ಮಂಗಳವಾರ, ಫೆಬ್ರವರಿ 18, 2014

ಒಮಾನ್”: ಸಲಾಲ್ಹ “ಸ್ನೇಹ ಸಮ್ಮಿಲನ – ೨೦೧೪”

ಸಲಾಲ್ಹ ಭಾರತೀಯ ಸಾಮಾಜಿಕ ವೇದಿಕೆ – ಕರ್ನಾಟಕ ವಿಭಾಗದ ವತಿಯಿಂದ ೧೪ ಫೆಬ್ರವರಿ ೨೦೧೪ ರಂದು ಸಲಾಲ್ಹ ದಲ್ಲಿ ಸ್ನೇಹ ಸಮ್ಮಿಲನ-೨೦೧೪ ಕಾರ್ಯಕ್ರಮ ನಡೆಯಿತು. ಕರ್ನಾಟಕದಲ್ಲಿ ವಿವಿಧ ಸಂಸ್ಕೃತಿ, ಆಚರಣೆ, ವಿಚಾರ ಹಾಗೂ ಕನ್ನಡ ಮಾತನಾಡುವ ವಿವಿಧ ರೀತಿಯ ಶೈಲಿ ಯಿದ್ದು, ಇವೆಲ್ಲವನ್ನೂ ಸ್ವಲ್ಪ ಮಟ್ಟಿಗೆ ಪರಿಚಯಿಸುವ ಉದ್ದೇಶದಿಂದ ವಿವಿಧ ಪ್ರಾಂತ್ಯಗಳ ಸಂಸ್ಕೃತಿ ವಿನಿಮಯ ಎನ್ನುವ ಘೋಷವಾಕ್ಯ ದೊಂದಿಗೆ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬಂತು.
ಬಾರಿಸು ಕನ್ನಡ ಡಿಂಡಿಮ ಕನ್ನಡ ಗೀತೆಯನ್ನು ಹಾಡಿ ಕನ್ನಡಿಗರಲ್ಲಿ ಕನ್ನಡ ಅಭಿಮಾನವನ್ನು ಎತ್ತಿ ಹಿಡಿದು, ನಮ್ಮೂರ ಜಾತ್ರೆ, ಮೆಹಂದಿ ಕಾರ್ಯಕ್ರಮ ಮತ್ತು ತುಳುನಾಡ ಸಿರಿ ವೈಭವ ಎನ್ನುವ ಮೂರು ಬಗೆಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರೂ ಸ್ಥಳೀಯ ಪ್ರತಿಭೆಗಳಾಗಿದ್ದು, ಕೆಲವರು ಇದೇ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು ವಿಶೇಷ ವಾಗಿತ್ತು.

ನಮ್ಮೂರ ಜಾತ್ರೆ ಯಡಿಯಲ್ಲಿ, ಗೀಯ ಗೀಯ ಗೀಗೀ ಪದ, ಬುಡು ಬುಡೂಕೆ, ಕೊರವಂಜಿ,ಮಕ್ಕಳ ನರ್ತಿಸಿದ ಕೋಡಗನ ಕೋಳಿ ನುಂಗಿತ್ತ ಹಾಡು, ಮಹಿಳೆಯರಿಂದ ಭಾಗ್ಯದ ಬಳೆಗಾರ ಹಾಡಿಗೆ ನೃತ್ಯ, ಹಿತವಚನ, ಡೊಳ್ಳು ಕುಣಿತ, ಮತ್ತು ಕನ್ನಡಾಂಬೆ ರಥೋತ್ಸವ ನಡೆಯಿತು.

 ತುಳುನಾಡ ಸಿರಿ ವೈಭವ ಯಡಿಯಲ್ಲಿ, ನಾಟಿ ಬೆಲೆ, ಆಟಿ ಕಳಿಂಜ, ಮಹಿಳೆಯರಿಂದ ನೃತ್ಯ, ಕಂಗಿಲ್ ನೃತ್ಯ, ಹುಲಿ ವೇಶ, ಕೋಲಿ ಕಟ್ಟ, ಭೂತ ಕೋಲ, ಕಂಬಳ, ಯಕ್ಷಗಾನ ನಡೆಯಿತು.

ಸತತವಾಗಿ  ಕಳೆದ ಎರಡು ತಿಂಗಳುಗಳಿಂದ ಅಭ್ಯಾಸ, ತಯಾರಿ ಮತ್ತು ಎಲ್ಲರ ಪರಿಶ್ರಮ ದಿಂದ ಕಾರ್ಯಕ್ರಮ ತುಂಬಾ ಸೊಗಸಾಗಿ ಮೂಡಿ ಬಂತು. ಕಾರ್ಯಕ್ರಮ ವೀಕ್ಷಿಸಿದ ಎಲ್ಲರ ಬಾಯಿ ಯಲ್ಲೂ ಮೆಚ್ಚುಗೆ ಕೇಳಿ ಬಂತು. ಸಭಾಂಗಣದಲ್ಲಿ  ಪದೇ ಪದೇ ಕೇಳಿಬರುತಿದ್ದ ಪ್ರೇಕ್ಷಕರ ಶಿಳ್ಳೆ ಮತ್ತು ಕರ ತಾಡನ, ಕಾರ್ಯಕ್ರಮ ಯಶಸ್ವಿ ಯಾಗಿದ್ದಕ್ಕೆ ಸಾಕ್ಷಿಯಾಗಿತ್ತು.

ಮೆಹಂದಿ ಕಾರ್ಯಕ್ರಮ ನಡೆಸಿಕೊಟ್ಟವರು:
Ms. Sameena , Mr Shakeel   , Mr Mushtari , Ms Nishmi, Ms Radhika kamat , Mr. Saman  , Mr  Ayaan
Mr. Shahid, Mr Mubashir, Mr Saad, Mr Ananya, Mr Shaima, Mr Shaifa, Mr Araf , Mr Shaan, Mr sumayya, Mr Sharik, Mr Afra, Mr safwa, Mr Shahdin, Mr Mysha, Mr Rayan, Mr  Arfan
ಯಕ್ಷಗಾನ ತಂಡ
Shumbhasura – Mr. Nagesh Shettigar Shettigadu
Devendra – Mr. Gundu Moily
Vayu – Mr. Umesh Shettigar Umesh
Varuna – Ms. Usha Umesh
Deva Dootha – Ms. Seeth Shettigar
Bhagavatharu – Mr. Ganapathi Shettigar
Chende – Mr. Prabhakar Prabhu
Mrudanga – Mr. Ashwin Raj
Harmonium – Mr. Thukaram Shettigar
Chakrathala – Mr. Santhosh Devadiga
Make Up & Costumes – Mr. Shekar Shettigar - Yaksha Mithra Ru Dubai....
Nruthya Training – Ms. Usha Umesh Shettigar
Parikalpane-Nirmana-Nirdeshana – Mr. Nagesh Shettigar
Prayojakaru – Mr. Ramesh Poojary, Mr. Santosh Shetty, Mr. Baiju & Mr. Nagesh Shettigar

ಬಾರಿಸು ಕನ್ನಡ ಡಿಂಡಿಮ ಹಾಡು,
Ms. Uma Kulkarni, Mr. Dinesh Kulkarni, Mr. Girish Kulkarni, Mrs. Shobha Maiya, Mr. H S Subramanya
Mrs. Sumana
ನಮ್ಮೂರ ಜಾತ್ರೆ:
Mr. Girish Kulkarni, Ms. Gouri Kulkarni, Mst. Goutam Kulkarni, Mr. Raghavendra Maiya, Ms. Shobha Maiya, Mst. Tushar Maiya, Mr. Kiran Bannur, Ms. Roopa Bannur, Mst. Krishna Bannur, Mr. Ravikumar patil, Ms. Vijaylaxmi Patil, Mr. Vijay Kumbhar, Ms. Suvarna Kumbhar, Mr. Dinesh Kulkarni, Ms. Uma Kulkarni, Mst. Vishnu Kulkarni, Mr. Premkumar , Mr. Santosh patil, Ms. Gayatri Patil, Mr. Shirish Jawalkar, Ms. Shwetpriya Jawalkar , Mr. Suresh , Ms. Roopa, Ms. Suchitra Nayak, Mst. Sanketa Nayak, Mr. Amit Harogoppad, Ms. Aishwarya Harogoppad, Mr. Sanjay Munoli, Mr. Subramanya, Ms. Suman, Mr. P R Kamat
ಗೀಯ ಗೀಯ ಪದ:
Performance by: Ms Gouri Kulkarni, Ms Vijaylaxmi Patil, Ms Gayatri Patil, Mr Girish Kulkarni, Mr Ravikumar Patil, Mr  Dinesh Kulkarni
ಬುಡು ಬುಡುಕೆ:
Performance by: Mr Santosh Patil, Mr Kiran Bannur
ಕೊರವಂಜಿ:
Performance by: Ms. Gouri Kulkarni, Ms. Roopa Suresh, Mr. Ravikumar Patil
ಚಿಣ್ಣರ ನೃತ್ಯ – ಕೋಡಗನ ಕೋಳಿ ನುಂಗಿತ್ತ:
Performance by: Mst Gautam Kulkarni, Mst Vishnu Kulkarni, Mst Thushar Maiya, Mst Sanketh Shenoy, Mst Abhay Bannur, Ms Ananya
ಮಹಿಳೆಯರ ನೃತ್ಯ:
Performance by: Mr Amit Harogoppad, Ms Aishwarya Harogoppad, Ms Uma kulkarni, Ms Gouri Kulkarni, Ms Suvarna Kumbhar, Ms Roopa Bannur, Ms Suchitra Nayak, Ms Shwetpriya Jawalkar
ಡೊಳ್ಳು ಕುಣಿತ:
Performance by: Mr Suresh, Mr Prem Kumar, Mr Sanjay Munoli, Mr Santosh Patil, Mr Vijay Kumbhar, Mr Shirish jawalkar, Mr Dinesh Kulkarni

Natibhele, Aaati Khalenja, ladies Dance and Kangil Dance
Performance by: 1.Mr Ramesh Poojary, 2. Mr.Baiju, 3.Mr Mahesh , 4.Mast.Rajath Ramesh, 5.Mr Krishna
6.Mrs. Jyothi Ramesh, 7.Mrs.Veena Rohit, 8.Mrs Nandini Jagadhish, 9.Mrs.Pratima Sudhir, 10 Mrs Anusuya Nagesh, 11. Ms. Sudeshna Prabu, 12. Mr. Sudhir Puthran, 13.Mr. Ragavendra Maiya, 14.Mr Narsihma Rao, 15.Mr Jeetendra 16.Mr Joyal Almieda

ಹುಲಿವೇಷ:
Performance by: 1 Mr.Kaushik Attavar, 2 Mr.Ganapathi Shettigar, 3. Mr Prabhakar Prabu, 4.Mr Ashwin, 5.Mr Santhosh Devadiga, 6.Mr Dhanraj, 7. Mr Raghu, 8. Mast Yashwin Umesh, 9. Mast Neil Nagesh
ಕೋಳಿ ಕಟ್ಟ:
Performance by: Mr Krishna,  Mr Sathish, Mr.Sudhir Puthran, Mr.Narsihma Rao, Mr Jitendra, Mr.Baiju Mr. Harish Kulal



















































ಶುಕ್ರವಾರ, ಫೆಬ್ರವರಿ 7, 2014

ಚಂದ್ರನ ಒಂದು ತುಂಡು ಇಲ್ಲಿ ಬಿದ್ದಿತಂತೆ !!!

