Poems ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Poems ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಏಪ್ರಿಲ್ 28, 2024

ಹನಿಗವಿತೆಗಳು



 ಅಂದು 

ಕೃಷ್ಣನಂತಿದ್ದ


ಮದುವೆಯಂತರ

ಬುದ್ದನಂತಾದ


***

ದಾರ ಹರಿದ 

ಗಾಳಿಪಟ

ದಂತಾಗಿತ್ತವನ ಬದುಕು


ಮಾಂಗಲ್ಯ ಧಾರ ಣೆಯ ನಂತರ

ಅವನೀಗ ಜವಬ್ ದಾರ


***


ಅವಳದು ಸುಂದರ 

ಕುಟುಂಬ


ಅವಳು ಅದರ 

ಪ್ರತಿಬಿಂಬ


ಅವಳ ಅಂದಕೆ ಜಾರಿ 

ಬಿದ್ದನೊಬ್ಬ ಹುಂಬ


ಇಂದು ಮನೆಯಲ್ಲಿ

ಉಜ್ಜುತ್ತಿರುವ 

ಪಾತ್ರೆ ಚೊಂಬ!!!


*****


ಮದುವೆಗೆ ಮುಂಚೆ 

ಅವನಿಗ್ಯಾವ ಮನೆಗೆಲಸವೂ 

ಗೊತ್ತಿರಲಿಲ್ಲ


ಮದುವೆಯ ನಂತರ

ಈಗ ಮನೆಕೆಲಸಗಳಲ್ಲಿ

ಅವನನ್ನ ಮೀರಿಸುವರು 

ಯಾರೂ ಇಲ್ಲ


***

ಮದುವೆಗೆ ಮುಂಚೆ 

ಅವನನ್ನ ಬುದ್ದಿವಂತನೆಂದು

ಎಲ್ಲರೂ ಹೊಗಳುವವರೆ!!!


ಅವನ ಹೆಂಡತಿ ಈಗ ಪ್ರತಿ ಮಾತಿಗೂ 

ಎಂತ ದಡ್ಡ ರೀ ನೀವು

ಎನ್ನುತಿದ್ದಾಳಂತೆ!!!


***

ಮಗ ಮುಂಚೆ

ಆಕಾಶವಾಣಿಯ

ಹಾಡುಗಳಿಗೆ

ಗುನುಗುತಿದ್ದನಂತೆ


ಈಗ ಆ ಶರೀರ ವಾಣಿಯ

ತಾಳಕ್ಕೆ ಕುಣಿಯುತಿದ್ದಾನೆಂದು

ಆರೋಪಿಸುತಿದ್ದಾಳೆ ಅಮ್ಮ

ಮಂಗಳವಾರ, ಮೇ 24, 2022

ಮನುಜ ನೀನು ಮರದಂತೆ ಜೀವಿಸು

 


ಕವಿತೆ: ಮರದಂತೆ ಜೀವಿಸು

ಜನರಿಗೆ ನೆರಳಾಗಿ
ಬಳ್ಳಿಗೆ ಆಸರೆಯಾಗಿ
ಪ್ರಾಣಿ ಪಕ್ಷಿಗಳಿಗೆ
ಹಸಿವು ನೀಗಿಸುವ
ಫಲವ ನೀಡುವ
ಮರದಂತೆ ಜೀವಿಸು 

ಫಲ ತಿಂದವರು
ಮರದ ನೆರಳಲ್ಲಿ 
ನಲಿದು ಕುಪ್ಪಳಿಸಿದವರು
ಕೊಡಲಿ ಹಾಕಿದರೂ
ಏನು ಆಗಲೇ ಇಲ್ಲ ಎನ್ನುವ
ಮರದಂತೆ ಜೀವಿಸು 

ಕೊರಡು ಅವರಿಗೆ
ಆಸರೆಯಾದೀತು
ಕಟ್ಟಿಗೆ ಅವರು ತಿನ್ನುವ
ಅನ್ನಕ್ಕಾಯಿತು ಎನ್ನುವ 
ಮರದಂತೆ ಜೀವಿಸು 

ನಿನ್ನ ಸಂಭ್ರಮಕ್ಕೆ ಯಾರು
ಜತೆಯಾಗದಿದ್ದರೂ
ನಿನ್ನ ಕಷ್ಟ ಸುಖ ಯಾರು
ವಿಚಾರಿಸದೇ ಇದ್ದರೂ
ನಿನ್ನ ಕಾಯಕದಲ್ಲಿ
ನಿರತನಾಗಿ
ಮರದಂತೆ ಜೀವಿಸು 
 
