿ ಒಂದು ಲುಲು ಶಾಪಿಂಗ್ ಮಾಲ್ ಅನ್ನು ಸುಟ್ಟು ಹಾಕಿದ್ದಾರೆ. ಸರಕಾರದ ಪ್ರಕಟಣೆಯ ಪ್ರಕಾರ ಒಬ್ಬ ವ್ಯಕ್ತಿ ಮೃತ ಪಟ್ಟಿದ್ದು, ಕೆಲ ಗಾಯಳುಗಳು ಆಸ್ಪ್ತತ್ರೆ ಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಪ್ರತಿಭಟನೆ ಕಾರರ ಪ್ರಮುಖ ಬೇಡಿಕೆ ಯೇನಂದರೆ, ಒಮಾನಿ ಪ್ರಜೆಗಳಿಗೆ ಹೆಚ್ಚಿನ ಉದ್ಯೋಗವಕಾಶ, ವೇತನದಲ್ಲಿ ಹೆಚ್ಚಳ, ಏರುತ್ತಿರುವ ಬೆಲೆಗಳ ಮೇಲೆ ನಿಯಂತ್ರಣ, ಖಾಸಗಿ ವಲಯದಲ್ಲಿ ಹೆಚ್ಚಿನ ಉದ್ಯೋಗ ಭದ್ರತೆ ಮತ್ತು ಎಲ್ಲರಿಗೂ ಸರಿಸಮನಾದ ವೇತನ. ಹಾಗು ತೈಲದ ಆದಾಯವನ್ನು ಪ್ರತಿಯೊಬ್ಬರಿಗೂ ಸಮನಾಗಿ ಹಂಚಬೇಕು ಹಾಗು ವಲಸೆಗಾರರನ್ನು ನಿಯಂತ್ರಿಸಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗವಕಾಶವನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ನೂರಾರು ಸ್ಥಳೀಯರು ದುಬೈ - ಮಸ್ಕತ್ ಹೈವೇ ಯನ್ನು ಬಂದ್ ಮಾಡಿ, ರಸ್ತೆ ಎಲ್ಲೆಡೆ ಪ್ರತಿಭಟನೆ ಮಾಡುತಿದ್ದಾರೆ. ಕೆಲ ಕಾರುಗಳನ್ನು ಸುಟ್ಟು ಹಾಕಿದ್ದು, ಕೆಲ ಮಳಿಗೆಗಳಿಗೆ ಬೆಂಕಿ ಹಚ್ಚುವ ಪ್ರಯತ್ನ ನಡೆದಿದೆ. ಪೋಲಿಸರು ಅಷ್ರುವಾಯು ವನ್ನು ಸಿಡಿಸಿ ಗುಂಪನ್ನು ಚದುರಿಸುವ ಕಾರ್ಯವು ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ ಅವರನ್ನು ಸ್ಥಳೀಯ ಆಸ್ಪತ್ರೆ ಗೆ ದಾಖಲು ಮಾಡಿದ್ದಾರೆ. ಕೆಲ ವೈದ್ಯರ ಪ್ರಕಾರ ಗಾಯಗೊಂಡವರಲ್ಲಿ ಆರು ಜನ ಮೃತ ಪಟ್ಟಿದ್ದಾರೆ.
ಈ ಮಧ್ಯೆ ಸುಲ್ತಾನ್ ಸರಕಾರ ದಲ್ಲಿ ಭಾರಿ ಬದಲಾವಣೆ ಮಾಡಿದ್ದು, ಪ್ರತಿಭಟನಕಾರರ ಬೇಡಿಕೆ ಯನ್ನು ಈಡೇರಿಸುವ ಪ್ರಯತ್ನವನ್ನು ನಡೆಸಿದ್ದಾರೆ. ಎಲ್ಲ ಪ್ರಾಂತ್ಯಗಳಲ್ಲಿ ಹೆಚ್ಚುವರಿ ಗವರ್ನರ್ ಗಳನ್ನು ನೇಮಿಸಲಾಗಿದ್ದು, ಆರು ಜನ ಮಂತ್ರಿಗಳನ್ನು ಬದಲಾಯಿಸಿದ್ದಾರೆ. ೮೪ ಜನರಿರುವ ಸಲಹಾ ಮಂಡಳಿಯನ್ನು ನೇಮಕ ಮಾಡಿದ್ದು, ಜನರ ಕುಂದುಕೊರತೆ ಗಳನ್ನು ನಿವಾರಿಸಲು ಎಲ್ಲ ಪ್ರಾಂತ್ಯದ ಗವರ್ನರ್ ಗಳಿಗೆ ಸೂಚಿಸಿದ್ದಾರೆ. ಆದರೆ ಪ್ರತಿಭಟನೆಕಾರರು, ಜನರಿಂದ ನೇಮಕಗೊಳ್ಳುವ ವ್ಯವಸ್ಥೆ ಯನ್ನು ಕಲ್ಪಿಸಬೇಕೆಂದು ನಿವೇದಿಸಿಕೊಂಡಿದ್ದಾರೆ.
