ಗುರುವಾರ, ಅಕ್ಟೋಬರ್ 2, 2014

ಮಸ್ಕತ್ ಕನ್ನಡಿಗರ ಮನಸೂರೆಗೊಂಡ ನವಸಂಜೆ - ೨೦೧೪ ಕಾರ್ಯಕ್ರಮ


ಭಾರತೀಯ ಸಾಮಾಜಿಕ ವೇದಿಕೆ - ಕರ್ನಾಟಕ ವಿಭಾಗ ವತಿಯಿಂದ ನವರಾತ್ರಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ನವಸಂಜೆ ಕಾರ್ಯಕ್ರಮ ದಿನಾಂಕ ೨೭.೦೯.೨೦೧೪ ರಂದು ಅತ್ಯಂತ ಯಶಸ್ವಿಯಾಗಿ ಮಸ್ಕತ್ ನ ISC-MP Hall ನಲ್ಲಿನಡೆಯಿತು. ಕಾರ್ಯಕ್ರಮದಲ್ಲಿ ಅಂತ್ಯಾಕ್ಷರಿ ಮತ್ತು ಕನ್ನಡ ಚಿತ್ರಗೀತೆಗಳ ರಸಪ್ರಶ್ನೆ ಕಾರ್ಯಕ್ರಮ, ಕನ್ನಡ ಕಲಿಕೆಯ ಮಹತ್ವ ಕುರಿತು ಹಿತನುಡಿ, ದಾಂಡಿಯ ಮತ್ತು ಘರ್ಭ ನೃತ್ಯ ಕಾರ್ಯಕ್ರಮ ವನ್ನು ಏರ್ಪಡಿಸಲಾಗಿತ್ತು.

ಕನ್ನಡ ಸಂಘದ ಕಾರ್ಯಕಾರಿ ಪ್ರಧಾನ ಸಂಚಾಲಕರಾದ ಶ್ರೀ ಪ್ರಸಾದ್ ರವರು  ಪ್ರಾಸ್ತಾವಿಕ ಭಾಷಣ ಮಾಡಿ ನವ ಸಂಜೆ ಕಾರ್ಯಕ್ರಮದ ಕುರಿತು ವಿವರ ಗಳು  ಹಾಗೂ ಹೊಸ ದಾಗಿ ರೂಪುಗೊಂಡ ಸಮಿತಿಯ ಬಗ್ಗೆ ಮಾಹಿತಿ ನೀಡಿದರು. ತದನಂತರ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿಗಳಾದ  ಶ್ರೀಮತಿ ವಿದ್ಯಾರಾಣಿಯವರು ಕಾರ್ಯಕ್ರಮ ವನ್ನು ಮುಂದುವರೆಸಿದರು.

ಅಂತ್ಯಾಕ್ಷರಿ ಸ್ಪರ್ಧೆಗೆ ಸುಮಾರು ೪೨ ಜನರು ತಮ್ಮ ಹೆಸರನ್ನು ನೊಂದಾಯಿಸಿದ್ದರು, ೪೫ ನಿಮಿಷ ಗಳ ಕಾಲ ನಡೆದ ನಿರ್ಗಮನ ಸುತ್ತಿನಲ್ಲಿ ಪಾಲ್ಗೊಂಡಿದ್ದ ಎಲ್ಲ ೪೨ ಸ್ಪರ್ಧಿಗಳಲ್ಲಿ ೩ ಜನರನ್ನೊಳಗೊಂಡ ೬ ತಂಡಗಳ ೧೮ ಜನ ಅಂತಿಮ ಸುತ್ತಿಗೆ ಆಯ್ಕೆಯಾದರು.