ಕೊರಗಿ ಕೊರಗಿ
ಕೃಶವಾಗಬೇಡ
ಯಾವುದೂ ಶಾಶ್ವತವಲ್ಲ
ಎಲ್ಲರಿಗೂ ಒಂದು ದಿನ
ಕೊನೆಯೆಂಬುದಿದೆ ಎಂದು
ಅರಿತು
ಮರದಂತೆ ಜೀವಿಸು 

ಚೈತ್ರದ ಚಿಗುರೇ
ನಿನ್ನ ಸಂಭ್ರಮವೆಂಬಂತೆ
ಕಡಿದರೂ ಮತ್ತೆ ಮತ್ತೆ 
ಚಿಗುರೊಡೆಯುತ
ನಳನಳಿಸುವ
ಮರದಂತೆ ಜೀವಿಸು 
ಮನುಜ ನೀನು
ಮರದಂತೆ ಜೀವಿಸು 


-ಪಿ.ಎಸ್.ರಂಗನಾಥ






ಶುಕ್ರವಾರ, ಸೆಪ್ಟೆಂಬರ್ 10, 2021

ಎಣ್ಣೇ ಎಂತ ಮಾಯಾವಿ ನೀನು?

 ಅಮವಾಸ್ಯೆ ರಾತ್ರಿಯಲ್ಲಿ

ಚಂದಿರನ ಕಾಣಿಸುವೆ ನೀನು


ತಂಪಾದ ರಾತ್ರಿಯಲ್ಲಿ

ಬೆಚ್ಚಗಾಗಿಸುವೆ ನೀನು


ಮೈ ಮನ ಬಳಲಿ ಬೆಂಡಾದಾಗ

ದಣಿವರಿಸುವೆ ನೀನು


ಕಷ್ಟ ದುಖಃ ಬಂದಾಗ

ಎಲ್ಲವನ್ನು ಮರೆಸುವೆ ನೀನು



..


..


..


..


..


..


..


..


..


..


..


..


..


..


..


..


..


..


..


..


..


..


..


..


ಎಣ್ಣೇ ಎಂತ ಮಾಯಾವಿ ನೀನು?

ಚುಟುಕು ಕವನ: ಕೊನೆಗೂ ಎದ್ದು ಬಿಟ್ಟೆ

 ಕೊನೆಗೂ ಎದ್ದು ಬಿಟ್ಟೆ


30 ಸಾಕು ಅಂದುಕೊಂಡೆ

ಮೊದಲಿಗೆ 30  ಆಯಿತು

ಮನಸ್ಸಿಗೆ ಸಮಾಧಾನವಾಗಲಿಲ್ಲ


ಅದಕ್ಕೆ ಮತ್ತೆ 30 ಸೇರಿಸಿದೆ

60  ಆಯಿತು

ಆಗಲೂ ಖುಷಿಯಾಗಲಿಲ್ಲ


ಮತ್ತೊಂದು 30 ಸೇರಿಸಿದೆ

90 ಆಯಿತು

ಇನ್ನೂ ಜಾಸ್ತಿಯಾದರೆ

ಮಡದಿಯು ಸುಮ್ಮನೆ ಬಿಡುವಳೇ ಎಂದು

..

..

..

..

..

..

..

..

..

..

..

..

..

..

..

..

..

..

..

..

..

..

..

..

..

..

..

..

..

..

..

..

..

..

..

..

..

..

..

..