ಚಂದ್ರನ ಒಂದು ತುಂಡು ಇಲ್ಲಿ ಬಿದ್ದಿತಂತೆ.



 ಒಮಾನ್ ನಲ್ಲಿ ನಿಸರ್ಗ ನಿರ್ಮಿತ ಪ್ರವಾಸಿ ತಾಣಗಳಿಗೆ ಕೊರತೆ ಏನು ಇಲ್ಲ. ಪಕ್ಕದ ದುಬೈ ನಲ್ಲಿ ಮಾನವನಿರ್ಮಿತ ಪ್ರವಾಸಿ ತಾಣಗಳಿದ್ದರೆ, ಒಮಾನ್ ನಲ್ಲಿ  ನೋಡೋದಿಕ್ಕೆ ನೈಸರ್ಗಿಕ ನಿರ್ಮಿತ ಹಲವಾರು ಪ್ರದೇಶಗಳು ಇವೆ. ಇವುಗಳಲ್ಲಿ ಬಹು ಪ್ರಸಿದ್ದ ವಾದ ಒಂದು ತಾಣ "ಬಿಮ್ಮ ಸಿಂಕ್ ಹೋಲ್". ಮಸ್ಕತ್ ನಿಂದ ಸೂರ್ ರಸ್ತೆಯಲ್ಲಿ ಕುರಿಯತ್ ಮಾರ್ಗವಾಗಿ ಸುಮಾರು ೧೩೦ ಕಿ.ಮಿ. ದೂರ ಪ್ರಯಾಣಿಸಿದರೆ, "ಬಿಮ್ಮ ಸಿಂಕ್ ಹೋಲ್" ಸೂಚನಾ ಫಲಕ ಕಾಣಿಸುತ್ತೆ, ಆ ಮಾರ್ಗವಾಗಿ ಸಂಚರಿಸಿದರೆ ದಿಬಾಬ್ ಮತ್ತು ಹವಿಯತ್ ನಜ್ಮ್ ಪಾರ್ಕ್ ಸೂಚನಾ ಫಲಕ ಕಾಣಿಸುತ್ತೆ.
ಪಾರ್ಕ್ ಒಳಗೆ ಸ್ವಲ್ಪ ನಡೆದು ಹೋದರೆ ಸುತ್ತಲೂ ಸಮತಟ್ಟವಾದ ಭೂಮಿ ಅದರ ಮಧ್ಯದಲ್ಲಿ ದೊಡ್ಡ ಬಾವಿಯ ಹಾಗೆ ಕಾಣಿಸುವ ಸುಮಾರು ೪೦ ಮೀಟರ್ ಅಗಲ ಮತ್ತು ೨೦ ಮೀಟರ್ ಆಳ ವಿರುವ ಅತಿ ಸುಂದರ ಆಳವಾದ ನೀರಿನ ಹೊಂಡ ಕಾಣಿಸುತ್ತೆ. ನೀಲಿ ಬಣ್ಣದ ನೀರು, ಸ್ವಲ್ಪ ಹಸಿರು ಮಿಶ್ರಿತ ಹಾಗೂ ಕಡು ನೀಲಿ ಪದರ ದಂತೆ ಕಾಣುವ ನೀರು ಬಹಳ ಆಕರ್ಷಕ ವಾಗಿದೆ. ಗಲ್ಫ್ ಕಡಲ ತೀರದಿಂದ ಸುಮೂರು ೫೦೦ ಮೀಟರ್ ದೂರದಲ್ಲಿ ರುವುದರಿಂದ, ಸಮುದ್ರದ ಉಪ್ಪು ನೀರು ಹಾಗು ಅಂತರ್ಜಲ ಎರಡು ಮಿಶ್ರಿತ ವಾಗಿರುವುದರಿಂದ ನೀರು ತುಂಬಾ ಆಕರ್ಷಕ ಬಣ್ಣ ದಲ್ಲಿ ಕಾಣುತ್ತೆ.




ಜನ ಈ ನೀರಿನಲ್ಲಿ ಈಜಿ ಆಟವಾಡುತ್ತಾರೆ, ಕೆಲವರು ನೀರಿನಲ್ಲಿ ಕಾಲಿಟ್ಟು ಸಣ್ಣ ಸಣ್ಣ ಮೀನಿನಿಂದ ಕಾಲ್ಬೆರಳುಗಳನ್ನು ಕಚ್ಚಿಸಿಕೊಳ್ಳುತ್ತಾರೆ, ಇದು ಒಂಥರಾ ದುಡ್ಡು ಕೊಡದೆ ಫಿಶ್ ತೆರಪಿ ಮಾಡಿಸಿ ಕೊಂಡ ಹಾಗಿರುತ್ತೆ.

ಸಿಂಕ್ ಹೋಲ್ ನ ಒಳಗೆ ಇಳಿಯಲು ಮೆಟ್ಟಿಲುಗಳನ್ನು ಮಾಡಲಾಗಿದೆ, ಮೇಲೆ ಸುರಕ್ಷೆ ಗಾಗಿ ೪ ಅಡಿಯ ರಕ್ಷಣಾ ಗೋಡೆ ಯಿದೆ. ಸುಸಜ್ಜಿತ  ಶೌಚಾಲಯ ಸಹಿತ ಉದ್ಯಾನವನ, ಹತ್ತಿರದಲ್ಲಿ ಸುಂದರ ಸಮುದ್ರ ತೀರ, ಒಟ್ಟಿನಲ್ಲಿ ಸುಂದರ ಸಂಜೆ ಕಳೆಯಲು ಹೇಳಿ ಮಾಡಿಸಿದ ಜಾಗವಿದು.
ಬಹುತೇಕ ವಿದೇಶಿ ಪ್ರವಾಸಿಗರು ಅದರಲ್ಲೂ ಯುರೋಪಿಯನ್ನರು ಇಲ್ಲಿಗೆ ಅತಿ ಹೆಚ್ಚು ಭೇಟಿ ಕೊಡುತ್ತಾರೆ, ಇಲ್ಲಿನ ನಗರ ಪಾಲಿಕೆ ಯವರು ಒಂದು ವಿಹಾರಕ್ಕಾಗಿ ಉದ್ಯಾನ ಮಾಡಿದ್ದಾರೆ, ಒಮಾನಿಗಳು ಇಲ್ಲಿ ಬಾರ್ಬೆಕ್ಯೂ ಮಾಡಿ ಸಮಯಕಳೆಯುತ್ತಾರೆ.  ವಾರ ಪೂರ್ತಿ ಕೆಲಸದ ದಣಿವನ್ನು ನಿವಾರಿಸುಕೊಳ್ಳುವುದಕ್ಕೆ ಒಂದು ದಿನದ ಹೊರ ಸಂಚಾರವನ್ನು ಯೋಜಿಸಿದಲ್ಲಿ,  ಹತ್ತಿರದಲ್ಲಿ ವಾದಿ ಶಾಬ್, ವಾದಿ ತಿವಿ ಸ್ಥಳಗಳಿದ್ದು, ಮಾರ್ಗ ಮಧ್ಯದಲ್ಲಿ ಸಿಂಕ್ ಹೋಲ್ ಗೆ ಬೇಟಿ ನೀಡುವ ಯೋಜನೆ ಹಾಕಿ ಕೊಂಡರೆ ಒಂದು ದಿನದ ಪ್ರವಾಸ ಮನಕ್ಕೆ ಮುದ ನೀಡುವುದರಲ್ಲಿ ಸಂಶಯವಿಲ್ಲ.

ಗೂಗಲ್ ಮ್ಯಾಪ್ ನಿಂದ ಕಾಣುವ ಚಿತ್ರಣ

ಸ್ಥಳೀಯರ ಪ್ರಕಾರ ಉಲ್ಕೆಯೊಂದು ಬಿದ್ದು ಇಂತಹ ದೊಡ್ಡ ಹೊಂಡ ವಾಗಿದೆ ಎಂದುಹೇಳುತ್ತಾರೆ, ಕೆಲವರು ಚಂದ್ರನ ಒಂದು ತುಂಡು ಬಿದ್ದು ಹೀಗೆ ಆಗಿದೆ ಎನ್ನುತ್ತಾರೆ ಆದರೆ ಭೂಗರ್ಭ ಶಾಸ್ತ್ರಜ್ನರ ಪ್ರಕಾರ ಇಲ್ಲಿರುವ ಅತಿ ಹೆಚ್ಚು ಸುಣ್ಣದಕಲ್ಲು ಗಳು ಸವೆದು ಸವೆದು ನೆಲದ ಪದರ ಜರುಗಿ ಭೂಮಿ ಕುಸಿದಿರಬಹುದೆಂದು ಅಂದಾಜಿಸಿದ್ದಾರೆ.