ಅವರಲ್ಲಿ ಶ್ರೀ ಹಿರಿಯಣ್ಣ, ಶ್ರೀ ಮತಿ ಶ್ರೀ ಮಾತ, ಮತ್ತು ಶ್ರೀಮತಿ ಸುಮ ಶಶಿ ಪ್ರಕಾಶ್ ರವರ ತಂಡ ಪ್ರಥಮ ಸ್ಥಾನ ಗಳಿಸಿತು,
ದ್ವಿತಿಯ ಸ್ಥಾನವನ್ನು ಶ್ರೀ ರಮೇಶ್, ಶ್ರೀಮತಿ ನಿರ್ಮಲ ಶಿವಣ್ಣ ಮತ್ತು ಶ್ರೀಮತಿ  ರಾಧ ರಾಮಚಂದ್ರಪ್ಪ ರವರು ಪಡೆದರು.
ನಂತರದ ಸ್ಥಾನವನ್ನು ಶ್ರೀ ಶ್ರೀನಿವಾಸ್, ಶ್ರೀ ಮತಿ ರೇಶ್ಮಾ ಹಿತೇಶ್ ಮತ್ತು ಶ್ರೀಮತಿ  ಜಯಲಕ್ಷ್ಮಿ ಶೆಣೈ ರವರ ತಂಡ ಪಡೆಯಿತು.

ಸ್ಪರ್ಧೆಯಲ್ಲಿ ಜಯಶಾಲಿಯಾದ ಮೂರುತಂಡಗಳಿಗೆ ಕ್ರಮವಾಗಿ ಮೊದಲನೆ, ಎರಡನೇ ಮತ್ತು ಮೂರನೇ ಬಹುಮಾನವನ್ನು ನೀಡಲಾಯಿತು.

ಅಂತ್ಯಾಕ್ಷರಿ ಕಾರ್ಯಕ್ರಮದ ಮಧ್ಯೆ ಸಭಿಕರಿಗೂ ಸಹ ಸ್ಪರ್ಧೆಯಲ್ಲಿ ರಸಪ್ರಶ್ನೆ ಗಳಿಗೆ ಉತ್ತರ ನೀಡಲು ಅವಕಾಶವಿತ್ತು, ಸುಮಾರು ೧೦ ಜನ ಅದೃಷ್ಟ ಸಭಿಕರು ಸರಿ ಉತ್ತರ ನೀಡಿ ಬಹುಮಾನ ಗಳಿಸಿದರು.

ಅಂತ್ಯಾಕ್ಷರಿ ಮತ್ತು ರಸಪ್ರಶ್ನೆ ಕಾರ್ಯಕ್ರಮವನ್ನು ಶ್ರೀ ಜಾನಕೀನಾಥ್ ರವರು ಶ್ರೀಮತಿ ಸುಪ್ರಿತಾರಾವ್, ಶ್ರೀಮತಿ ಪ್ರೇಮಾ ಮತ್ತು ಶ್ರೀ ದೀಪಕ್ ರಾವ್ ರವರ ಸಹಯೋಗ ದೊಂದಿಗೆ ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು.


ಈ ಮಧ್ಯೆ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯ ವ್ಯಕ್ತಿಗಳಿಗೆ ಕನ್ನಡ ಸಂಘದ ಕಾರ್ಯಕಾರಿ ಪ್ರಧಾನ ಸಂಚಾಲಕರಾದ ಶ್ರೀ ಪ್ರಸಾದ್ ರವರು ಮತ್ತು ಸಹ ಸಂಚಾಲಕರಾದ ಶ್ರೀ ಸಂಜಯ್ ಜೋಗ್ ರವರು ಹೂಗುಚ್ಚ ನೀಡಿ ಬರ ಮಾಡಿಕೊಂಡರು.
ನಾಡಗೀತೆ ಜಯ ಭಾರತ ಜನನಿಯ ತನುಜಾತೆ ಮತ್ತು ಹಚ್ಚೇವು ಕನ್ನಡದ ದೀಪ ಗೀತೆಗಳನ್ನು ಸಂಘದ ಸದಸ್ಯರ ಶ್ರೀಮತಿ ಸುಮನ ಶಶಿಧರ್, ಶ್ರೀಮತಿ ಅನುಪಮ ಪ್ರಸಾದ್,  ಶ್ರೀಯುತ ರಾಜು, ಡಾ.ಸಂತೋಷ್, ಶ್ರೀಮತಿ ಗೀತಾ ಭಟ್ ಮತ್ತು ಶ್ರೀ ರವಿಪ್ರಕಾಶ್ ರವರ ಅತ್ಯಂತ ಸೊಗಸಾಗಿ ಹಾಡಿ ಮಸ್ಕತ್ ಕನ್ನಡಿಗರ ಕನ್ನಡಭಿಮಾನವನ್ನು ಜಾಗೃತಿ ಗೊಳಿಸುವಲ್ಲಿ ಯಶಸ್ವಿಯಾದರು.

