ಕಳೆದ ರಮದಾನ್ ಈದ್ ರಜಾದಿನಗಳ ಒಂದು ವಾರದ ಅವಧಿಯಲ್ಲಿ ಒಮಾನ್ ನಲ್ಲಿ ವಿವಿದೆಡೆ ನಡೆದ ೨೩೪ ವಾಹನ ಅಪಘಾತದಲ್ಲಿ ಮೃತಪಟ್ಟವರು ೨೮ ಮಂದಿ ಹಾಗು ಗಾಯಾಳುಗಳು ೩೪೬ ಮಂದಿ ಎಂದು ರಾಯಲ್ ಪೋಲಿಸ್ ಆಫ್ ಒಮಾನ್ ವರದಿಯನ್ನು ಪ್ರಕಟಿಸಿದೆ. ಮೃತಪಟ್ಟವರಲ್ಲಿ ಒಮಾನಿಗಳು ಸೇರಿದಂತೆ ವಲಸೆಗಾರರು ಸಹ ಇದ್ದಾರೆ.
ಅತಿವೇಗ ಮತ್ತು ಅಜಾಗರುಕತೆ ಕಾರಣದಿಂದ ಬಹುತೇಕ ಅಪಘಾತಗಳು ಸಂಭವಿಸಲ್ಪಟ್ಟಿವೆ. ಮುನ್ನೆಚ್ಚರಿಕಾ ಕ್ರಮವಾಗಿ ROP ಕೈಗೊಂಡ ನಿರಂತರ ಸಂಚಾರ ಜಾಗೃತಿ ಅಭಿಯಾನದ ಭಾಗವಾಗಿ ಅಪಘಾತಗಳ ಸಂಖ್ಯೆ ಕಡಿಮೆ ಯಾಗಿದೆ ಕಳೆದ ವರ್ಷದ ಇದೇ ಸಮಯದಲ್ಲಿ ೩೦ ಜನ ಮೃತ ಪಟ್ಟಿದ್ದು ೩೯೪ ಜನ ಗಾಯಗೊಂಡಿದ್ದರು.
೨೫ ಲಕ್ಷ ಜನಸಂಖ್ಯೆ ಯಿರುವ ಇಡೀ ಒಮಾನಿನಲ್ಲಿ ಒಂದುವಾರದ ಅವಧಿಯಲ್ಲಿ ೨೩೪ ಅಪಘಾತಗಳು ನಡೆಯುವುದು ಸಾಮಾನ್ಯ ಮಾತಲ್ಲ.
ಇಲ್ಲಿನ ಹೆಚ್ಚಿನ ವಾಹನಗಳು ಆಟೋಮ್ಯಾಟಿಕ್ ಗೇರ್ ಟ್ರಾನ್ಸ್ಮಿಶನ್ ವ್ಯವಸ್ಥೆ ಯನ್ನು ಹೊಂದಿದ್ದು, ಗೇರ್ ಬದಲಾಯಿಸುವ ಪ್ರಸಂಗವೇ ಬರುವುದಿಲ್ಲ. ಆ ಕಾರಣದಿಂದ ಒಮ್ಮೆ ಆಕ್ಸಿಲರೇಟರ್ ಮೇಲೆ ಕಾಲಿಟ್ಟರೆ ರಸ್ತೆಯಲ್ಲಿ ಯಾವುದೇ ಅಡೆತಡೆಗಳು ಇಲ್ಲದೆ ಇದ್ದಲ್ಲಿ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸುವುದು ರೂಡಿಯಾಗಿಬಿಟ್ಟಿದೆ.