ಭೂಗರ್ಭ ಶಾಸ್ತ್ರಜ್ನರ ಪ್ರಕಾರ ಸಿಂಕ್ ಹೋಲ್ ಗಳು ರೂಪು ಗೊಳ್ಳುವುದು ಹೀಗೆ,
 

10 Of The Largest Sinkholes In The World
1. Qattara Depression, West of Cairo, Egypt
2. Berezniki, Russia
3. Guatemala City (2007)
5. Texas Devil’s Sinkhole
6. Sarisarinama Sinkholes, Venezuela
7. Bimmah sinkhole, Oman
8. Agrico Gypsum Stack, Florida
9. Macungie Sinkhole, Pennsylvania
10. Daisetta Sinkhole, Texas

ಪ್ರಪಂಚದ ಕೆಲವೇ ಕೆಲವು ಇಂತಹ ಸಿಂಕ್ ಹೋಲ್ ಗಳಲ್ಲಿ ಒಮಾನ್ ಬಿಮ್ಮ ಸಿಂಕ್ ಹೋಲ್ ಸಹ ಇದರಲ್ಲಿ ಒಂದು ಎನ್ನುವುದು ಒಮಾನಿಗಳಿಗೆ ಹೆಮ್ಮೆಯಿದೆ. ಇದು ಅತಿ ಪುರಾತನವಾದದ್ದರಿಂದ, ಇಲ್ಲಿನ ಸರ್ಕಾರ ಇದನ್ನು ಸಂರಕ್ಷಿಸಿ, ಒಮಾನ್ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಇದನ್ನು ಸೇರಿಸಲಾಗಿದೆ.
 

ಪಿ.ಎಸ್.ರಂಗನಾಥ


ಗುರುವಾರ, ಜನವರಿ 23, 2014

ನೀವು ಅರೋಗ್ಯವಾಗಿ ಹೆಚ್ಚು ಕಾಲ ಬದುಕ ಬೇಕಾದರೆ ಮಾಡಾಬೇಕಾದ ಕೆಲವು ಕಾರ್ಯಗಳು.


Courtesy: upayukta mahiti, Internet source.

ನೀವು ಅರೋಗ್ಯವಾಗಿ ಹೆಚ್ಚು ಕಾಲ ಬದುಕ ಬೇಕಾದರೆ ಮಾಡಾಬೇಕಾದ ಕೆಲವು ಕಾರ್ಯಗಳು. 

೧. ನೀವು ಹದಿನೆಂಟನೇ ವಯಸ್ಸಿನಲ್ಲಿ ಎಷ್ಟು ತೂಕವಿದ್ದಿರೋ ಈಗಲೂ ಹೆಚ್ಚು ಕಡಿಮೇ ಅದೇ ತೂಕ ದಲ್ಲಿರುವಂತೆ ನೊಡಿಕೊಳ್ಳಿ. ಮುಖ್ಯವಾಗಿ ನಿಮ್ಮ ಈಗಿನ ಸೊಂಟದ ಸುತ್ತಳತೆ ನಿಮ್ಮ ಹದಿನೆಂಟನೇ ವಯಸ್ಸಿನಲ್ಲಿ ಎಷ್ಟಿತ್ತೊ ಅಷ್ಟೇ ಇರುವಂತೆ ನೋಡಿಕೊಳ್ಳಿ. ಇದರಿಂದ ಹೃದಯದ ಖಾಯಿಲೆಗಳು ನಿಮ್ಮನ್ನು ಕಾಡುವುದಿಲ್ಲ. 

೨. ದಿನದಲ್ಲಿನ ಒಂದು ಹೊತ್ತು ಊಟ ಕಡಿಮೆ ಮಾಡಿ. ಓಂದು ಹೊತ್ತು ಊಟ ಕಡಿಮೆ ಮಾಡಲಾಗದಿದ್ದರೂ ಮಾಡುವ ಪ್ರತಿಯೊಂದು ಊಟವನ್ನೂ ಹೊಟ್ಟೆ ಬಿರಿಯುವಂತೆ ತಿನ್ನದೇ ಇನ್ನು ಸ್ವಲ್ಪ ತಿನ್ನಬಹುದು ಎಂಬಲ್ಲಿಗೆ ಊಟ ಮುಗಿಸದರೆ ಒಳ್ಳ್ತೆಯದು. ಹೆಚ್ಚು ಊಟಮಾಡುವುದರಿಂದ ನಮ್ಮ ದೇಹದ ಎಲ್ಲ ಕೊಶಗಳಿಗು ಹೆಚ್ಚಿನ ಒತ್ತಡ ತರುತ್ತದೆ , ಈ ಒತ್ತಡವೇ ಹಲವಾರು ಖಾಯಿಲೆಗಳ ತವರೂರು. 

೩. ಹೇರಳವಾಗಿ ನೀರು ಕುಡಿಯಬೇಕು. ಮನುಷ್ಯನ ದೇಹ ಶೇಕಡ ೭೦ ಕ್ಕಿಂತ ಹೆಚ್ಚು ನೀರಿನಿಂದ ಮಾಡಲ್ಪಟ್ಟಿದೆ. ಹಾಗಾಗಿ ನೀರು ನಮ್ಮ ಆಹಾರದ ಮುಖ್ಯ ಭಾಗವಾಗಿರಬೇಕು. ಹಾಗೆಂದು ನೀವು ಮಾರುಕಟ್ಟೆ ಯಲ್ಲಿ ಸಿಗುವ ತರಾವರಿ ಜ್ಯೂಸ್ ಕುಡಿದರೆ ಅದು ನೀರು ಕುಡಿದಂತಲ್ಲ. ನಮ್ಮ ಸಂಪ್ರದಾಯದಂತೆ ತಾಮ್ರದ ಚಂಬಿನಲ್ಲಿ ಶೇಖರಿಸಿಟ್ಟ ನೀರು ಕುಡಿಯುವುದು ನಮ್ಮ ಲಿವರಿನ ಅರೊಗ್ಯಕ್ಕೆ ಉತ್ತಮ. ನೀರು ನಮ್ಮ ದೇಹದ ಕಲ್ಮಷಗಳನ್ನು ದೇಹದಿಂದ ಹೊರಹಾಕಿಸುತ್ತದೆ, ಪ್ರತಿಯೊಂದು ಕೋಶಕ್ಕೂ ಆಹಾರವನ್ನು ತಲುಪಿಸುತ್ತದೆ. 

೪. ನಮ್ಮ ಅಹಾರದ ಶೇಕಡ ೭೦ ಭಾಗ ತರಕಾರಿ ಮತ್ತು ಹಣ್ಣಿನಿಂದ ಕೂಡಿರಬೇಕು. ಸಸ್ಯಾಹಾರ ನಮ್ಮ ದೇಹಕ್ಕೆ ಅತ್ತ್ಯುತ್ತಮ. ಜೀವದಿಂದ ತುಂಬಿರುವ ತರಕಾರಿ ಮತ್ತು ಹಣ್ಣು ಗಳನ್ನು ತಿನ್ನುವುದು ನಿರ್ಜೀವವಾದ ಮಾಂಸಾಹಾರ ತಿನ್ನುವುದಕ್ಕಿಂತ ಎಷ್ಟೋ ಮೇಲು. 

೫. ದಿನದ ಮುಂಜಾನೆ ಮತ್ತು ಮುಸ್ಸಂಜೆಯ ವೇಳೆ ಮೂವತ್ತು ನಿಮಿಷಗಳಕಾಲ ಹೊರಗಡೆ ಶುದ್ದವಾದ ಗಾಳಿ ಸಿಗುವಕಡೆ ಓಡಾಡುವುದು ನಮ್ಮ ಆರೊಗ್ಯಕ್ಕೆ ಉತ್ತಮ. ಈ ಸಮಯಗಳಲ್ಲಿ ಹೊರಗಡೆಯಿರುವುದರಿಂದ ನಮ್ಮ ದೇಹದ ಜೈವಿಕ ಗಡಿಯಾರದ ಚಾಲನೆ ಉತ್ತಮಗೊಳ್ಳುತ್ತದೆ. ಹಾಗೆಯೆ ನಮ್ಮ ಪಾದವು ಪಾದರಕ್ಷೆಗಳಿಲ್ಲ್ಸದೇ ಹುಲ್ಲಿನ ಮೇಲಾಗಲಿ ಮಣ್ಣಿನ ಮೇಲಾಗಲಿ ನಡೆದಾಡಿದರೆ ನಮ್ಮಲ್ಲಿನ ನೆಗೆಟಿವ್ ಶಕ್ತಿಯನ್ನು ಭೂಮಿ ಹೀರಿಕೊಳ್ಳುತ್ತದೆ. 

೬. ನಿಮ್ಮ ಮನಸ್ಸು ಸದಾ ನೀವು ಉಸಿರಾಡುವುದನ್ನು ಗಮನಿಸುತ್ತಿರಲಿ. ಸಾಮಾನ್ಯ ನಾವ್ಯರೂ ಉಸಿರಾಡುವುದನ್ನು ಗಮನಿಸುವುದೇ ಇಲ್ಲಾ. ನಾವು ಅನ್ನ ನೀರು ಇಲ್ಲದೇ ದಿನಗಟ್ಟಲೇ ಬದುಕಿರಬಹುದು ಆದರೇ ಉಸಿರಾಟವಿಲ್ಲದೇ ಕೆಲವು ಗಂಟೆಗಳ ಕಾಲ ಕೂಡಾ ಬದುಕಿರಲಾರೆವು. ಇಷ್ಟೋಂದು ಮುಖ್ಯವಾಗಿರು ಉಸಿರಾಟವನ್ನು ನಾವ್ಯಾರೂ ಗಮನಿಸುವುದೇ ಇಲ್ಲಾ, ಹಾಗಾಗಿ, ನಾವು ಉಸಿರಾಡುವ ರೀತಿ ಅನಿಯಮಿತವಾಗಿರುತ್ತದೆ. ನಾವು ಯಾವಾಗಲೂ ನಿಯಮಿತವಾಗಿ ಧೀರ್ಘವಾಗಿ ಮತ್ತು ಸುಲಲಿತವಾಗಿ ಉಸಿರಾಡುವುದನ್ನು ಕಲಿಯಬೇಕು. ನಮ್ಮ ಮನಸ್ಸನ್ನು ಉಸಿರಾಟದ ಮೇಲೆ ಕೇಂದ್ರೀಕರಿಸುವುದರಿಂದ ಮಾತ್ರ ನಮ್ಮ ಉಸಿರಾಟವನ್ನು ನಿಯಮಿತ ಗೊಳಿಸು ವುದು ಸಾಧ್ಯ. ಯೊಗದಲ್ಲಿ ಹೇಳುವ ಪ್ರಾಣಾಯಾಮ ಈ ಅಂಶವನ್ನೇ ಒತ್ತಿ ಹೇಳುತ್ತದೆ. ಹಾಗೆ ಯೋಗದ ಅತ್ತ್ಯುತ್ತಮ ಸ್ಟಿತಿಯಾದ ಸಮಾಧಿ ಸ್ಟಿತಿ ಸೇರಲು, ನಮ್ಮ ಉಸಿರಾಟ ಕ್ರಿಯೆಯನ್ನು ನಿಯಮಿತ ಗೊಳಿಸುವ ಮತ್ತು ನಮ್ಮ ಮನಸ್ಸ್ಸನ್ನು ಉಸಿರಾಟದಲ್ಲಿ ಕೇಂದ್ರೀಕರಿಸುವುದು ಮೊದಲನೇ ಹೆಜ್ಜೆ. 