ಸಂಘದ ಕೆಲ ಸದಸ್ಯರು ನವರಾತ್ರಿ ಹಬ್ಬದ ಪ್ರಯುಕ್ತ ಕೆಲ ಪೋಸ್ಟರ್ ಗಳನ್ನು ಸಿದ್ಧಪಡಿಸಿ ಕೊಂಡು ಬಂದಿದ್ದು ವಿಶೇಷವಾಗಿತ್ತು. ಹಬ್ಬದ ಕುರಿತು ಹಲವಾರು ಮಾಹಿತಿಗಳನ್ನು ಚಾರ್ಟ್ ಗಳಲ್ಲಿ ವರ್ಣ ರಂಜಿತ ಚಿತ್ರ ಗಳ ಸಮೇತ ನೀಡಿದ್ದರು.

ಮಸ್ಕತ್ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಕೆಯ ಮಹತ್ವ ದ ಕುರಿತು ಹಿತ ವಚನವನ್ನು  ಶ್ರೀ ಯೋಗಾನಂದ್ ರವರು ನೀಡಿದರು, ಶ್ರೀಯುತರು ಹಲವಾರು ವರ್ಷಗಳ ಕಾಲ ಕನ್ನಡ ಸಂಘದಲ್ಲಿ ಸೇವೆಸಲ್ಲಿದ್ದು, ಮಸ್ಕತ್ ನಲ್ಲಿ ಮಕ್ಕಳಿಗೆ ಕನ್ನಡ ಕಲಿಸಲು ಸುಮಾರು ೧೦ ವರ್ಷಗಳ ಕಾಲ ಕನ್ನಡ ತರಗತಿಗಳನ್ನು ನಡೆಸಿದ್ದಾರೆ. ಮಸ್ಕತ್ ನ ಕನ್ನಡ ಶಾಲೆಗಳಲ್ಲಿ ಕಲಿತ ಮಕ್ಕಳು ಕರ್ನಾಟಕ ರಾಜ್ಯದಲ್ಲಿ ವೃತ್ತಿ ಶಿಕ್ಷಣ ತರಗತಿಗಳಿಗೆ CET ಗೆ ರಾಜ್ಯದಿಂದ ಪ್ರವೇಶ ಪಡೆಯಲು ಹಾಗು ದಿನನಿತ್ಯದ ವ್ಯವಹಾರ ಗಳಿಗೆ ಕನ್ನಡ ಕಲಿಯುವುದರಿಂದ ಆಗುವ ಉಪಯೋಗಗಳ ಕುರಿತು ಹಲವಾರು ಮಾಹಿತಿಗಳನ್ನು ನೀಡಿದರು ಹಾಗು ಅದರ ಪ್ರಯೋಜನ ಪಡೆದ ಪೋಷಕರ ಬಗ್ಗೆ ವಿವರ ಸಹ ನೀಡಿದರು.
ಮಾ. ಅನುಪ್ ಸಾರಂಗ್, ಕನ್ನಡ ಸಂಘದ ಮುಂದಿನ ಕಾರ್ಯಕ್ರಮವಾದ ಕರ್ನಾಟಕ ಉತ್ಸವದ ಕುರಿತು ಕಿರು ಪರಿಚಯ ನೀಡಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯ ಅಥಿತಿಗಳಾದ ಭಾರತೀಯ ಸಾಮಾಜಿಕ ವೇದಿಕೆ ಯ ಅಧ್ಯಕ್ಷರಾದ ಶ್ರೀ ಸತೀಶ್ ನಂಬಿಯಾರ್ ಮತ್ತು ಬ್ಯಾಂಕ್ ಮಸ್ಕತ್ ನ ಶ್ರೀ ರಾಮಕೃಷ್ಣ ರವರು  ವಿಜೇತ ಸ್ಪರ್ಧಿಗಳಿಗೆ ಬಹುಮಾನ ವಿತರಣೆ ಮಾಡಿದರು.

