(ಒಮಾನ್ ದೇಶದಲ್ಲಿನ ಸಲಾಲ ಪ್ರಾಂತ್ಯ)
ದರ್ಬಾತ್ ನದಿ ಹರಿಯುತ್ತಿರುವ ಸುಂದರ ದೃಶ್ಯ,ಜಲಪಾತದ ಇಕ್ಕೆಲಗಳಲ್ಲಿ ಜನಸಂದಣಿ. ತಂಪಾದ ಹವೆ ಯನ್ನು ಸವಿಯಲು ನಾಮುಂದು ನೀ ಮುಂದು ಎಂದು ಹರಿದು ಬರುತಿತ್ತು ಜನಸಾಗರ
ಮರಳುಗಾಡಿನಲ್ಲಿ ಹಸಿರು,ಜಲಪಾತ,ನದಿಗಳು ಹಾಗು ಪ್ರಾಣಿ ಪಕ್ಷಿಗಳನ್ನು ಕಾಣುವುದು ಬಹಳ ಕಡಿಮೆ ಆದರೆ ಒಮಾನ್ ದೇಶದ ಧೋಫಾರ್ ಪ್ರಾಂತ್ಯದಲ್ಲಿನ ಸಲಾಲ ಸುತ್ತಮುತ್ತಲಿನ ಪ್ರದೇಶ ಇದಕ್ಕೆ ತದ್ವಿರುದ್ದ,ಇಲ್ಲೂ ಸಹ ಮಾನವನಿರ್ಮಿತ ಹಾಗು ಪ್ರಕೃತಿ ನಿರ್ಮಿತ ಉದ್ಯಾನವನಗಳಿವೆ, ಜತೆಗೆ ಸಣ್ಣ ಪುಟ್ಟ ಜಲಪಾತಗಳು,ಸರೋವರಗಳು ನಮಗೆ ಕಾಣಸಿಗತ್ತವೆ.
ಅರಬ್ಬಿ ಭಾಷೆಯಲ್ಲಿ ವಾದಿ ಎಂದರೆ ಕಣಿವೆ ಪ್ರದೇಶ ಅಥವ ನದಿ ಪ್ರದೇಶ, ಹೆಚ್ಚು ಮಳೆ ಬಂದಾಗ ನೀರು ಹರಿಯುವ ಕಣಿವೆ ಪ್ರದೇಶವನ್ನು ವಾದಿ ಎಂದು ಕರೆಯುತ್ತಾರೆ. ಒಮಾನ್ ದೇಶದಲ್ಲಿ ಇಂತಹ ನೂರಾರು ವಾದಿಗಳಿವೆ,ಅತಿ ಹೆಚ್ಚು ಮಳೆ ಬಂದಾಗ ಈ ವಾದಿಗಳಲ್ಲಿ ನೀರು ಹರಿಯುತ್ತದೆ.ಇಂತಹ ಕೆಲ ವಾದಿಗಳು ಕೆಲ ಪ್ರದೇಶಗಳಲ್ಲಿ ಜಲಪಾತಗಳನ್ನು ಸೃಷ್ಟಿ ಮಾಡುತ್ತವೆ. ಅಂತಹ ಪ್ರಕೃತಿ ನಿರ್ಮಿತ ಈ ಜಲಪಾತದ ಹೆಸರು ವಾದಿ ದರ್ಬಾತ್.
ವಾದಿ ದರ್ಬಾತ್ ಒಮಾನ್ ದೇಶದ ಧೋಫಾರ್ ಪ್ರಾಂತ್ಯದಲ್ಲಿರುವ ಪ್ರದೇಶ."ಸಲಾಲ"ದಿಂದ ೫೦ಕಿಮಿ ದೂರದಲ್ಲಿದ್ದು"ತಾಖ"ಪಟ್ಟಣ ದಿಂದ"ಮಿರ್ಬಾತ್" ಪಟ್ಟಣ ಕಡೆ ಹೋಗುವ ರಸ್ತೆ ಯಲ್ಲಿ ಎಡಗಡೆ ವಾದಿ ದರ್ಬಾತ್ ಸಿಗುತ್ತದೆ."ತಾಖ"ಪಟ್ಟಣದಿಂದ ಸುಮಾರು ೭ಕಿ.ಮಿ ದೂರದ ರಸ್ತೆಯಲ್ಲಿ ಕ್ರಮಿಸಿದರೆ ರಸ್ತೆಯ ಎಡಬದಿ ಯಲ್ಲಿ ಈ ಜಲಪಾತ ವನ್ನು ಕಾಣ ಬಹುದು.