೭. ದಿನಕ್ಕೆ ೭ರಿಂದ ೮ ಗಂಟೆ ನಿದ್ದೆ ಮಾಡುವುದು ನಮ್ಮ ಆರೋಗ್ಯಕ್ಕೆ ಅತ್ಯವಶ್ಯಕ. ೮. ಧೂಮಪಾನ ಮತ್ತು ಅಲ್ಕೋಹಾಲ್ ಗಳಿಂದ ದೂರವಿರಬೇಕು.

ಗುರುವಾರ, ಜನವರಿ 2, 2014

ಒಮಾನ್: ಕನ್ನಡ ಸಂಘಗಳು ಮತ್ತು ಕನ್ನಡಿಗರ ಮದ್ಯೆ ಯಾಕೆ ಇಷ್ಟೊಂದು ಅಂತರ?

ಹಿಂದೆ ಆಗ ಅಧ್ಯಕ್ಷರಾಗಿದ್ದ ಶ್ರೀ ಅನಿಲ್ ಭಾಸಗಿ ಯವರನ್ನು ಸಂದರ್ಶಿಸಿ ಪಡೆದ ಸಂದರ್ಶನ




ಪ್ರ: ನೀವು ಕನ್ನಡ ಸಂಘದಲ್ಲಿ ಎಷ್ಟುವರ್ಷಗಳಿಂದ ಕೆಲಸ ಮಾಡ್ತಾಯಿದ್ದೀರಾ?
ಅನಿಲ್ ಭಾಸಗಿ ಯವರ ಉತ್ತರ: ಸುಮಾರಾಗಿ ಒಂದೂ ವರೆ ವರ್ಷದಿಂದ ಕೆಲಸಮಾಡ್ತಾಯಿದ್ದೀನಿ, ಮೊದಲು ೭-೮ ತಿಂಗಳು, ಎಂಟರ್ಟೆನ್ ಕೊಆರ್ಡಿನೇಟರ್ ಆಗಿ ಕೆಲಸಮಾಡಿದ್ದೆ, ಈಗ ಕನ್ವೀನರ್ ಆಗಿ ಮಾಡ್ತಾ ಯಿದ್ದಿನಿ.
ಪ್ರ: ಸಂಘದ ಕಾರ್ಯಕ್ಷೇತ್ರ ಮತ್ತು ವ್ಯಾಪ್ತಿ ಯ ಬಗ್ಗೆ ವಿವರ ನೀಡಿ.
ಉ: ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸೋದು, ಮಕ್ಕಳಲ್ಲಿ ಯಿರುವ ಪ್ರತಿಭೆ ಯನ್ನು ಗುರುತಿಸಿ, ಹಾಗೆ ನಾವೆಲ್ಲರು ವೃತ್ತಿಯನ್ನು ಅರಸಿ ಒಮಾನಿ ಗೆ ಬಂದಿದ್ದೀವಿ, ನಮ್ಮಲ್ಲೂ ಸಹ ಎಲ್ಲೋ ಒಂದು ಕಡೆ ಪ್ರತಿಭೆ ಯಿರುತ್ತೆ, ಅದನ್ನು ಪ್ರದರ್ಶಿಸೋದಿಕ್ಕೆ ಒಂದು ವೇದಿಕೆ ಸಿಕ್ಕಿರಲ್ಲ, ರಾಜ್ಯದಲ್ಲಾದರೆ ೧೦ ರಲ್ಲಿ ೧೧ ಆಗುವ ಸಂಭವ ವೇ ಹೆಚ್ಚು ಆದರೆ ಇಲ್ಲಿ ಇರುವ ೫ ಜನರಲ್ಲಿ ಒಬ್ಬರಾಗಿ ಗುರುತಿಸಿಕೊಳ್ಳುವ ಅವಕಾಶ ವಿರುತ್ತೆ ಅವರಿಗಾಗಿ ಒಂದು ವೇದಿಕೆ ಯನ್ನು ಒದಗಿಸಿಕೊಡುವುದು. ಅಂತರವನ್ನು ನಾವು ಗುರುತಿಸಿ ಪ್ರೋತ್ಸಾಹ ನೀಡಿದರೆ ನಮ್ಮಲ್ಲೇ ಆ ಕಲಾವಿದ ಬೆಳೆಯಲು ಸಾಧ್ಯವಾಗುತ್ತದೆ. ಸಾಮಾಜಿಕ ಜವಬ್ದಾರಿ ಹೊಣೆ, ನಮ್ಮ ಕಾರ್ಯಕ್ರಮಗಳು ಕೇವಲ ಒಂದು ಪ್ರದೇಶಕ್ಕೆ ಸೀಮಿತವಾಗದೆ ಸಮಗ್ರ ಕರ್ನಾಟಕದ ಚಿತ್ರಣವನ್ನು ನಮಗೆ ಹಾಗು ನಮ್ಮ ಮಕ್ಕಳಿಗೆ ಪರಿಚಯ ಮಾಡಿಕೊಡುವುದು. ಇಂದಿನ ಮಕ್ಕಳಲ್ಲಿ ಕರ್ನಾಟಕ ರಾಜ್ಯದ ಕಲ್ಪನೆ ಸರಿಯಾಗಿ ಮೂಡಿಲ್ಲ ಹಾಗು ಮೂಡುತ್ತಿಲ್ಲ, ಅದರ ಅರಿವನ್ನು ನೀಡೋದು. ಕನ್ನಡಿಗರು ಅಂತ ಹೆಮ್ಮೆ ಪಡುವುದಕ್ಕೆ ನಾವು ಏನು ನಮ್ಮಲ್ಲಿ ಏನಿದೆ, ಐತಿಹಾಸಿಕ ಪರಂಪರೆ ಯುಳ್ಳ ನಮ್ಮ ರಾಜ್ಯ ದ ಇತಿಹಾಸ ದ ಸಮಗ್ರ ಚಿತ್ರಣ ವನ್ನು ಪ್ರದರ್ಶಿಸುವುದು.
ಪ್ರ: ಈ ನಿಮ್ಮ ಕಲ್ಪನೆ ನಿಜವಾಗಿಯೂ ಸಾಕಾರ ಗೊಂಡಿದೆಯಾ?
ಉ: ನಾನು ಸಂಘದಲ್ಲಿ ಸಕ್ರಿಯ ವಾಗಿರುವುದು ಕೇವಲ ೧೮ ತಿಂಗಳು ಮಾತ್ರ, ಈ ಅವಧಿಯಲ್ಲಿ ಸಾಧಿಸಿದ್ದು ಬಲು ಕಡಿಮೆ, ಸಾಧಿಸಬೇಕಾದದ್ದು ಬಹಳಷ್ಟಿದೆ. ಇದಕ್ಕೂ ಮುಂಚೆ ನಡೆದ ಸಂಘದ ಚಟುವಟಿಕೆ ಗಳ ಬಗ್ಗೆ ನನಗೆ ಅಷ್ಟೊಂದು ಮಾಹಿತಿಯಿಲ್ಲ
ಪ್ರ: ಕರ್ನಾಟಕ ವಿಭಾಗ, ಭಾರತೀಯ ಸಾಮಾಜಿಕ ಸಂಸ್ಥೆ ಯ ಅಧೀನ ದಲ್ಲಿದೆ,  ಹೀಗಿರುವಾಗ ನಿಮ್ಮ ಕಾರ್ಯಕ್ಷೇತ್ರ ವ್ಯಾಪ್ತಿಯನ್ನು ಮೀರಿ ಏನನ್ನಾದರು ಮಾಡಿದ್ದೀರಾ?
ಊ: ಇಲ್ಲ, ಇದುವರೆವಿಗೂ ಮಾಡಿಲ್ಲ. ISC ಅಧೀನ ನಲ್ಲಿ ಹಾಗು ಅವರು ರೂಪಿಸಿರುವ ನಿಯಮಾವಳಿಗಳಿಗೆ ಒಳಪಟ್ಟು ನಮ್ಮ ಕೆಲಸವನ್ನು ನಾವು ಮಾಡ್ತಾಯಿದ್ದೀವಿ. ಕಾರ್ಯಕ್ರಮಗಳ ವಿವರ ವನ್ನು ISC ಗೆ ರವಾನಿಸಿ ಮಾಹಿತಿ ಕೊಟ್ಟು ಮುಂದಿನ ಕೆಲಸಗಳನ್ನು ಮಾಡಬೇಕಾಗುತ್ತೆ.
ಪ್ರ: ನಿಮ್ಮ ಈಗಿನ ಕಾರ್ಯಾವಧಿ ಯಲ್ಲಿ ಯಾವುದಾದರು ಸವಾಲು ಎನಿಸುವಂತಹ( ಚಾಲೆಂಜಿಂಗ್) ಕೆಲಸವನ್ನು ನಿರ್ವಹಿಸಿದ್ದೀರಾ? ಅಂತಹ ಸಂಧರ್ಭ ಬಂದಿದೆಯಾ? ಕ್ಲಿಷ್ಟಕರವಾದ ಪರಿಸ್ಥಿತಿ ಯನ್ನು ಎದುರುಸಿದ್ದೀರಾ?
ಉ: ಹೌದು, ಸ್ಥಳೀಯ ಪ್ರತಿಭೆ ಗಳನ್ನು ಗುರುತಿಸುವುದು ಬಹುದೊಡ್ಡ ಸವಾಲು. ನಮ್ಮಲ್ಲಿರುವ ೨೧೦ ಸದಸ್ಯರಲ್ಲಿ ಯಾರು ಯಾವ ಕ್ಷೇತ್ರದಲ್ಲಿ ಪ್ರತಿಭಾವಂತರು? ಅವರಿಗೆ ಹೇಗೆ ಸೂಕ್ತ ವೇದಿಕೆ ಯನ್ನು ಒದಗಿಸುವುದು ಎನ್ನುವುದು ನಮ್ಮ ಮುಂದಿರುವ ದೊಡ್ಡ ಸವಾಲು.
ಪ್ರ: ಸಂಘದ ನಿಮ್ಮ ಕಾಲಾವಧಿ ಯಲ್ಲಿ ಏನು ಸಾಧನೆ ಮಾಡಿದ್ದೀರಾ?
ಉ: ಅಂತದ್ದೇನು ಸಾಧಿಸಿಲ್ಲ.
ಪ್ರ: ಸಂಘದ ಸದಸ್ಯರೆಷ್ಟು?
ಉ: ೨೧೦ ಜನ.
ಪ್ರ: ಸದಸ್ಯರನ್ನು ಜಾಸ್ತಿ ಮಾಡಬೇಕು ಅಂತ ಯೋಚನೆ ಯಿದೆಯಾ?
ಉ: ಹೌದು, ಇದೆ. ಸಂಘದ ಹಳೆಯ ಸದಸ್ಯರನ್ನು ಮರಳಿ ಕರೆತರುವ ಪ್ರಯತ್ನ ನಡೀತ ಯಿದೆ. ಜನ ಜಾಸ್ತಿ ಯಾದಷ್ಟು, ಕೆಲಸ ಮಾಡುವ ಹುಮ್ಮಸ್ಸು ಜಾಸ್ತಿಯಾಗುತ್ತೆ. ಖುಷಿ ಯಾಗುತ್ತೆ.
ಪ್ರ: ಸದಸ್ಯರನ್ನು ಹೆಚ್ಚು ಮಾಡುವ ಕೆಲಸ ಇಷ್ಟುದಿನ ಯಾಕೆ ಮಾಡಲಿಲ್ಲ? ಇಷ್ಟು ವರ್ಷಗಳಿಂದ ಕೇವಲ ೧೦೦ ಅಥವ ೨೦೦ ಜನರನ್ನು ನೊಂದಾಯಿಸಿಕೊಂಡು ಈ ೨೦೦ ರ ಗಡಿಯೊಳಗೆ ಯಾಕಿದ್ದೀರ? 
ಉ:ಇಲ್ಲ. ನಾನು ಕನ್ವೀನರ್ ಆಗುವ ಮುಂಚೆ, ಸದಸ್ಯ ನಾಗಿದ್ದೆ. ನಾವು ಕನ್ನಡಿಗರಿಗೆ ಸಂಘ ಜೀವಿಗಳಾಗಿ, ಹೊಂದಿಕೊಂಡು ಸಾಮಾಜಿಕ ಬದ್ದತೆ ಇಟ್ಟುಕೊಂಡು ಜೀವಿಸಿಕೊಂಡು ಹೋಗುವುದರಲ್ಲಿ ಅಥವ ಅದರ ಅರಿವನ್ನು ಮೂಡಿಸಬೇಕಾಗಿದೆ.