ಸಂಘದ ವತಿಯಿಂದ ಗಣ್ಯ ಅಥಿತಿ ಗಳಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು, ಭಾರತೀಯ ಸಾಮಾಜಿಕ ವೇದಿಕೆ ಯ ಅಧ್ಯಕ್ಷರಾದ ಶ್ರೀ ಸತೀಶ್ ನಂಬಿಯಾರ್ ರವರು ಕಾರ್ಯಕ್ರಮದ ಕುರಿತು ಕನ್ನಡದಲ್ಲಿ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಹೊಸದಾಗಿ ರೂಪುಗೊಂಡ ಸಮಿತಿಯು ಅತಿ ಕಡಿಮೆ ಕಾಲಾವಧಿಯಲ್ಲಿ ನವಸಂಜೆ ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಿ ಸಭಿಕರಿಗೆ ಮನರಂಜನೆ ನೀಡುವುದರಲ್ಲಿ ಯಶಸ್ಸು ಕಂಡಿದೆ. ಈ ಸಮಿತಿಯಿಂದ ಇಂತಹ ಹಲವಾರು ಕಾರ್ಯಕ್ರಮಗಳು ಸತತವಾಗಿ ಬರಲಿ ಜನರ ಮೆಚ್ಚುಗೆಯನ್ನು ಗಳಿಸಲಿ ಎಂದು ಹಾರೈಸಿದರು.
ಮುಖ್ಯ ಪ್ರಾಯೋಜಕರಾದ ಬ್ಯಾಂಕ್ ಮಸ್ಕತ್ ನ ಶ್ರೀ ರಾಮಕೃಷ್ಣ ರವರು ಮಾತನಾಡಿ, ಕಾರ್ಯಕ್ರಮ ತುಂಬ ಅಚ್ಚುಕಟ್ಟಾಗಿ ಮೂಡಿ ಬಂದಿದ್ದು, ಇನ್ನು ವಿವಿಧ ರೀತಿಯ ಸದಭಿರುಚಿ ಕಾರ್ಯಕ್ರಮಗಳನ್ನು ರೂಪಿಸಿ ಆಯೋಜಿಸಿ ಕನ್ನಡ ಸಂಘದ  ಹೆಸರನ್ನು ರಾರಾಜಿಸುವಂತೆ ಮಾಡುವ ಜವಬ್ದಾರಿ ಸಂಘದ ಮೇಲಿದೆ, ಜನ ನಿಮ್ಮ ಮೇಲೆ ಇನ್ನು ತುಂಬ ನೀರಿಕ್ಷೆ ಯನ್ನು ಇಟ್ಟುಕೊಂಡಿದ್ದಾರೆ, ನಮ್ಮ ಪ್ರೋತ್ಸಾಹ ಎಂದಿನಂತೆ ಮುಂದುವರೆಯುತ್ತೆ. ನಿಮ್ಮ ಎಲ್ಲ ಕಾರ್ಯಕ್ರಮಗಳು ಯಶಸ್ಸು ಕಾಣಲಿ ಎಂದು ಹಾರೈಸಿದರು.