ಇತ್ತೀಚಿಗೆ ಸಲಾಲ ದಲ್ಲಿ ಒಬ್ಬ ಮಲೆಯಾಳಿ ತನ್ನ ಕುಟುಂಬ ಸಮೇತವಾಗಿ ರಸ್ತೆ ದಾಟುವಾಗ ಅತಿ ಹೆಚ್ಚು ವೇಗದಲ್ಲಿ ಬಂದ ವಾಹನ ಅವನಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೆ ಅವನು ಸಾವನಪ್ಪಿದ ಹಾಗು ಜತೆಯಲ್ಲಿದ ಮಕ್ಕಳು ಗಾಯಗೊಂಡರು. ಇಲ್ಲಿನ ಎಂಬಸಿ ಹಾಗು ಕೆಲ ಸಂಘಗಳ ಸಹಾಯದಿಂದ ೨-೩ ದಿನಗಳ ಅವಧಿಯಲ್ಲಿ ಮೃತ ದೇಹವನ್ನು ಕೇರಳಕ್ಕೆ ಸಾಗಿಸುವ ವ್ಯವಸ್ಥೆ ಮಾಡಲಾಯಿತು. ಕೆಲವೊಮ್ಮೆ ತನ್ನದಲ್ಲದ ತಪ್ಪಿಗಾಗಿ ಅಮಾಯಕರು ಜೀವ ತೆತ್ತ ಉದಾಹರಣೆಗಳಿವೆ.
ಸಲಾಲದ ಕರೀಫ್ ಸೀಸನ್ ನಲ್ಲಿ ಪಕ್ಕದ ಗಲ್ಫ್ ರಾಷ್ಟ್ರಗಳಿಂದ ಅತಿ ಹೆಚ್ಚಿನ ಪ್ರವಾಸಿಗರು ಸಲಾಲಕ್ಕೆ ಬರುತ್ತಾರೆ. ಈ ಸಮಯದಲ್ಲಿ ಹೆಚ್ಚಿನ ಅಪಘಾತ ಗಳಾಗುವುದು ಸಾಮಾನ್ಯ. ಒಮ್ಮೆ ಒಬ್ಬ ವಿದೇಶಿ ಪ್ರವಾಸಿಗ ಹೀಗೆ ಅತಿವೇಗವಾಗಿ ವಾಹನ ಚಲಾಯಿಸುವಾಗ ರಸ್ತೆಯ ಪಕ್ಕದಲ್ಲಿದ್ದ ಕ್ಯಾಮೆರ ವೊಂದು ವಾಹನದ ಫೋಟೊವನ್ನು ಸೆರೆ ಹಿಡಿಯಿತು. ಕೋಪಗೊಂಡ ಆ ವಾಹನದ ಚಾಲಕ ಮತ್ತೆ ವಾಪಾಸ್ಸು ಬಂದು ಆಕ್ಯಾಮೆರವನ್ನು ಪುಡಿ ಪುಡಿ ಮಾಡಿ ಹೋದ. ಸ್ವಲ್ಪ ತನ್ನ ವೇಗವನ್ನು ನಿಯಂತ್ರಿಸಿದಿದ್ದರೆ ಇಂತಹ ಕಷ್ಟ ಪಡುವ ಅವಸ್ಥೆಯೆ ಬರುತ್ತಿರಲಿಲ್ಲ.
ಹಳ್ಳಕೊಳ್ಳ ಉಬ್ಬು ತಗ್ಗು ಗಳಿಲ್ಲದ ರಸ್ತೆಯ ಮೇಲೆ ವಾಹನ ಚಲಾಯಿಸುವುದೆಂದರೆ ಎಂತಬ್ಬೊರಿಗೂ ಖುಶಿಯಲ್ವೆ. ಅತಿಯಾದ ವೇಗ ಅಪಘಾತಕ್ಕೆ ಕಾರಣ ಎನ್ನುವ ಸ್ಲೋಗನ್ ನಮ್ಮ ಕೆ.ಎಸ್.ಆರ್.ಟಿ.ಸಿ ಬಸ್ಸುಗಳಲ್ಲಿ ಹಾಗು ರಸ್ತೆಯ ಅಕ್ಕಪಕ್ಕದಲ್ಲಿಯು ಇಂತಹ ಸೂಚನಫಲಕ ವಿರುವುದನ್ನು ನೋಡಿರ್ತಿವಿ. ಕೊಲ್ಲಿ ರಾಷ್ಟ್ರಗಳಲ್ಲಿ ಅತ್ಯಂತ ಗುಣಮಟ್ಟದ ರಸ್ತೆ ಗಳಿದ್ದು, ಹೈಯ್ ವೇ, ರಿಂಗ್ ರಸ್ತೆ ಹಾಗೂ ಕೆಲ ಮುಖ್ಯ ರಸ್ತೆ ಗಳಲ್ಲಿ ೮೦-೧೦೦ಕ್ಕಿಂತ ಕಡಿಮೆ ವೇಗದಲ್ಲಿ ವಾಹನ ಚಲಾಯಿಸಿದರೆ ಟ್ರಾಫಿಕ್ ಜಾಮ್ ಗೆ ಅವಕಾಶ ಮಾಡಿಕೊಟ್ಟಂಗಾಗುತ್ತೆ ಎಂದು ಪ್ರತಿಯೊಬ್ಬರು ಅಂತಹ ವೇಗವನ್ನು ಕಾಯ್ದುಕೊಳ್ಳಲು ಪ್ರಯತ್ನಿಸುತ್ತಾರೆ. ಕೆಲವರು ತಮಗಿರುವ ಕೆಲಸದ ಅವಸರ ಕಾರಣವಾಗಿ ಅತಿ ವೇಗವಾಗಿ ಚಲಾಯಿಸಿದರೆ ಮತ್ತೆ ಕೆಲವರು ಮೋಜಿಗಾಗಿ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸುತ್ತಾರೆ.
