ಭಾನುವಾರ, ಮಾರ್ಚ್ 8, 2015

"ಹ್ಯಾಪಿ ವುಮೆನ್ಸ್ ಡೇ"


ಅಮ್ಮ ಅವರು ಅಪ್ಪ ತಾನೆ,

ಹೌದು,

ಮತ್ತೆ , ಆ ಹೆಂಗಸು ಯಾರು?

ಗೊತ್ತಿಲ್ಲ,

ತಾತ ಅಜ್ಜಿ ನೂ ಕಾರ್ ನಿಂದ ಇಳಿತಾ ಇದಾರೆ, ನೋಡೂ!!! ಅಪ್ಪ ಆ ಹೆಂಗಸಿನ ಕೈ ಹಿಡಿದು ಹೋಗ್ತಾಯಿದಾರೆ ಅಂದ್ರೆ ಅವರು ಹೊಸ ಹೆಂಡತಿ ನಾ?

ಗೊತ್ತಿಲ್ಲ,... ಎಂದು ಹೇಳಿದೊಡನೆ,.ಕಣ್ಣಲ್ಲಿ ನೀರು ಜಿನುಗಿತ್ತು...

ಯಾಕಮ್ಮ ಅಳ್ತಿಯಾ, ಅಳ ಬೇಡ. ಹೌದು ಅಪ್ಪ ಯಾಕೆ ಹೀಗೆ ಮಾಡ್ತಾಯಿದಾರೆ,......

ಅದು ಅವರ ಹುಟ್ಟು ಗುಣ, ಬದಲಾಗಿಲ್ಲ.....ಅವರಿಗೆ ತಾವು ಮಾಡಿದ ತಪ್ಪಿನ ಅರಿವಾಗಿಲ್ಲ.ತಾವೇ ಸರಿ ಎಂದು ಭಾವಿಸಿದ್ದಾರೆ,ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ, ಏಲ್ಲಿಯವರೆಗೆ ಪ್ರತಿಷ್ಟೆ?ಯಾತಸ್ಕೋರ ಈ ತಾಕಲಾಟ,ಏನು ಸಾಧನೆ ಮಾಡಲು, ಈ ಅಹಂ?ಅರಿವು ಮರೆತವನಿಗೆ ಜಗವೆಲ್ಲ ಹಳದಿಅವರ ನಾಟಕ ಜನರಿಗೆ ತಿಳಿದಿಲ್ಲ ಅಂತಲ್ಲ, ತಿಳಿದಿದೆ.ಆದರೆ ಜತೆ ಯಲ್ಲಿರುವವರಿಗೆ ಅದು ಅರ್ಥವಾಗಿಲ್ಲ." ಎಂದು ಅತ್ತೆ ಮಾವ ನನ್ನು ಕುರಿತು ಹೇಳಿದಳು,

ಅಮ್ಮ ಒಂದು ನಿಮಿಷ ಇರ್ರಿ, ಇಗೋ ಬಂದೆ. ಎಂದು ಕಾರಿನ ಬಳಿ ಓಡಿದ.

ಬೇಡ ಕಣೋ, ಹೋಗಬೇಡ, ಅಂತ ಹೇಳುವಷ್ಟರಲ್ಲಿ, ಅವರ ಬಳಿ ಹೋಗಿದ್ದ...ಅಲ್ಲಿ ಇದ್ದ ಆ ಹೆಂಗಸಿನ ಕೈ ಕುಲುಕಿ " ಹಾಯ್ ಆಂಟಿ, ಹ್ಯಾಪಿ ವುಮೆನ್ಸ್ ಡೇ," ಎಂದ..ಅವರಿಗೆ ಆಶ್ಚರ್ಯ!!!

ಆಗ ಅಲ್ಲಿದ್ದ ಅವರ ಅಪ್ಪ, ಅಜ್ಜ ಅಜ್ಜಿ ಗೆ ಗಾಬರಿ. ತಡ ಬಡಾಯಿಸುತ್ತ, ಹೇಯ್ ಪ್ರಣವ್ ಹೇಗೋ ಬಂದೆ ಇಲ್ಲಿ ನೀನು, ಎನ್ನುವಷ್ಟರಲ್ಲಿ, ಅವರಪ್ಪ ಹೇಯ್ ಯಾಕೋ ಬಂದೆ ಇಲ್ಲಿಗೆ ನೀನು ಹೊರಡು ಎಂದು ಅವನನ್ನು ದೂರ ತಳ್ಳಿದ.