ಈ ಜಲಪಾತದಲ್ಲಿ ಯಾವಗಲೂ ನೀರು ಹರಿಯುವುದಿಲ್ಲ,ಆದರೆ ಧೋಫಾರ್ ಬೆಟ್ಟ ಗುಡ್ಡಗಳಲ್ಲಿ ಅತಿ ಹೆಚ್ಚು ಮಳೆಯಾದಾಗ ಇಲ್ಲಿ ನಾವು ನೀರನ್ನು ಕಾಣಬಹುದು.ಸಾಮನ್ಯವಾಗಿ ಮಳೆಗಾಲ ವೆಂದರೆ ಇಲ್ಲಿ ಕರಿಯಲ್ಪಡುವ"ಕರೀಫ್ ಸೀಸನ್" ನಲ್ಲಿ ಮಾತ್ರ ಸ್ವಲ್ಪ ಜಾಸ್ತಿ ಮಳೆಯಾಗುತ್ತದೆ ಆ ಸಮಯದಲ್ಲಿ ಮಾತ್ರ ಕೆಲದಿನಗಳ ಮಟ್ಟಿಗೆ,ಮಳೆ ಬಂದಾಗ ನಾವು ಈ ಜಲಪಾತವನ್ನು ಕಾಣಬಹುದು. ಅಂದಾಜು ನೂರು ಮೀಟರ್ ಉದ್ದ ವಿರುವ ಈ ಜಲಪಾತ ನಾಲ್ಕೈದು ಕವಲಾಗಿ ಒಡೆದು ನೀರು ಕೆಳಗೆ ಬೀಳುತ್ತದೆ.ಕಡಿದಾದ ಬಂಡೆಯನ್ನು ಸುತ್ತುವರಿದಿರುವ ಹಚ್ಚ ಹಸಿರು ಮರಗಿಡಗಳ ನಡುವೆ ಬಾಗಿ ಬಳುಕುತ್ತಾ ಧುಮುಕುವುದನ್ನು ನೋಡುವುದೇ ಒಂದು ರೋಮಾಂಚಕ ಅನುಭವ.ನೀರು ಬಂಡೆಗೆ ತಾಗಿ ಮುತ್ತು ಚೆಲ್ಲಿದಂತೆ ಚದುರಿ ಬೀಳುತ್ತಿರುವ ಸುಂದರ ನೋಟ.ಎಷ್ಟೊಂದು ಜಲಧಾರೆಗಳು ಅದನ್ನು ನೋಡಿಯೇ ಸೌಂದರ್ಯವನ್ನು ಸವಿಯಬೇಕು. ಈ ವಾದಿ ದರ್ಬಾತ್ ಪೂರ್ವಾಭಿಮುಖವಾಗಿ ಹರಿದು ಅರಬ್ಬಿ ಸಮುದ್ರ ವನ್ನು ಸೇರುತ್ತದೆ
ಇಡೀ ಒಮಾನ್ ನಲ್ಲಿ ಇತ್ತೀಚೆಗೆ ನವೆಂಬರ್ ಮಾಸದಲ್ಲಿ ೨,೩ಮತ್ತು೪ನೇ ತಾರಿಖು ರಂದು ಅತಿ ಹೆಚ್ಚಿನ ಮಳೆಯಾಯಿತು ಆಗ ಬಹುತೇಕ ಎಲ್ಲ ವಾದಿಗಳು ತುಂಬಿ ಹರಿದು ಜನಸಾಮಾನ್ಯರಿಗೆ ಅತಿ ಹೆಚ್ಚೆನ ನಷ್ಟ ಉಂಟಾಯಿತು.ಆದರೆ ಸಲಾಲ ಸುತ್ತ ಮುತ್ತಲಿನ ಮಳೆಯಾದಾಗ ವಾದಿ ದರ್ಬಾತ್ ಅತಿ ಸುಂದರ ಜಲಪಾತ ಕ್ಕೆ ಸಾಕ್ಷಿಯಾಯಿತು.೨ಮತ್ತು ೩ನೇತಾರಿಖಿನಂದು ನೀರು ಹರಿಯುವುದಕ್ಕೆ ಶುರುವಾದಾಗಿನಿಂದ ಪ್ರತಿಯೊಬ್ಬರು ತಮ್ಮ ತಮ್ಮ ಸ್ನೇಹಿತರಿಗೆ ಕರೆ ಮಾಡಿ ಜಲಪಾತ ನೋಡುವುದಕ್ಕೆ ತಿಳಿಸಿದರು.ರಾಷ್ಟ್ರೀಯ ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿಯಾದಾಗಿನಿಂದ ಮಸ್ಕತ್,ಸುರ್,ಸೋಹಾರ್,ನಿಜ್ವ ಮತ್ತು ಬರ್ಕಾ ಮುಂತಾದ ಪ್ರದೇಶಗಳಿಂದ ಜನರು ಸಾಲು ಸಾಲಾಗಿ ಬಂದರು.ಮರಳುಗಾಡಿನ ಬಿಸಿಲಿಗೆ ಬೆಂದು ಹೋಗಿದ್ದ ಜನತೆ ಬದಲಾದ ಹವಮಾನದ ಕಂಪನ್ನು ಸವಿಯಲು ಮಳೆ ಬೀಳುತಿದ್ದರು ಲೆಕ್ಕಿಸದೆ ಈ ಸುಂದರ ದೃಶ್ಯವನ್ನು ನೋಡಿದರು.