ಮೊಬೈಲ್ ಅಲಾರ್ಮ್ ಅನ್ನು

ಮತ್ತೊಮ್ಮೆ SNOOZ ಮಾಡದೆ DISMISS ಮಾಡಿ

ಭಾರವಾದ ಮನಸ್ಸಿನಿಂದ

ಕೊನೆಗೂ ಎದ್ದು ಬಿಟ್ಟೆ 😀😀😀

ಸೋಮವಾರ, ಮೇ 31, 2021

ಬದುಕು ವರ್ಣರಂಜಿತ

 *ಬದುಕು ವರ್ಣರಂಜಿತ*

ನಮ್ಮಲ್ಲಿಹುದು
ಸತ್ವ ರಜ ತಮೋ ತ್ರಿಗುಣ
ಒಂದೊಂದಕ್ಕೂ
ಒಂದೊಂದು ಬಣ್ಣ
ಬದುಕಿನ ಚಿತ್ರಪಟದೊಳಗೆ
ರಜ ತಮೋ ಬಣ್ಣಗಳ ಪ್ರಮಾಣ
ಅವುಗಳ ಇತಿಮಿತಿಯಲ್ಲಿದ್ದರೆ
ಬದುಕು ವರ್ಣರಂಜಿತ
ತಮ, ರಜ ಮನೋಗುಣವ
ನಿಯಂತ್ರಿಸಿ ಸತ್ವ ಗುಣವ
ಮೈಗೂಡಿಸಿಕೊಂಡರೆ
ಬದುಕು ವರ್ಣರಂಜಿತ
ಬದುಕಿನ ಗುಟ್ಟು
ಸಂಪದ್ಭರಿತವಾದ ಪ್ರಕೃತಿಯ
ಯಲ್ಲಿದೆ, ಒಮ್ಮೆ ನೋಡು
ಈ ಚಿತ್ರ ಪಟವ.
ಬದುಕು ವರ್ಣರಂಜಿತ
- ರಚನೆ
ಪಿ.ಎಸ್.ರಂಗನಾಥ
ನಮ್ಮ ಬದುಕು ಒಂತರಾ ಕ್ಯಾನ್ವಾಸ್ ಇದ್ದಂತೆ,
ಅದರಲ್ಲಿ ನಮಗೆ ಬೇಕಾದ ಬಣ್ಣಗಳನ್ನು ಬಳಿಯುತ್ತ ಹೋಗಬಹುದು.
ಅದು ಸುಖ, ದುಃಖ, ಕಷ್ಟ ನಷ್ಟ, ಕಾಮ ಕ್ರೋಧ ಮದ ಮತ್ಸರ, ಅಸೂಯೆ ಅಹಂಕಾರ.
ಆ ಕ್ಯಾನ್ವಾಸ್ ನಲ್ಲಿ ನಮ್ಮ ಪ್ರತಿಬಿಂಬವೇ ಕಾಣುತ್ತದೆ.
ಎಲ್ಲವನ್ನು ನಿಗ್ರಹಿಸಿ ಒಂದು ಸುಂದರ ಬದುಕನ್ನು ರೂಪಿಸಿಕೊಳ್ಳುವುದು ನಮ್ಮಿಂದ ಸಾಧ್ಯ.
ಎನ್ನುವುದು‌ ಈ‌ ಕವನದ ಸಾರಾಂಶ

ಬುಧವಾರ, ಮಾರ್ಚ್ 3, 2021

ನೀನ್ಯಾರು. ನಿನ್ನ ಐಡೆಂಟಿಟಿ ಗೊತ್ತಾ!!!!

 ನೀನ್ಯಾರು

ನಿನ್ನ ಐಡೆಂಟಿಟಿ ಗೊತ್ತಾ!!!!

ನೀನು‌ ಉತ್ತಮನಾಗಿ‌ ಬಾಳಿ ಬದುಕಿದರೆ, ಸಮಾಜ ನಿನ್ನನ್ನು ಹೀಗೆ ಗುರುತಿಸುತ್ತದೆ....

ಶಾಲೆ ಕಾಲೇಜಿನಲ್ಲಿ ಒಳ್ಳೆಯ ವಿಧ್ಯಾರ್ಥಿ.
ತಂದೆ ತಾಯಿಗೆ ಮುತ್ತಿನಂತ ಮಗ
ಹೆಂಡತಿಗೆ ಚಿನ್ನದಂತ ಗಂಡ
ಮಕ್ಕಳಿಗೆ ದೇವರಂತ ಅಪ್ಪ
ಸಮಾಜಕ್ಕೆ ಬಂಗಾರದ ಮನುಷ್ಯ

ಸಮಾಜ ನಿನಗೆ ಹೀಗೂ ಐಡೆಂಟಿಟಿ ಕೊಡಬಹುದು ಎನ್ನುವುದು ಮರಿಬೇಡ....

ಬಾರ್ ಗೆ ನೀನೊಬ್ಬ ಕುಡುಕ
ಆಸ್ಪತ್ರೆಗೆ ನೀನೊಬ್ಬ ಪೇಶಂಟ್
ಸ್ಮಶಾನಕ್ಕೆ ನೀನೊಂದು ಹೆಣ
ಜೈಲ್ ಅಲ್ಲಿ‌ ನೀನೊಬ್ಬ ಕಳ್ಳ
ಅತ್ಯಾಚಾರ ಮಾಡಿದರೆ ಅತ್ಯಾಚಾರಿ
ಭ್ರಷ್ಟಾಚಾರ ಮಾಡಿದರೆ ಭ್ರಷ್ಟಾಚಾರಿ
ಹೆಂಡತಿಯನ್ನು ಹಿಂಸಿಸಿದರೆ ಪತ್ನಿ ಪೀಡಕ
ಮೋಸ ಮಾಡಿದರೆ ಮೋಸಗಾರ.....

ಹೇಗಿದ್ದರೂ ‌ಮಣ್ಣಲ್ಲಿ ಮಣ್ಣಾಗುತ್ತೀಯ.

ಮಣ್ಣಾಗುವ ಮುನ್ನ ನಿನ್ನ ಒಳ್ಳೆಯ ಐಡೆಂಟಿಟಿ ಉಳಿಸಿ ಮಣ್ಣಾಗು.

ಆಯ್ಕೆ ನಿನ್ನದು



Click below headings