ಆ ಹೆಂಗಸು, ಯಾಕೆ ತಳ್ತಾಯಿದ್ದೀರ, ಯಾರು ಆ ಹುಡುಗ?
ಆಗ ಪ್ರಣವ್ "ನಾನು ಇವರ ಮಗ, ಅಲ್ಲಿರುವವರು ನಮ್ಮ ಅಮ್ಮ"ಓಹ್..........ಏನಿದು, ಮದುವೆ ಯಾಗಿ ಮಗ ಇದ್ದರು ಸಹ ಇನ್ನೊಂದು ಮದುವೆ ಯಾಗೋದಿಕ್ಕೆ ಹೊರಟಿದ್ದೀರಲ್ಲಾ? ಯಾಕೆ ಈ ವಿಷಯ ನಮ್ಮಿಂದ ಮುಚ್ಚಿಟ್ಟಿದ್ದಿರಿ, ಒಂದು ಮಾತು ನಮ್ಮ ಹತ್ರ ಹೇಳೀಲ್ಲಾ., ... ನಾಚಿಕೆ ಯಾಗಲ್ವ.....ಒಳ್ಳೆ ಫ್ಯಾಮಿಲಿ ಅಂತ ಅಂದ್ಕೊಂಡೆ, ಆದರೆ ಛೀ......ಇಲ್ಲ....ಅದು,......ಎಂದು ತಡಬಡಾಯಿಸ್ತಾಯಿದ್ದರು,

ಆ ಹೆಂಗಸು ಪ್ರಣವ್ ನ ಕೈ ಹಿಡಿದು "ಬಾ ನಿಮ್ಮ ತಾಯಿ ಹತ್ರ ಹೋಗೋಣ" ಎಂದು ಕೈ ಹಿಡಿದು ಹೊರಟರು.

ಸಾರಿ...... ಅವನಿಗೆ ಗೊತ್ತಾಗಲಿಲ್ಲ, ಏನೇನೋ ಮಾತನಾಡಿಬಿಟ್ಟ.

ಛೇ,,,ಎಲ್ಲಾದ್ರೂ ಉಂಟೆ, ನಾನು ನಿಮಗೆ ಥ್ಯಾಂಕ್ಸ್ ಹೇಳಬೇಕು. ಸಮಸ್ಯೆ ಏನು ಹೇಳಿ?

ನಾವು ಪ್ರೀತಿಸಿ ಮದುವೆ ಯಾಗಿದ್ವಿ, ಅವರು ಅಪ್ಪ ಅಮ್ಮನ ಹೆದರಿಕೆಯಿಂದ ಮದುವೆ ವಿಷಯವನ್ನು ಮುಚ್ಚಿಟ್ಟಿದ್ದರು, ನಂತರ ಸದ್ದಿಲ್ಲದೆ ಬೇರೆ ಹುಡುಗಿಯರ ಕಡೆ ಹಿಂದೆ ಬಿದ್ದಿದ್ದರು, ಅದು ಹೇಗೋ ನನಗೆ ಗೊತ್ತಾಗಿ ಅವರ ಅಪ್ಪ ಅಮ್ಮ ನ ಹತ್ತಿರ ಹೋಗಿ ಜಗಳ ಮಾಡ ಬೇಕಾಯಿತು. ಆದರೆ, ಅವರು ಒಪ್ಪೋದಿಕ್ಕೆ ಸಿದ್ದರಿರಲಿಲ್ಲ. ನಾನು ಪೋಲೀಸ್, ಕೋರ್ಟ್ ಅಲೆಯುವುದು ಬೇಡ ಅಂತ ಎಲ್ಲ ಬಿಟ್ಟು ಒಂಟಿಯಾಗಿ ಈ ನನ್ನ ಮಗನಿಗಾಗಿ ಬದುವುಕುವುದಕ್ಕೆ ಶುರು ಮಾಡಿದೆ..... 

ತಂದೆ, ತಾತ ಅಜ್ಜಿ ಯಾರು ಅಂತ ಅವನಿಗೆ ಸಹ ಗೊತ್ತಾಗಲಿ ಅನ್ನೋ ಉದ್ದೇಶ ದಿಂದ. ಆದರೆ, ಮಗು ಅಪ್ಪ ಯಾರು ಅಂತ ಕೇಳೀದಾಗಲೆಲ್ಲ, ಅವರಿದ್ದ ಕಡೆಯಲ್ಲ ಹೋಗಿ ತೋರಿಸಿಕೊಂಡು ಬರ್ತಾಯಿದ್ದೆ, ಹಾಗಾಗಿ ಇವನಿಗೆ ಅವರ ಮುಖ ಪರಿಚಯ ಇದೆ.

ಓಹ್ ಹಾಗಾ, ಚಿಂತಿಸಬೇಡಿ, ವಿಷಯ ಈಗ ಗೊತ್ತಾಯ್ತಲ್ಲ, ನಾನು ಇವರನ್ನು ಮದುವೆಯಾಗಲ್ಲ. ಮೋಸ ಹೋಗುವವರು ಇರೋವರೆವಿಗೂ ಮೋಸ ಮಾಡೋರು ಇರ್ತಾರೆ ಅನ್ನೋದು ಮತ್ತೆ ಪ್ರೂವ್ ಆಯಿತು ನೋಡಿ.

"ಹ್ಯಾಪಿ ವುಮೆನ್ಸ್ ಡೇ" ಆಲ್ ದ ಬೆಸ್ಟ್

Click below headings