ಸಂಘದ ಖಜಾಂಚಿ ಶ್ರೀ ಸುಧೀರ್ ಶೆಟ್ಟಿ ಯವರು  ಡಿಜೆ ಜೆಸನ್ ರವರ ಪರಿಚಯ ನೀಡಿದರು, ಜೆಸನ್ ರವರು  ಚಿಕ್ಕವಯಸ್ಸಿನಲ್ಲಿಯೆ ಡಿಜೆ ಸಂಗೀತ ಸಂಯೋಜನೆಯಲ್ಲಿ ಹಲವಾರು ಆಲ್ಬಮ್ ಗಳನ್ನು ತಂದಿದ್ದು ಕರಾವಳಿಯಲ್ಲಿ ಬಹಳಷ್ಟು ಹೆಸರು ಮಾಡಿದ್ದಾರೆ. ಇವರ ಸಂಗೀತ ಸಂಯೋಜನೆ ಯಲ್ಲಿ ನವಸಂಜೆ ಕಾರ್ಯಕ್ರಮದಲ್ಲಿ ದಾಂಡಿಯ ಮತ್ತು ಘರ್ಭ ನೃತ್ಯ ಕಾರ್ಯಕ್ರಮ ನಡೆಯಿತು. ಕಿರಿ ಮತ್ತು ಹಿರಿಯರೆನ್ನದೆ ಎಲ್ಲವಯೋಮಾನದವರು ಕನ್ನಡ ಚಿತ್ರಗೀತೆಗಳಿಗೆ ಒಂದು ಘಂಟೆಗೂ ಹೆಚ್ಚು ಹೊತ್ತು ಕುಣಿದು ಕುಪ್ಪಳಿಸಿದ್ದು ನವಸಂಜೆ ಕಾರ್ಯಕ್ರಮಕ್ಕೆ ಮೆರಗು ನೀಡಿತು. ಸಂಘದ ವತಿಯಿಂದ ಡಿಜೆ ಜೆಸನ್ ರವರಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು
ಕಾರ್ಯಕ್ರಮದ ಕೊನೆಗೆ ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಶ್ರೀಮತಿ ಸುಪ್ರಿತಾರಾವ್ ರವರು ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲರಿಗೂ ವಂದನೆಗಳನ್ನು ಅರ್ಪಿಸಿದರು. ತದನಂತರ ಸ್ವಾಗತ್ ಗ್ರೂಪ್ ಆಫ್ ಹೋಟೆಲ್ಸ್ ನ ಬಲ್ಲಾಳ್ ರವರ ತಂಡ ತಯಾರಿಸಿದ ರುಚಿಕರವಾದ ಭೋಜನವನ್ನು ಸಂಘದ ಸದಸ್ಯರು ಸವಿದರು.

ಅತಿ ಕಡಿಮೆ ಸಮಯದಲ್ಲಿ ಅಚ್ಚುಕಟ್ಟಾದ ಕಾರ್ಯಕ್ರಮವನ್ನು ಏರ್ಪಡಿಸಿ ಕನ್ನಡ ಸಂಘದ ಹೊಸ ಸಮಿತಿ ತಮ್ಮ ಚೊಚ್ಚಲ ಕಾರ್ಯಕ್ರಮದಲ್ಲಿ ಯಶಸ್ಸು ಗಳಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.





























































































ಶುಕ್ರವಾರ, ಏಪ್ರಿಲ್ 4, 2014

ಬುದ್ದಿಜೀವಿಗಳೋ ಬುದ್ದುಜೀವಿಗಳೋ?




ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಆಯ್ಕೆಯಾದರೆ ಭಾರತದಲ್ಲಿ ಸರ್ವಾಧಿಕಾರ ಸೃಷ್ಟಿಯಾಗುತ್ತದೆ ಎಂದು ಸಾಹಿತಿ ಯು.ಆರ್. ಅನಂತಮೂರ್ತಿ ಹೇಳಿದ್ದಾರೆ. ಅಲ್ಲಾ ಸ್ವಾಮಿ, ರಾಜ್ಯ ಸರ್ಕಾರದಲ್ಲಿ ಒಬ್ಬ ಮಂತ್ರಿ ಯನ್ನು ಸೇರಿಸಿಕೊಳ್ಳುವುದಕ್ಕೆ, ಲೋಕಸಭೆ ಅಭ್ಯರ್ಥಿ ಆಯ್ಕೆ ಪಟ್ಟಿ ಅಂತಿಮ ಮಾಡಲು, ದೆಹಲಿ ವಿಮಾನ ವೇರಿ ಮೇಡಂ ಮನೆ ಮುಂದೆ ರಾಜ್ಯ ನಾಯಕರು ಅಪ್ಪಣೆಗಾಗಿ ಕಾಯುತ್ತಾರಲ್ಲ ಇದು ಯಾವ ಧೋರಣೆ?