ಕಳೆದ ವರ್ಷ ಪಕ್ಕದ ದುಬೈ ನಲ್ಲಿ ಆದ ಆರ್ಥಿಕ ಹಿಂಜರಿತ ಕೂಡ ಒಮಾನ್ ನನ್ನು ಕಂಗೆಡಿಸಿರಲಿಲ್ಲ. ಯಾವುದೆ ಏರಿಳಿತ ವಿಲ್ಲದ ಅತ್ಯಂತ ಜಾಣ್ಮೆಯಿಂದ ಹಣಕಾಸಿ ಪರಿಸ್ಥಿತಿ ಯನ್ನು ಇಲ್ಲಿನ ಸರ್ಕಾರ ನಿಭಾಯಿಸುತ್ತಿದೆ. ಈಜಿಪ್ತ್, ತುನಿಶಿಯಾ, ಲಿಬಿಯಾ ಹಾಗು ಬಹರೈನ್ ನಂತಹ ಅರಬ್ ದೇಶಗಳಲ್ಲಾಗುತ್ತಿರುವ ಬದಲಾವಣೆಗೆ ಒಮಾನ್ ಪ್ರಜೆಗಳು ಸಹ ಆಶಿಸುತಿದ್ದಾರೆ. ಕಳೆದ ನಲವತ್ತು ವರ್ಷಗಳಿಂದ ಸುಲ್ತಾನ್ ಕಾಬುಸ್ ಬಿನ್ ಸಯೀದ್ ರವರ ಆಳ್ವಿಕೆ ಯಲ್ಲಿ ಇದೇ ಮೊದಲ ಬಾರಿ ಪ್ರತಿಭಟನೆಯ ಬಿಸಿ ತಾಕಿದೆ. ಕೇವಲ ೨೯ ಲಕ್ಷ ಜನಸಂಖ್ಯೆ ಯಿರುವ ಒಮಾನ್ ದೇಶ, ಅದರಲ್ಲಿ ೭ ಲಕ್ಷ ಜನ ಬೇರೆ ದೇಶಗಳಿಂದ ಉದ್ಯೋಗವನ್ನು ಅರಿಸಿಕೊಂಡು ಬಂದಿದ್ದಾರೆ. ಅತಿ ಹೆಚ್ಚು ವಲಸೆಗಾರರಲ್ಲಿ ಹೆಚ್ಚಿನವರು ಭಾರತೀಯರು ಅವರಲ್ಲಿ ಬಹುಪಾಲು ಕೇರಳದವರು. ಪಕ್ಕದ ಯಾವುದೆ ದೇಶದಲ್ಲಿ ಇಲ್ಲದ ಸ್ಥಳೀಯರಿಗೆ ಎಲ್ಲ ವಲಯದಲ್ಲಿ ಉದ್ಯೊಗ ಮೀಸಲಾತಿ ಒಮಾನ್ ನಲ್ಲಿದೆ, ಸ್ಥಳೀಯ ರಿಗೆ ಉದ್ಯೋಗದಲ್ಲಿ ಮೀಸಲಾತಿ ಯನ್ನು ಜಾರಿಗೊಳಿಸಿದ ಮೊದಲ ಅರಬ್ ರಾಷ್ಟ್ರ ಒಮಾನ್. ಆದರು ಇಲ್ಲಿನ ಗಲಾಟೆಗಳು ಎಲ್ಲರಲ್ಲಿ ಆಶ್ಚರ್ಯ ವನ್ನುಂಟು ಮಾಡಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