ಪ್ರ: ಈ ವಿಷಯದಲ್ಲಿ ಸಂಘ ಎಡವಿದೆ ಅಂತ ಅನ್ನಿಸುತ್ತ?
ಉ: ಇಲ್ಲ. ಇದು ಎಲ್ಲರ ಜವಾಬ್ದಾರಿ, ಮನುಷ್ಯ ಸಂಘ ಜೀವಿ, ಸಂಘ ಹಾಗೂ ಸದಸ್ಯರ ಜವಬ್ದಾರಿ. ನನ್ನ ಅನುಭವದ ಪ್ರಕಾರ, ಇದರಲ್ಲಿ ಎರಡು ಕಾರಣಗಳಿರಬಹುದು ಒಂದು ಕನ್ನಡಿಗರಲ್ಲಿ ಆಸಕ್ತಿ ಕಡಿಮೆ ಯಿರಬಹುದು ಅಥವ ಆಸಕ್ತಿಯನ್ನು ಬೆಳೆಸುವುದಕ್ಕೆ ಸಂಘ ಪ್ರಯತ್ನಿಸದೇ ಇರಬಹುದು. ಬೇರೆ ಭಾಷೆಯವರಲ್ಲಿ ಇರುವ ಹಾಗೆ ಕನ್ನಡಿಗರಲ್ಲಿ ಭಾಷಾ ಅಭಿಮಾನ ಕಡಿಮೆಯಿರೋದು ಸಹ ಒಂದು ಕಾರಣ. ಮುಂಚೆ ಹೊರದೇಶಗಳಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಕನ್ನಡಿಗರು ಸಿಗ್ತಾಯಿದ್ದರು, ಎಲ್ಲರೂ ಒಂದುಗೂಡುವುದಕ್ಕೆ ಸಂಘ ಒಂದು ಕಾರಣವಾಗ್ತಾಯಿತ್ತು. ಆದರೆ ಈಗ, ಚಿಕ್ಕ ಚಿಕ್ಕ ಗುಂಪು ಗಳಾಗಿ,ಕೆಲವರು ಮನೆ ಮನೆ ಗಳಲ್ಲಿ ಗೆಟ್ ಟುಗೆದರ್, ಹಾಗೆ ಪಿಕ್ ನಿಕ್ ಮುಂತಾದವುಗಳಲ್ಲಿ ಒಟ್ಟಿಗೆ ಸೇರ್ತಾಯಿರೋದು, ಅಲ್ಲಿ ಅವರೇ ಮುಖ್ಯವಾಗಿರ್ತಾರೆ ಹಾಗೂ ಇಂತಹ ಚಿಕ್ಕ ಚಿಕ್ಕ ಕಾರ್ಯಕ್ರಮಗಳಲ್ಲಿ ಅವರೆಲ್ಲರಿಗೂ ಪ್ರಾಶಸ್ತ್ಯ ಸಿಗುವುದರಿಂದ, ಸಂಘದ ಎಲ್ಲ ಚಟುವುಟಿಕೆಗಳಿಗೆ ಭಾಗವಹಿಸುವುದರಲ್ಲಿ ನಿರಾಸಕ್ತಿ ಯಿರಬಹುದು. ಹಾಗೆ ಇಂದಿನ ಮಾಧ್ಯಮ ಸಹ ಒಂದು ಕಾರಣ, ಒಂದಲ್ಲೊಂದು ಚಾನೆಲ್ ನ ಲೈವ್ ಕಾರ್ಯಕ್ರಮದಲ್ಲಿ ಒಬ್ಬರಲ್ಲ ಒಬ್ಬರು ಕಲಾವಿದರು ಬರ್ತಾಯಿರ್ತಾರೆ. ಮತ್ತೊಂದು ಈಗಿನ ಕಾಲದ ಮಕ್ಕಳ ಶಿಕ್ಷಣ ಪದ್ದತಿ, ಪರಿಕ್ಷೆಗಳ ಒತ್ತಡ, ಹೀಗೆ ಮಕ್ಕಳ ಕಾರ್ಯಕ್ರಮ ಏರ್ಪಡಿಸುವುದಕ್ಕೆ ಬಹಳ ತೊಡಕುಗಳು ಜತೆಗೆ ಮಸ್ಕತ್ ನ GEOGRAPHICAL LOCATION ತೊಂದರೆ. ನೃತ್ಯ ಕಾರ್ಯಕ್ರಮ ವೇರ್ಪಡಿಸಿದರೆ, ಮಕ್ಕಳಿಗೆ ತರಬೇತಿ ಕೊಡುವುದಕ್ಕೆ ಹಾಗು ಕೇಂದ್ರ ಕ್ಕೆ ಬಿಡೋದು ಮತ್ತು ವಾಪಾಸ್ಸು ಕರೆದುಕೊಂಡು ಹೋಗೋ ತೊಂದರೆಗಳು. ಮಸ್ಕತ್ತಿನ ಸಾರಿಗೆ ವ್ಯವಸ್ಥೆ ಯ ತೊಂದರೆ. ಸಮಯದ ಅಭಾವ, ಬಹಳಜನರಿಗೆ ಆಸಕ್ತಿಯಿರುತ್ತದೆ ಆದರೆ ಹೀಗೆ ಹಲವಾರು ತೊಂದರೆಗಳಿಂದ ಜನ ದೂರ ಸರಿತಾರೆ.
ಪ್ರ: ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಲ್ಲಿ ಕನ್ನಡಿಗರಲ್ಲಿ ಆಸಕ್ತಿ ಕಡಿಮೆ ಯಿದೆಯಾ?
ಉ: ಕನ್ನಡಿಗರಲ್ಲಿ ನಿರಾಸಕ್ತಿಯಿಲ್ಲ ಆದರೆ, ಅವರ ಆಸಕ್ತಿಯನ್ನು ಗುರುತಿಸುವ ಕೆಲಸ ಮಾಡಬೇಕಾಗಿದೆ.
ಪ್ರ: ಸಂಘದಿಂದ ವರ್ಷದಲ್ಲಿ ಎಷ್ಟು ಕಾರ್ಯಕ್ರಮ ನಡೆಸಿದ್ದೀರಾ?
ಉ: ಒಂದು ೫-೬ ಕಾರ್ಯಕ್ರಮ ಮಾಡಿರಹುದು. ದೊಡ್ಡ ಪ್ರಮಾಣದಲ್ಲಿ ಅಂತದ್ದೇನೂ ಮಾಡಲಿಕ್ಕಾಗಲಿಲ್ಲ.
ಪ್ರ: ನಿಮ್ಮ ಸಂಘದ ಸಾಮಾಜಿಕ ಬದ್ಧತೆ ಏನು?
ಉ: ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸೋದು, ಅದು ನಮ್ಮ ದೊಡ್ಡ ಸಾಮಾಜಿಕ ಬದ್ದತೆ.
ಪ್ರ: ಜನರಲ್ಲಿ ಕನ್ನಡ ಅಭಿಮಾನ ವನ್ನು ಬೆಳೆಸಿ, ಅದರ ಕಿಚ್ಚನ್ನು ಹೊತ್ತಿಸುವ ಕಾರ್ಯಕ್ರಮಗಳ ಕೊರತೆ ಬಹು ಕಾಡುತ್ತಿದೆ.  ನಿಮ್ಮ ಯಾವುದೆ ಕಾರ್ಯಕ್ರಮಗಳಲ್ಲಿ,  ಇಂತಹ ಕೆಲಸ ಮಾಡೆಇಲ್ಲ. ಕನಿಷ್ಟ ಪಕ್ಷ ಒಂದು ಭಾಷಣ ಇಲ್ಲ, ಒಂದು ಅಭಿಮಾನದ ನುಡಿ ಇಲ್ಲ. ನೀವು ಸಿದ್ದ ಪಡಿಸಿಕೊಂಡ ಕಾರ್ಯಕ್ರಮ ಮಾಡಿ ಮುಗಿಸುವುದೆ ನಿಮ್ಮ ಆದ್ಯತೆ ಯಾಗಿ ಕಾಣುತ್ತಿದೆ. ಕಳೆದಬಾರಿಯ ೨೦೧೨ ರಾಜ್ಯೋತ್ಸವ ಕೇವಲ ಒಂದು ಆರ್ಕೆಸ್ಟ್ರಾ ಗೆ ಸೀಮಿತವಾಗಿತ್ತು. ರಾಜ್ಯೋತ್ಸವದಲ್ಲಿ ಕನ್ನಡ ಅಭಿಮಾನಕ್ಕೆ ಬೆಲೆ ಇಲ್ವಾ?
ಉ: ಅದು ಆಗಲಿಲ್ಲ, ಆದರೆ ಈ ಸಾರಿ ಖಂಡಿತ ಮಾಡ್ಬೇಕಾಗಿತ್ತು, ಕಾರಾಣಾಂತರಗಳಿಂದ ಆಗಲಿಲ್ಲ.
ಪ್ರ: ನಿಮ್ಮ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವದ ತೊಂದರೆ ಏನಾದರು ಆಗಿದೆಯಾ?
ಉ: ಇಲ್ಲ, ಹಲವಾರು ಪ್ರಾಯೋಜಕರ ಸಹಕಾರ ಹಾಗೂ ಸಂಘದ ಕಾರ್ಯಕರ್ತರ ಪರಿಶ್ರಮದಿಂದ ಅಂತಹ ತೊಂದರೆ ಆಗಿಲ್ಲ.
ಪ್ರ: ನಮ್ಮ ಸಾಮನ್ಯ ಕನ್ನಡಿಗರ ಜವಬ್ದಾರಿ ಯೇನು? ಮಸ್ಕತ್ ಕನ್ನಡಿಗರಿಂದ ನಿಮ್ಮ ನಿರೀಕ್ಷೆ ಯೇನು
ಉ: ಎಲ್ಲರೂ ಸಂಘದ ಸದಸ್ಯರಾಗಿ, ಸಂಘದ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ. ಉತ್ಸಾಹ ತೋರಿಸಿ, ಆಡಳಿತ ಮಂಡಳಿಯ ಸದಸ್ಯರಿಗಿಂತ, ಸಂಘದ ಸದಸ್ಯರು ಬಹು ಮುಖ್ಯ. ಎರಡು ಕಡೆ ಉತ್ತಮ ಭಾಂದವ್ಯ ಇರುವುದು ಒಳ್ಳೆಯದು. ಇದನ್ನು ಬೆಳೆಸುವ ಕಾರ್ಯ ಇಬ್ಬರಿಂದಲೂ ಆಗಬೇಕು.
ಪ್ರ: ನಿಮ್ಮ ಕಾರ್ಯಕ್ರಮ ಗಳ ಆಹ್ವಾನ ಹೇಗೆ. ಕಾರ್ಯಕ್ರಮವನ್ನು ಪ್ರೋತ್ಸಾಹಿಸಲು ಜನರನ್ನು ಹೇಗೆ ಆಕರ್ಷಿಸುತ್ತೀರ?
ಉ: ನಮ್ಮಲ್ಲಿ ಎರಡು ತರಹ ಕಾರ್ಯಕ್ರಮ ಇದೆ ಒಂದು, Inhouse, ಆಮೇಲೆ outdoor-open to all, Inhouse ಕಾರ್ಯಕ್ರಮಕ್ಕೆ Email ಮತ್ತು SMSಮುಖಾಂತರ ಆಹ್ವಾನ. ಹಾಗೆ outdoor-open to all ಕಾರ್ಯಕ್ರಮ ಕ್ಕೆ ಪತ್ರಿಕೆ ಗಳಲ್ಲಿ ಆಹ್ವಾನ ಕೊಡುತ್ತೀವಿ.