ಕಳೆದ ೬೦ ವರ್ಷ ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೇಸ್ ಪಕ್ಷ ಇಷ್ಟು ದಿನದವರೆಗೂ ನಡೆಸಿದ್ದು ಏನು? ಕಾಂಗ್ರೆಸ್ ನ ಹಿರಿಯ ಮುಖಂಡ ಜಾಫರ್ ಶರೀಫ್ ಗೆ ಟಿಕೆಟ್ ಕೊಡದೆ ಸತಾಯಿಸಿದ್ದು ಯಾವ ಸರ್ವಾಧಿಕಾರ ಧೋರಣೆ ಸ್ವಾಮಿ?

ಸ್ವಾಮಿ ಕಾರ್ನಾಡ್ ರೇ, ರಾಜಕೀಯ ಪಕ್ಷಗಳಿಂದ ರಾಜ್ಯ, ದೇಶದಲ್ಲಿ ಜಾತಿ ಧರ್ಮ ದ ಆಧಾರದಲ್ಲಿ ಓಲೈಕೆ ನಡೀತಾಯಿದೆ, ಅದೇಸಮಯದಲ್ಲಿ ನೀವು ಹೇಳ್ತಿದೀರ,  "ನಂದನ್ ನೀಲೇಕಣಿ ನಮ್ಮ ಸಂಭಂಧಿಕ ಅದಕ್ಕೆ ಅವರ ಪರ ಪ್ರಚಾರ ನಡೆಸ್ತಿದೀನಿ" ಅಂತೀರಿ, ಇದು ಸ್ವಜನ ಪಕ್ಷಪಾತ ವಲ್ಲದೆ ಇನ್ನೇನು?

"ಸ್ವಂತ ಶಕ್ತಿ" ಯಿಂದ ೭೦೦೦ ಕೋಟಿ ಆಸ್ತಿ ಮಾಡಿರುವ ನಂದನ್ ನೀಲೇಕಣಿ, ಅಷ್ಟು ಹಣ ಇಟ್ಕೊಂಡು ಏನು ಮಾಡ್ತಾರೆ? ಯಾವುದಾದರು ಜನಪರ ಕಾರ್ಯಕ್ರಮ ಅಷ್ಟೊಂದು ಹಣವನ್ನು ಬಳಸುವುದಕ್ಕೆ ನೀವ್ಯಾಕೆ ಸಲಹೆ ಕೊಡೋದಿಲ್ಲ?
ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರೈತ ವಿಠ್ಠಲ್ ಅರಭಾವಿ  ಚೆನ್ನಾಗಿ ಕುಡಿದು ಆತ್ಮ ಹತ್ಯೆ ಮಾಡಿಕೊಂಡ, ಅದಕ್ಕೆ ಸರ್ಕಾರಕ್ಕೆ ಯಾವುದೇ ಸಂಭಂದ ವಿಲ್ಲ ಅಂತ ಉಡಾಫೆಯಾಗಿ ಮಾತಾಡ್ತಾರೆ. ಪರಮೇಶ್ವರ್ ರವರು ದೇವೇಗೌಡ ಯಾವಾಗ ವಿಷ ಕುಡಿದು ಸಾಯ್ತಾರೆ ಅಂತ ಕಾಯ್ತಾಇದ್ದೇನೆ? ಅಂತ ಕೀಳು ಮಟ್ಟದಲ್ಲಿ ಮಾತಾಡ್ತರೆ ಇದೆಲ್ಲ ವನ್ನು ಖಂಡಿಸೋದಿಕ್ಕೆ ನಿಮಗೆ ಏನಾಗಿದೆ?

ಅಳುವ ಗಂಡಸರನ್ನು ನಗುವ ಹೆಂಗಸರನ್ನು ನಂಬಬಾರದು ಸಿದ್ಧರಾಮಯ್ಯನವರು ಹೆಚ್ ಡಿಕೆ ಗೆ ಲೇವಡಿ ಮಾಡಿದ್ದಾರೆ, ಇಂತಹ ಹೇಳಿಕೆಗೆ ನಿವ್ಯಾಕೆ ಅವರಿಗೆ ತಿಳಿ ಮಾತು ಹೇಳಲಿಲ್ಲ? ಈ ದೇಶದ ಹೆಂಗಸರು ಪ್ರತಿನಿತ್ಯ ಅಳುತ್ತಾ ಇರಬೇಕು ಎಂಬುದು ಅವರ ಅಭಿಪ್ರಾಯವಾಗಿದೆ ಎಂದು ಹೆಚ್ಡಿಕೆ ಟೀಕಿಸಿದ್ದಾರೆ.