ಕೆಲವು ಕಡೆ ಅತಿ ವೇಗವಾಗಿ ವಾಹನಚಲಾಯಿಸುವವರನ್ನು ನಿಯಂತ್ರಿಸಲು ರಾಡಾರ್ ನಿಯಂತ್ರಿತ ಕ್ಯಾಮೆರ ಅಳವಡಿಸಿದ್ದು ವೇಗದ ಮಿತಿ ದಾಟಿದ ವಾಹನಗಳ ಫೋಟೋಗಳನ್ನು ತೆಗೆದು ಮಾಹಿತಿ ಶೇಕರಣೆ ಕಾರ್ಯನಡೆಯುತ್ತದೆ. ತಿಂಗಳಿಗೊಂದು ಅಥವ ಹದಿನೈದು ದಿನಗಳಿಗೊಂದಾವರ್ತಿಯಂತೆ ಮಾಹಿತಿ ಹೊರತೆಗೆದು ನಿಯಮ ಉಲ್ಲಂಘಿಸಿದ ವಾಹನ ಮಾಲೀಕರಿಗೆ ದಂಡವನ್ನು ವಿಧಿಸುತ್ತಾರೆ.
ಸಾಮನ್ಯವಾಗಿ ರಸ್ತೆಯ ಮಧ್ಯೆ ಇಂತಹ ಕ್ಯಾಮೆರಗಳಿರುತ್ತವೆ. ದಿನನಿತ್ಯ ವಾಹನ ಚಲಾಯಿಸುತ್ತಿರುವವರಿಗೆ ಇವುಗಳ ಬಗ್ಗೆ ಗಮನವಿದ್ದು, ಒಂದುವೇಳೆ ನಿಗದಿ ಪಡಿಸಿದ ವೇಗಕ್ಕಿಂತ ಜಾಸ್ತಿಹೋಗುತಿದ್ದರೆ ಕ್ಯಾಮೆರ ಸಮೀಪಿಸುತಿದ್ದಂತೆ ತಮ್ಮ ವೇಗವನ್ನು ನಿಯಂತ್ರಿಸುತ್ತಾರೆ. ಕ್ಯಾಮೆರವನ್ನು ದಾಟಿದ ನಂತರ ಮತ್ತೆ ಮೊದಲಿನ ಸ್ಪೀಡಿಗೆ ಹಿಂತಿರುಗುತ್ತಾರೆ. ತುಂಬಾ ಚೆನ್ನಾಗಿರುವ ರಸ್ತೆಗಳಲ್ಲಿ ೧೬೦ಕ್ಕಿಂತ ಹೆಚ್ಚಿನ ವೇಗದಲ್ಲಿ ವಾಹನಚಲಾಯಿಸುವುದು ಸರ್ವೇ ಸಾಮನ್ಯ.
ಏನೆ ಆಗಲಿ ನಮ್ಮ ಜಾಗ್ರತೆ ಯಲ್ಲಿ ನಾವಿದ್ದು ರಸ್ತೆಯಲ್ಲಿ ಗಮನವಿಟ್ಟು ವಾಹನ ಚಲಾಯಿಸಿ ನಮ್ಮ ಹಾಗು ಬೇರೆಯವರ ಸುರಕ್ಷತೆಗೆ ಜವಬ್ದಾರರಾಗಬೇಕು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