ಪ್ರ: ಕಾರ್ಯಕ್ರಮ ಗಳು ಮುಗಿದ ಮೇಲೆ, ಮಾಧ್ಯಮಗಳಲ್ಲಿ ಯಾಕೆ ಮಾಹಿತಿ ನೀಡ್ತಾಯಿಲ್ಲ. ಪ್ರಚಾರ ಯಾಕೆ ಮಾಡ್ತಯಿಲ್ಲ.
ಉ: ಈಗ ಶುರು ಮಾಡ್ತೀವಿ.
ಪ್ರ: ಕರ್ನಾಟಕ ರಾಜ್ಯದ ಕನ್ನಡ ಸಂಸ್ಕೃತಿ ಇಲಾಖೆ ಗೆ ನಿಮ್ಮ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಕೊಡ್ತಾಯಿದ್ದೀರಾ?
ಉ: ಇನ್ನು ಮುಂದೆ ಮಾಡ್ತೀವಿ. ಈಗ ಮಂತ್ರಿ ಯಾಗಿರುವ ಶ್ರೀ ಉಮಾಶ್ರಿ ಯವರಿಗೆ ಕಳುಹಿಸಿದ್ದೇವೆ.
ಪ್ರ: ಸಂಘದ ಚುನಾವಣೆ ಬಗ್ಗೆ ಮಾಹಿತಿ ನೀಡಿ.
ಉ: ಎರಡು ವರ್ಷಕೊಮ್ಮೆ, ಚುನಾವಣೆ ನಡೆಯುತ್ತೆ. ಈ ಸಾರಿ ಅವಿರೋಧವಾಗಿ ಆಯ್ಕೆ ಆಯ್ತು.
ಪ್ರ: ನೀವು ನಿರ್ಧಾರಗಳನ್ನು ಹೇಗೆ ತಗೋತೀರಾ? ಎಲ್ಲರ ಒಪಿನಿಯನ್ ತಗೋತೀರಾ ಅಥವ ಒಬ್ಬರ ಒಪಿನಿಯನ್ ಗೆ ಮಾತ್ರ ಮನ್ನಣೆ ಕೊಡ್ತಿರಾ?
ಉ: ಎಲ್ಲರ ಒಪಿನಿಯನ್ ಗಳನ್ನು ಪರಿಶೀಲಿಸಿ, ಉತ್ತಮ ನಿರ್ಧಾರವನ್ನು ಒಟ್ಟಿಗೆ ತಗೋತೀವಿ.
ಪ್ರ: ಸ್ಥಳೀಯ ಪ್ರತಿಭೆ ಗಳಿಗೆ ಮನ್ನಣೆ ನೀಡಿ, ಪ್ರತಿಭಾ ಪುರಸ್ಕಾರ ನೀಡ್ತಾಯಿದ್ದೀರಾ?
ಉ: ಹೌದು, ಆ ಕೆಲಸ ಪ್ರತಿ ವರ್ಷ ನಡೆಯುತ್ತೆ. ಮೊದಲಿಗೆ ನಾನು ಸಹ ಪ್ರತಿಭಾ ಪುರಸ್ಕಾರ ದ ಫಲಾನುಭವಿ. ಮಕ್ಕಳಿಗಾಗಿ ಪ್ರತಿ ವರ್ಷ, quiz, drawing competion ಇರುತ್ತೆ, ಪ್ರತಿಯೊಬ್ಬರಿಗೂ ಅವಕಾಶ ಕಲ್ಪಿಸಿಕೊಡ್ತೀವಿ.
ಪ್ರ: ಕನ್ನಡ ಸಂಘದಿಂದ ಮಕ್ಕಳಿಗಾಗಿ ಕನ್ನಡ ಕಲಿಸುವ ಕಾರ್ಯಕ್ರಮ ನಡೆಸ್ತಾಯಿದ್ದೀರಾ? ಕನ್ನಡ ಕಲಿಸುವ ಶಿಕ್ಷಕರಿಗೆ, ಸಂಘದ ವತಿಯಿಂದ ಏನಾದರೂ ಸಂಭಾವನೆ ನೀಡ್ತಾಯಿದ್ದೀರ?
ಉ: ಮಕ್ಕಳಿಗಾಗಿ ಕನ್ನಡ ತರಗತಿಗಳು ನಡೀತಾ ಇವೆ, ಶಿಕ್ಷಕರಿಗಾಗಿ ಸಂಭಾವನೆ ಇಲ್ಲ. ಅದು ಅವರ ಸಮಾಜ ಸೇವೆ, ನಾವು ಸಹ ಸ್ವಯಂ ಪ್ರೇರಣೆಯಿಂದ ಯಾವುದೇ ಸಂಭಾವನೆ ಇಲ್ಲದೆ ಸಂಘದ ಚಟುವಟಿಕೆ ಯಲ್ಲಿ ಪಾಲ್ಗೊಂಡಿದ್ದೇವೆ.
ಪ್ರ: ನಿಮ್ಮ ಆಡಳಿತ ಮಂಡಳಿಯಲ್ಲಿ ೯ ಜನ ಸದಸ್ಯರಿದ್ದು, ಎಲ್ಲ ಕೆಲಸಗಳನ್ನು ಸದಸ್ಯರ ಮುಖಾಂತರ ಮಾಡಿಸುವುದು ಬಹು ದೊಡ್ಡ ಸವಾಲು, ಆದ್ದರಿಂದ ಸಹಾಯಕ್ಕಾಗಿ Volunteers ಪಡೆ ನಿಮ್ಮಲಿದ್ದಾರ?
ಉ: ಪಡೆ ಅಂತ ಏನಿಲ್ಲ, ಉತ್ಸಾಹ ಹಾಗೂ ಆಸಕ್ತಿಯಿರುವ ಸ್ವಯಂ ಪ್ರೇರಣೆ ಯಿಂದ ಮುಂದೆ ಬರುವವರಿಗೆ ಅವಕಾಶ ಕೊಟ್ಟಿದ್ದೇವೆ.
ಪ್ರ: ಜನರಲ್ಲಿ ಕನ್ನಡ ಅಭಿಮಾನ ಬೆಳೆಸುವ ಕಾರ್ಯಕ್ರಮ ಏನು ಮಾಡಿದ್ದೀರಾ?
ಉ: ಪ್ರತಿ ಕಾರ್ಯಕ್ರಮದಲ್ಲಿ ನಾವು ಮಾಡಿದ್ದೇವೆ, ಕನ್ನಡ ಅಭಿಮಾನ ಜನರಲ್ಲಿ ಬರಬೇಕು ಅದು ಪ್ರತಿಯೊಬ್ಬರ ಜವಬ್ದಾರಿ.
ಪ್ರ: ಸಂಘದಿಂದ ಸಾಹಿತ್ಯ ಚಟುವಟಿಕೆ ಕಾರ್ಯಕ್ರಮ ಗಳು ತುಂಬಾ ಕಡಿಮೆ ಆಗ್ತಾಯಿದೆ.
ಉ: ಹಾಗೆನಿಲ್ಲ, ಹಿಂದೆ ನಡೆದಿದೆ, ಮುಂದೇನೂ ನಡೆಯುತ್ತೆ.
ಪ್ರ: ಕನ್ನಡಿಗರ ಮದ್ಯೆ ಭಾವನಾತ್ಮಕ ಬಾಂಧವ್ಯ ಬೆಳೆಸುವಂತಹ ಕೆಲಸ ಏನ್ ಮಾಡಿದ್ದೀರಾ? ಸಂಘದ ಜವಬ್ದಾರಿ ಏನು?  ವರ್ಷಕ್ಕೆ ೫-೬ ಕಾರ್ಯಕ್ರಮ ಮಾಡಿ ಮುಗಿಸಿದರೆ ನಿಮ್ಮ ಜವಬ್ದಾರಿ ಮುಗಿತಾ? ಜನ ಬರ್ತಾರೋ ಬಿಡ್ತಾರೋ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇದು ಈ ವರ್ಷದ ಅಜೆಂಡಾ, ಇದು ಮುಗಿಸಬೇಕು. ಅಷ್ಟಾದ್ರೆ ಹೆಂಗೆ?
ಉ: ಅದು ಹಾಗಲ್ಲ, ಎಲ್ಲ ವಯೋಮಾನದವರನ್ನು ಬೇರೆ ಬೇರೆ ಆಸಕ್ತಿ ಯಿರುವ  ಎಲ್ಲರನ್ನು ತೃಪ್ತಿ ಪಡಿಸೋದು ಕಷ್ಟ. ಅದಕ್ಕಾಗಿ ಬೇರೆ ಬೇರೆ ಕಾರ್ಯಕ್ರಮ ಮಾಡಿ ಜನರನ್ನು ರಂಜಿಸೋ ಕಾರ್ಯಕ್ರಮ ನಡೀತಾಯಿದೆ. ಇದು ಕೇವಲ ಸಂಘದ ಜವಬ್ದಾರಿಯಲ್ಲ. ಕನ್ನಡಿಗರು ಸಹ ತಮ್ಮ ತಮ್ಮ ಆಸಕ್ತಿ ಅನುಗುಣವಾಗಿ ಕಾರ್ಯಕ್ರಮ ಗಳ ವಿವರ ತೆಗೆದು ಕೊಂಡು ಬಂದರೆ ಅದನ್ನು ಪರಿಶೀಲಿಸಿ ನಾವು ನಿರ್ಧಾರ ತೆಗೆದುಕೊಂಡು ಅದನ್ನು ನಡೆಸೋದು ನಮ್ಮ ಜವಬ್ದಾರಿ.
-----****-----
ಹೊಸ ಉದ್ಯೋಗದ ಜವಬ್ದಾರಿಯನ್ನು ಹೊತ್ತು ಶ್ರೀ ಅನಿಲ್ ಭಾಸಗಿಯವರು ಮಸ್ಕತ್ ನಿಂದ ನಿರ್ಗಮಿಸುತಿದ್ದಾರೆ. ಈ ಸಂಧರ್ಭದಲ್ಲಿ ಇಷ್ಟೊಂದು ಮಾಹಿತಿ ಹಂಚಿಕೊಂಡು ನಮ್ಮ ಜತೆ ಮಾತನಾಡಿದ್ದಕ್ಕೆ ಧನ್ಯವಾದಗಳನ್ನು  ಅರ್ಪಿಸುತ್ತ,  ಈ ಮೇಲಿನ ಸಂದರ್ಶನ ಈಗಿರುವ ಆಡಳಿತ ಮಂಡಳಿಗೆ ಹಾಗು ಒಮಾನ್ ಕನ್ನಡಿಗರಿಗೆ ಈ ಒಂದು ಚಿಕ್ಕ ವಿಚಾರ ವಿನಿಮಯ ಎಲ್ಲೋ ಒಂದುಕಡೆ ಮಾರ್ಗದರ್ಶಿ ಯಾಗುತ್ತದೆ ಎಂದು ಭಾವಿಸುತ್ತೇನೆ.
ಕನ್ನಡ ಸಂಘ ನಿರ್ವಹಿಸುತ್ತಿರುವ ಎಲ್ಲ ಕಾರ್ಯಕ್ರಮಗಳು ಇನ್ನಷ್ಟು ತುಂಬಾ ಚೆನ್ನಾಗಿ ಮೂಡಿ ಬರಲಿ ಎಂದು ಆಶಿಸುತ್ತ, ಜತೆಗೆ ಒಮಾನ್ ನಲ್ಲಿ ನೆಲಸಿರುವ ಎಲ್ಲ ಕನ್ನಡಿಗರು ಕನ್ನಡ ಸಂಘದಲ್ಲಿ ಸದಸ್ಯತ್ವ ಪಡೆದು ಬರುವ ದಿನಗಳಲ್ಲಿ ಎಲ್ಲರು ಒಂದಾಗಿ ಮತ್ತಷ್ಟು ದೊಡ್ಡದಾಗಿ ಬೆಳೆಸೋಣ  