ರಾತ್ರಿ 1 ಗಂಟೆಯವರೆಗೆ ಬಾರ್ ಮತ್ತು ಪಬ್ ತೆರೆಯಲು ಅವಕಾಶ ನೀಡಲಾಗಿದೆ, ಹಾಗಾದ್ರೆ ಕುಡಿಯುವುದನ್ನು ಪ್ರೋತ್ಸಾಹಿಸುವ ಸರ್ಕಾರ, ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸದ ಸರ್ಕಾರ ಜನಸಾಮಾನ್ಯರ ಸರ್ಕಾರವೇ?
ಅನಂತ್ ಕುಮಾರ್ ಬೆಂಗಳೂರಿಗಾಗಿ ಯಾವುದೇ ಕೆಲಸ ಮಾಡಿಲ್ಲ ಅಂತೀರಾ? ಹಾಗಾದ್ರೆ ಕಳೆದ ೧೦ ವರ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಯೆ ಸರ್ಕಾರ ಬೆಂಗಳೂರಿಗಾಗಿ ಏನು ಮಾಡಿದೆ ?

ಬೆಲೆ ಏರಿಕೆ ಹಾಗೂ ಆರ್ಥಿಕ ಸಮಸ್ಯೆಗಳಿಂದ ಜನಸಾಮಾನ್ಯರು ತತ್ತರಿಸಿದಾಗ, ನೀವು ಏನು ಮಾಡ್ತಾ ಯಿದ್ದಿರಿ? ನಿಮ್ಮ ಬುದ್ದಿ ಜೀವಿ ಬತ್ತಳಿಕೆಯಿಂದ ಕೇಂದ್ರ ಸರ್ಕಾರಕ್ಕೆ ಯಾಕೆ ಸಲಹೆ ಕೊಡಲಿಲ್ಲ?

ಪಾಕಿಸ್ತಾನ ಸೇನೆಯು ಭಾರತೀಯ ಸೈನಿಕರ ಶಿರಚ್ಛೇದ ಮಾಡಿದಾಗ, ಏನು ಮಾಡ್ತಾಯಿದ್ದಿರಿ? ಒಂದಾದರು ಹೇಳಿಕೆ ಕೊಟ್ಟು ಖಂಡಿಸಿದಿರಾ? ರಾಷ್ಟ್ರ ಸಾರ್ವಭೌಮತ್ವಕ್ಕೆ ಧಕ್ಕೆ ಯಾದಾಗ ಒಂದಾದರು ಪ್ರತಿಭಟನೆ ಮಾಡಿದ್ದೀರಾ ಸ್ವಾಮಿ?

ಯಾರನ್ನು ಕುಲಪತಿಯನ್ನಾಗಿ ನೇಮಕ ಮಾಡಬೇಕು, ಯಾರನ್ನು ಮಾಡಬಾರದು ಎಂಬ ಬಗ್ಗೆ ನನಗೆ ತಿಳಿದಿದೆ. ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಶೋಧನಾ ಸಮಿತಿ ರಚಿಸಿದ್ದೇ ನಾನು. ಹೊರಗಿನವರನ್ನು ಕುಲಪತಿಗಳನ್ನಾಗಿ ನೇಮಕ ಮಾಡಬಾರದು ಎಂದೇನೂ ನಿಯಮವಿಲ್ಲ. ಇದೆಲ್ಲ ನನ್ನ ಅಧಿಕಾರಕ್ಕೆ ಸಂಬಂಧಿಸಿದ್ದು ನನ್ನ ಅಧಿಕಾರವನ್ನು ಪ್ರಶ್ನಿಸಲು ಸಾಹಿತಿ ಯು.ಆರ್.ಅನಂತಮೂರ್ತಿ ಯಾರು ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹೇಳಿದಾಗ, ನಿಮ್ಮ ಮೆಚ್ಚಿನ ರಾಜಕೀಯ ಪಕ್ಷದ ಯಾವ ರಾಜಕಾರಣಿ ನಿಮ್ಮ ಪರವಾಗಿ ಮಾತಾಡಿದರು ಸ್ವಾಮಿ?