ಸುಮಾರು ಅರ್ಧ ಕಿ.ಮಿ.ದೂರದಿಂದ ಕಾಣ ಸಿಗುವ ಜಲಪಾತದ ರಮಣೀಯ ದೃಶ್ಯ, ಮುಖ್ಯರಸ್ತೆಯಿಂದಲೇ ದಾರಿಹೋಕರನ್ನು ಕರೆಯುವ ನಯನ ಮನೋಹರ ದೃಶ್ಯ
ಜಲಪಾತದ ಎಡಗಡೆಯ ಸುಂದರ ದೃಶ್ಯ
ಜಲಪಾತದ ಬಲಗಡೆಯ ಸುಂದರ ದೃಶ್ಯ
ಬಲಗಡೆಯಿಂದ ಧುಮ್ಮಿಕ್ಕಿ ಹರಿಯುವ ದರ್ಬಾತ್ ನದಿಯ ಮೊದಲ ಕವಲು
ಬಲಗಡೆಯಿಂದ ಧುಮ್ಮಿಕ್ಕಿ ಹರಿಯುವ ದರ್ಬಾತ್ ನದಿಯ ಎರಡನೇ ಕವಲು
ಮೈದುಂಬಿ ಹರಿಯುತ್ತಿರುವ ದರ್ಬಾತ್ ಜಲಪಾತ,ಸುಂದರ ದೃಶ್ಯವನ್ನು ಸವಿಯಲು ಬೆಟ್ಟದ ಕೆಳಗಡೆ ವಾಹನ ಸಮೇತರಾಗಿ ಕುಳಿತಿರುವ ಜನರು.ದರ್ಬಾತ್ ನದಿ ಹರಿಯುತ್ತಿರುವ ಸುಂದರ ದೃಶ್ಯ,ಜಲಪಾತದ ಇಕ್ಕೆಲಗಳಲ್ಲಿ ಜನಸಂದಣಿ. ತಂಪಾದ ಹವೆ ಯನ್ನು ಸವಿಯಲು ನಾಮುಂದು ನೀ ಮುಂದು ಎಂದು ಹರಿದು ಬರುತಿತ್ತು ಜನಸಾಗರ
ಶಾಂತವಾಗಿ ಹರಿಯುತ್ತಿರುವ ದರ್ಬಾತ್ ನದಿ , ದೃಶ್ಯ-೧
ಶಾಂತವಾಗಿ ಹರಿಯುತ್ತಿರುವ ದರ್ಬಾತ್ ನದಿ , ದೃಶ್ಯ-೨
ಕಾರ್ಮುಗಿಲು ನಿಂದ ಆವರಿಸಿರುವ ಹತ್ತಿರದಲ್ಲಿರುವ ಅರಬ್ಬಿ ಸಮುದ್ರ,
ಸಮುದ್ರ ತೀರದಲ್ಲಿರುವ ಕೊರೆತಕ್ಕೊಳಗಾದ ಬಂಡೆಗಲ್ಲುಗಳು
ಧರೆಗೆ ಇಣುಕುತ್ತಿರುವ ಸೂರ್ಯ ರಶ್ಮಿ ಯನ್ನು ಬಿಡದೆ ಆಕಾಶವನ್ನು ಆವರಿಸಿದ ಕಾರ್ಮುಗಿಲು.
ಸಮುದ್ರಕ್ಕೆ ಅಭಿಮುಖವಾಗಿರುವ ಬೆಟ್ಟದಸಾಲಿಗೆ ಮೋಡಗಳ ಚುಂಬನ.
ದರ್ಬಾತ್ ನದಿಯು ಜಲಪಾತ ವಾಗಿ ಧುಮ್ಮಿಕ್ಕುವ ಮುಂಚೆ ಚಿಕ್ಕ ಚಿಕ್ಕ ತೊರೆಗಳಾಗಿ ಹರಿದು, ಕಿರು ಜಲಪಾತವಾಗಿ ಕಾಣುವ ಸುಂದರ ದೃಶ್ಯಾವಳಿ
ಮೇಲಿನ ದೃಶ್ಯದ ನಂತರ ಮಂದ ಸ್ಮಿತವಾಗಿ ಹರಿಯುತ್ತಿರುವ ದರ್ಬಾತ್ ನದಿ
ಪ್ರಶಾಂತವಾಗಿ ಹರಿದು ಪ್ರಪಾತಕ್ಕೆ ಕೆಳಗೆ ಬೀಳುತ್ತಿರುವ ಮುಂಚಿನ ಕಟ್ಟ ಕಡೆಯ ಸ್ಥಳ.
ಜಲಪಾತ ವನ್ನು ವೀಕ್ಷಿಸಿದ ನಂತರ ಮನೆಗೆ ಹೊರಡುವಾಗ ಸಾಲುಗಟ್ಟಿದ ವಾಹನಗಳು.