ಲೇಖಕರು: ರಂಗನಾಥ. ಪಿ.ಎಸ್

ಮಸ್ಕತ್: ವಿಜ್ರಂಭಣೆಯಿಂದ ನಡೆದ ಶ್ರೀ ಆಂಜನೇಯ ಸ್ವಾಮಿ ಪೂಜೆ


ಓಮಾನ್ ಕರ್ನಾಟಕ ಆರಾಧಾನ ಸಮಿತಿಯು (ಓಂಕಾರ) ಕಳೆದ ವರ್ಷ ೨೦೧೨ ರಲ್ಲಿ ಆಯೋಜಿಸಿದ್ದಂತೆ ಈ  ಬಾರಿ ೨೭ ಡಿಸೆಂಬರ್ ೨೦೧೩ ರಂದು ಶ್ರೀ ಆಂಜನೇಯ ಪೂಜೆ ಯನ್ನು ಮಸ್ಕತ್ ನ ಶ್ರೀ ಕೃಷ್ಣ ಮಂದಿರ ಸಭಾಂಗಣದಲ್ಲಿ ಆಯೋಜಿಸಿದ್ದರು. ಬೆಳಿಗ್ಗೆ ೮:೩೦ ಪ್ರಾರ್ಥನೆ ಯಿಂದ ಶುರುವಾದ ಕಾರ್ಯಕ್ರಮ, ಸಂಕಲ್ಪ, ಮೂರ್ತಿ ಪ್ರತಿಷ್ಠಾಪನೆ, ಪಂಚಾಮೃತ ಅಭಿಷೇಕ, ಮಹಾ ಅಭಿಷೇಕ, ಸುವರ್ಣ ಕಿರೀಟ ಸಮರ್ಪಣೆ, ಅಲಂಕಾರ, ಹರಿವಾಯುಸ್ತುತಿ,ಹನುಮಾನ್ ಚಾಲೀಸ, ಭಜನೆ, ಮಹಾ ಮಂಗಳಾರತಿ ತದನಂತರ ಮಹಾಪ್ರಸಾದ ದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯ ಗೊಳಿಸಲಾಯಿತು.

ಬೆಳಿಗ್ಗೆ ೮:೩೦ ರಿಂದ ಪೂಜೆಗೆ ಆಗಮಿಸಿದ ಸಾವಿರಾರು ಭಕ್ತರು, ಮಧ್ಯ್ಹಾನ ಮಹಾ ಪ್ರಸಾದ ವಿನಿಯೋಗದ ವರೆವಿಗೂ ಪಾಲ್ಗೊಂಡು ಶ್ರೀ ಆಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದು ವಿಶೇಷ ವಾಗಿತ್ತು. ಜತೆಗೆ ಹಲವಾರು ಸ್ವಯಂ ಸೇವಾ ಕಾರ್ಯಕರ್ತರು, ಸಾರ್ವಜನಿಕ ಭಕ್ತರು ಈ ಧಾರ್ಮಿಕ ಕಾರ್ಯಕ್ಕೆ ಆಗಮಿಸಿ ತನು, ಮನ, ಧನದ ಸಹಕಾರ ನೀಡಿ ಪೂಜೆಯ ಯಶಸ್ಸಿಗೆ ಕಾರಣೀಭೂತರಾದರು. ಶ್ರೀ ಆಂಜನೇಯ ಸ್ವಾಮಿ ಪೂಜೆ ಬಹು ವಿಜ್ರಂಭಣೆ ಯಿಂದ ನಡೆದಿದ್ದಕ್ಕೆ ಈ ಸಂಧರ್ಭದಲ್ಲಿ ಸಾವಿರಾರು ಜನರು ಸಾಕ್ಷಿಗಳಾದರು. ಅದರಲ್ಲೂ ಶ್ರೀ ಕೃಷ್ಣ ಮಂದಿರ ಸಭಾಂಗಣದಲ್ಲಿ ಕನ್ನಡದ ಕಲರವ ಹಿಂದೆಂದಿಗಿಂತಲೂ ಮಾರ್ದನಿಸುತಿತ್ತು.

ಪೂರ್ವಭಾವಿ ತಯಾರಿ: ಪೂಜಾಕಾರ್ಯಕ್ರಮದ ಪೂರ್ವಭಾವಿ ತಯಾರಿಕೆಯೊಂದಿಗೆ ಕಾರ್ಯಕಾರಿ ಸಮಿತಿ, ಉತ್ಸಾಹಿ ಸ್ವಯಂ ಸೇವಾ ಕಾರ್ಯಕರ್ತರ ತಂಡ ಕಳೆದ ಹಲವಾರು ದಿನಗಳಿಂದ ವ್ಯವಸ್ಥಿತವಾಗಿ ಕಾರ್ಯಯೋಜನೆಗಳನ್ನು ಸಿದ್ದ ಪಡಿಸಿಕೊಂಡು ಪೂಜಾ ಕಾರ್ಯದ ಯಶಸ್ಸಿನಲ್ಲಿ ಭಾಗಿಗಳಾದರು. ಪೂಜೆಗಾಗಿ ಬೆಂಗಳೂರಿನಿಂದ ವಿಶೇಷವಾಗಿ ಹೂವು, ಪೂಜ ಸಾಮಗ್ರಿ, ಶಲ್ಯ ಹಾಗು ಒಂದು ಸಾವಿರ ಹನುಮಾನ್ ಚಾಳಿಸಾ ಕನ್ನಡ, ಹಿಂದಿ/ಇಂಗ್ಲೀಶ್ ಪುಸ್ತಕಗಳನ್ನು ತರಿಸಿದ್ದರು.