ನಿಮ್ಮ ಚಿಕಿತ್ಸೆಗಾಗಿ ಸುಮಾರು 11 ಲಕ್ಷ ರೂಪಾಯಿ ಈಗಾಗಲೇ ವೆಚ್ಚವಾಗಿದೆ. ಅಷ್ಟೊಂದು ದೊಡ್ಡ ಮೊತ್ತವನ್ನು ತಾವು ಭರ್ತಿ ಮಾಡಲು ಅಸಾಧ್ಯವೆಂದು ಹೇಳಿ, ಸರಕಾರದ ವತಿಯಿಂದ ಬಿಲ್ ಪಾವತಿ ಮಾಡುವಂತೆ ತಮ್ಮ ಕುಟುಂಬವು ರಾಜ್ಯ ಸರಕಾರಕ್ಕೆ ಮನವಿ ಮಾಡಿದೆ. ಯಾವುದೇ ಸಂಕೋಚ ವಿಲ್ಲದೆ ರಾಜ್ಯ ಸರ್ಕಾರದ ಮುಂದೆ ಕೈಯೊಡ್ಡು ತ್ತೀರಲ್ಲ, ಕರ್ನಾಟಕ ಜನ ಸಾಮಾನ್ಯರ ತೆರಿಗೆ ಹಣವನ್ನು ಸುಖಾ ಸುಮ್ಮನೆ ಕೊಡೋದಿಕ್ಕೆ ಹಣ ವೇನು ಆಕಾಶ ದಿಂದ ರಾಜ್ಯ ಸರ್ಕಾರದ ಖಜಾನೆ ಗೆ ಬಂದು ಬೀಳುತ್ತಾ?   ಕೆಲವೊಮ್ಮೆ ಅನ್ನಿಸುತ್ತೆ, ಸರ್ಕಾರದಿಂದ ಇಂತಹ ಹಲವಾರು ಪ್ರಯೋಜನ ಪಡೆಯಲು ತಾವು ಕಾಂಗ್ರೆಸ್ ಓಲೈಕೆ ಮಾಡೋದಿಕ್ಕೆ ನಿಂತ್ಕೋತೀರೋ ಏನೋ ಅಂತ.

ಕರ್ನಾಟಕದಲ್ಲಿ ಕನ್ನಡ ಬಾವುಟ, ಕನ್ನಡ ಹೆಸರಿನ ಫಲಕ ಗಳು, ಕನ್ನಡ ಮಾಧ್ಯಮ ಶಿಕ್ಷಣದ ಬಗ್ಗೆ ಕೋರ್ಟ್ ಗಳು ನಮಗೆ ವಿರುದ್ಧ ವಾದ ತೀರ್ಪು ಕೊಟ್ಟಿವೆ, ಸಾಹಿತಿಗಳಾದ ನಿಮಗೆ ಕನ್ನಡಿಗರ ಇಚ್ಚಾ ಶಕ್ತಿ, ಬದ್ಧತೆ ಯನ್ನು ಕಾಪಾಡುವ ಬಗ್ಗೆ ಕನಿಷ್ಟ ಒಂದು ಮಾತು ಇದುವರೆವಿಗೂ ನಿಮ್ಮಿಂದ ಬಂದಿಲ್ಲ, ನಿಮ್ಮ ಹಿತಾಸಕ್ತಿ ಏನು ಅಂತ ರಾಜ್ಯದ ಜನರಿಗೆ ಚೆನ್ನಾಗಿ ಅರ್ಥ ವಾಗಿದೆ ಸ್ವಾಮಿ.

http://www.vijaykarnatakaepaper.com/Details.aspx?id=12273&boxid=3293218


Click below headings