ಪೂಜಾ ವೇದಿಕೆ: ಶ್ರೀ ಆಂಜನೇಯ ಪೂಜಾ ವೇದಿಕೆಯನ್ನು ಸ್ವಯಂ ಸೇವಾ ಕಾರ್ಯಕರ್ತರು ಮತ್ತು ಸಮಿತಿ ಸದಸ್ಯರು ಅತೀ ಉತ್ಸಾಹದಿಂದ ಫಲ ಪುಷ್ಪಗಳಿಂದ ಅಲಂಕರಿಸಿದ್ದರು. ಸುತ್ತಲೂ ಪುಷ್ಪಾಲಂಕಾರದೊಂದಿಗೆ , ಮಧ್ಯದಲ್ಲಿ ಬೃಹತ್ ಶ್ರೀ ಆಂಜನೇಯ ಚಿತ್ರಪಟ ಅದರ ಮುಂದೆ ಸುಂದರ ಶ್ರೀ ಆಂಜನೇಯ ವಿಗ್ರಹ, ಎರಡು ಬದಿಗಳಲ್ಲಿ ಶ್ರೀ ಆಂಜನೇಯ ಮತ್ತು ಶ್ರೀ ರಾಮ, ಲಕ್ಷ್ಮಣ ಮತ್ತು ಸೀತಾದೇವಿ ಕಟೌಟ್ ಇರಿಸಿದ್ದು, ಪೂಜಾ ಸಭಾಂಗಣದಲ್ಲಿ ಭಕ್ತ ಸಮೂಹವನ್ನು ಆಕರ್ಷಿಸುತ್ತಿತ್ತು.

ಪೂಜಾ ವಿಧಿ ವಿಧಾನ:- ಸರ್ವರ ಪರವಾಗಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ಸಂಕಲ್ಪದೊಂದಿಗೆ ಪೂಜಾ ವಿಧಿ ವಿಧಾನಗಳನ್ನು ಶ್ರೀ ಲಕ್ಷ್ಮಿನಾರಾಯಣ ಆಚಾರ್ಯರು ಪ್ರಾರಂಭಿಸಿದರು.  ಶ್ರೀ ಆಂಜನೇಯ ವಿಗ್ರಹ ಪ್ರತಿಷ್ಠಾಪನೆಯ ನಂತರ, ಪಂಚಾಮೃತ ಹಾಗು ಗಂಧದ ಮಹಾಅಭಿಷೇಕ ನೆರೆವೇರಿಸಿದರು. ಮೂರ್ತಿಗೆ ಸುವರ್ಣ ಕಿರೀಟ ಧಾರಣೆ ಮಾಡಿ, ನಂತರ ಅಲಂಕಾರ, ಪೂಜೆ ಮತ್ತು ವಡಮಾಲ ಸಮರ್ಪಣೆ ಮಾಡಿದರು.

ಭಜನೆ ಮತ್ತು ಭಕ್ತಿ ಗೀತೆಗಳು: ರಾಮ ರಕ್ಷಾ ಸ್ತೋತ್ರ, ಪವಮಾನ, ಹರಿವಾಯು ಸ್ತುತಿ, ಹನುಮಾನ್ ಚಾಳಿಸಾ, ಆಂಜನೇಯ ಸ್ತೋತ್ರ, ಗಣಪತಿ, ಶ್ರೀಕೃಷ್ಣ,ಲಕ್ಷ್ಮಿ ದೇವಿ, ರಾಮನಾಮ, ಇನ್ನು ಮುಂತಾದ ದೇವರ ಹಾಡುಗಳನ್ನು, ಡಿವೈನ್ ಪಾರ್ಕ್, ತುಳುಕೂಟ, ಸಾಯಿ ಸಮಿತಿ, ಮತ್ತು GSB Group ನವರು ಹಾಡಿ ಭಕ್ತರನ್ನು ಭಾವ ಪರವಶಗೊಳಿಸಿದರು,  ಕನ್ನಡದ ಭಕ್ತಿ ಗೀತೆಗಳು, ದೇವರ ನಾಮ, ಭಜನೆ ಗಳಿಂದ ಸಭಾಂಗಣದಲ್ಲಿ ವಿಶೇಷ ಮೆರುಗನ್ನು ನೀಡಿತ್ತು. ತಮಿಳುನಾಡು ಚೆನ್ನೈ ನಿಂದ ವಿಶೇಷವಾಗಿ ಬಂದಿದ್ದ ಶ್ರೀ ವಾಸುದೇವರಾವ್ (ಮೂಲತಃ ಬೆಂಗಳೂರಿನವರು) ಹರಿ ವಾಯು ಸ್ತುತಿ ಪಠಣ ಮಾಡಿದರು. ಶ್ರೀಯುತರು ಹರಿವಾಯುಸ್ತುತಿ ಯಲ್ಲಿ ಪಾರಂಗತರಾಗಿದ್ದು, ಭಾರತ ದೇಶದ ಎಲ್ಲೆಡೆ ಹಾಗು ವಿದೇಶಗಳಲ್ಲಿ ಸಹ ಸಾವಿರಾರು ಕಡೆ ಪಠಣ ಮಾಡಿದ್ದಾರೆ.

ಮಹಾಪ್ರಸಾದ ವಿತರಣೆ: ಮಹಾಮಂಗಾಳಾರತಿಯ ನಂತರ ತೀರ್ಥ ಪ್ರಸಾದ ಸ್ವೀಕರಿಸಿದ ನಂತರ ದೇವಸ್ಥಾನದ ಆವರಣ ದಲ್ಲಿ ಅತ್ಯಂತ ರುಚಿಯಾದ ಭೋಜನವನ್ನು ಮಹಾಪ್ರಸಾದವನ್ನಾಗಿ ಸ್ವೀಕರಿಸಿದ ಭಕ್ತ ಸಮೂಹ ಓಂಕಾರ ಸಮಿತಿಯವರನ್ನು ಎಲ್ಲೆಡೆ ಪ್ರಶಂಸಿತಿದ್ದುದ್ದನ್ನು ಕಂಡು ಬಂತು, ಪೂಜಾಕಾರ್ಯದಲ್ಲಿ ಮಹಾಪ್ರಸಾದ ವಿತರಣೆಯ ಜವಬ್ಧಾರಿಯನ್ನು ವಹಿಸಿಕೊಂಡಿದ್ದ ಕಾರ್ಯಕರ್ತರ ತಂಡ ವಿತರಣೆ ಕಾರ್ಯವನ್ನು ಅಚ್ಚುಕಟ್ಟಾಗಿ ನೆರವೇರಿಸಿದರು.

ಸೇವಾ ವಿವರ: ಸಾರ್ವಜನಿಕರಿಗೆ, ಮಹಾಪ್ರಸಾದ ಸೇವೆ, ಸರ್ವ ಸೇವೆ, ಹರಿವಾಯುಸ್ತುತಿ/ ಹನುಮಾನ್ ಚಾಲಿಸಾ ಪಾರಾಯಣ, ಹಾಗೂ ವಡಮಾಲೆ ಸಮರ್ಪಣೆ ಸೇವೆಯ ಸೌಲಭ್ಯ ನೀಡಿದ್ದರು, ಸೇವೆಸಲ್ಲಿಸಿದ ಭಕ್ತರಿಗೆ, ಫಲ ಪುಷ್ಪ, ತಾಂಬೂಲದೊಂದಿಗೆ ಸೇವೆಗೆ ತಕ್ಕಂತೆ ಓಂಕಾರ ಮುದ್ರಿತ ಬೆಳ್ಳಿನಾಣ್ಯ ಗಳನ್ನು ನೀಡಲಾಯಿತು

ಓಂಕಾರ ಸಮಿತಿಯ ವಿಶೇಷ ವೇನೆಂದರೆ, ಇಲ್ಲಿ ಅಧ್ಯಕ್ಷ, ಉಪಾದ್ಯಕ್ಷ, ಖಜಾಂಚಿ ಎನ್ನುವ ಯಾವುದೇ ಹುದ್ದೆ ಗಳನ್ನು ಹೊಂದಿಲ್ಲದೆ ಎಲ್ಲ ಕಾರ್ಯಕರ್ತರು ಸ್ವಯಂ ಪ್ರೇರಣೆ ಯಿಂದ ತಮಗೆ ವಹಿಸಿದ ಕೆಲಸವನ್ನು ಕೆಲಸವನ್ನು   ಅಚ್ಚುಕಟ್ಟಾಗಿ ಜವಬ್ದಾರಿಯಿಂದ ನಿರ್ವಹಿಸಿ ಜನರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ, ಈ ಸಮಿತಿಯು, ಇದುವರೆಗೂ ಶ್ರೀ ಆಂಜನೇಯ ಪೂಜೆ, ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ,  ಶತಾವಧಾನಿ ಡಾ| ರಾ. ಗಣೇಶ್ ರವರಿಂದ ಓಂಕಾರ ಜ್ಞಾನಾಮೃತ - ೨೦೧೩, ಮತ್ತು  ಡಾ. ವಿಧ್ಯಾಭೂಷಣರವರಿಂದ ನಾದಾಮೃತ - ೨೦೧೩ ಕಾರ್ಯಕ್ರಮಗಳನ್ನು ಏರ್ಪಡಿಸಿ ಮಸ್ಕತ್ ಕನ್ನಡಿಗರಿಗೆ ಭಕ್ತಿ, ಜ್ಞಾನಾ ಮತ್ತು ಸಂಗೀತ ರಸದೌತಣವನ್ನು ನೀಡಿದೆ.

ಓಮಾನ್ ಕರ್ನಾಟಕ ಆರಾಧಾನ ಸಮಿತಿಯು ಶ್ರೀ ಆಂಜನೇಯ ಪೂಜೆಯನ್ನು ಅಯೋಜಿಸಿ, ಭಕ್ತಾಧಿಬಂಧುಗಳಿಗೆ ಅವಕಾಶವನ್ನು ಕಲ್ಪಿಸಿ ಯಶಸ್ಸು ಪಡೆದ ಸರ್ವರಿಗೂ ನಾವು ಒಮಾನ್ ಕನ್ನಡಿಗರ ಪರವಾಗಿ ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.


ಲೇಖಕರು: ಪಿ.ಎಸ್.ರಂಗನಾಥ, ಮಸ್ಕತ್
















Click below headings