ಬುಧವಾರ, ಸೆಪ್ಟೆಂಬರ್ 8, 2010

ಕಾಡುತಿದೆ ನಿಮ್ಮ ನೆನಪು ಪ್ರತಿಕ್ಷಣ

ತಿರುಗಿ ಬರುವರೆ ತೀರಿಹೋದ ಹಿರಿಯರು.

ಕಾಡುತಿದೆ ನಿಮ್ಮ ನೆನಪು ಪ್ರತಿಕ್ಷಣ 
ನೀವಿಲ್ಲದೆ ಕಳೆಯಲಿ ಹೇಗೆ ಅನುದಿನ
ಕರಗಿ ನೀರಾಗಿ ಹೋಯಿತಿಂದು ಈ ಮನ
ಬಳಲಿ ಬೆಂಡಾಗಿ ಕೂತಾಗ, 
ಮನ ಚಿಂತಿಸುವುದು ನಾಳಿನ ಜೀವನ,
ಆದರೆ ಆಶಾವಾದ ತುಂಬಲು ನೀವಿಲ್ಲ ಇಂದು
ಕಾಡುತಿದೆ ನಿಮ್ಮ ನೆನಪು ಸದಾ
ನೆನಪಾಯಿತು ನೀವು ತೋರಿದ ಆ ಪ್ರೀತಿ, ವಾತ್ಸಲ್ಯ
ನೆನಪಾಯಿತು ನೀವು ತೋರಿದ ಆ ಮಮತೆ, ಆ ಪರಿಯ ಆಪ್ಯಾಯತೆ
ಯಾರ ಬಳಿ ಹುಡುಕಲಿ ಇಂದು ಆ ಪ್ರೀತಿ ವಾತ್ಸಲ್ಯ, 
ಕಾಡುತಿದೆ ನಿಮ್ಮ ನೆನಪು ಸದಾ
 
ಎಡವಿ ಬಿದ್ದಾಗ  ಕೈ ಹಿಡಿದು ಮೇಲೆತ್ತಿ 
ಸಾಂತ್ವನ ಹೇಳಿದವರು ನೀವು ಅಂದು 
ಆದರೆ ನಗುವ ಜನರಿರುವವರು ಇಂದು
ತಪ್ಪು ಮಾಡಿದಾಗ ಪ್ರೀತಿಯಿಂದ ಗದರಿಸಿ 
ಬುದ್ದಿ ಹೇಳಿದವರು ನೀವು ಅಂದು
ಆದರೆ ಅಪಹಾಸ್ಯ ಮಾಡುವ 
ಜನರಿರುವವರು ಇಂದು
ನೀವಿಲ್ಲದ ಬದುಕು ದುಸ್ತರ, ಬರ್ಬರ
ನಿಮ್ಮ ನೆನಪೊಂದೆ ಸಾಕು ಜೀವಿಸಲು ಬಹುದಿನ
ಕಾಡುತಿದೆ ನಿಮ್ಮ ನೆನಪು ಸದಾ ಸದಾ
ಕಾಡುತಿದೆ ನಿಮ್ಮ ನೆನಪು ಪ್ರತಿಕ್ಷಣ 
ನೀವಿಲ್ಲದೆ ಕಳೆಯಲಿ ಹೇಗೆ ಅನುದಿನ
ಕರಗಿ ನೀರಾಗಿ ಹೋಯಿತಿಂದು ಈ ಮನ
ಬಳಲಿ ಬೆಂಡಾಗಿ ಕೂತಾಗ, 
ಮನ ಚಿಂತಿಸುವುದು ನಾಳಿನ ಜೀವನ,
ಆದರೆ ಆಶಾವಾದ ತುಂಬಲು ನೀವಿಲ್ಲ ಇಂದು
ಕಾಡುತಿದೆ ನಿಮ್ಮ ನೆನಪು ಸದಾ

ನೆನಪಾಯಿತು ನೀವು ತೋರಿದ ಆ ಪ್ರೀತಿ, ವಾತ್ಸಲ್ಯ
ನೆನಪಾಯಿತು ನೀವು ತೋರಿದ ಆ ಮಮತೆ, ಆ ಪರಿಯ ಆಪ್ಯಾಯತೆ
ಯಾರ ಬಳಿ ಹುಡುಕಲಿ ಇಂದು ಆ ಪ್ರೀತಿ ವಾತ್ಸಲ್ಯ, 
ಕಾಡುತಿದೆ ನಿಮ್ಮ ನೆನಪು ಸದಾ 

ಎಡವಿ ಬಿದ್ದಾಗ  ಕೈ ಹಿಡಿದು ಮೇಲೆತ್ತಿ 
ಸಾಂತ್ವನ ಹೇಳಿದವರು ನೀವು ಅಂದು 
ಆದರೆ ನಗುವ ಜನರಿರುವವರು ಇಂದು
ತಪ್ಪು ಮಾಡಿದಾಗ ಪ್ರೀತಿಯಿಂದ
ಗದರಿಸಿ ಬುದ್ದಿ ಹೇಳಿದವರು ನೀವು ಅಂದು
ಆದರೆ ಅಪಹಾಸ್ಯ ಮಾಡುವ ಜನರಿರುವವರು ಇಂದು

ನೀವಿಲ್ಲದ ಬದುಕು ದುಸ್ತರ, ಬರ್ಬರ
ನಿಮ್ಮ ನೆನಪೊಂದೆ ಸಾಕು ಜೀವಿಸಲು ಬಹುದಿನ
ಕಾಡುತಿದೆ ನಿಮ್ಮ ನೆನಪು ಸದಾ ಸದಾ

1 ಕಾಮೆಂಟ್‌:

  1. ನಿಮ್ಮ ಬ್ಲಾಗನ್ನು ಈಗ ಓದಲು ಅನುಕೂಲವಾಗಿದೆ. ಹಿರಿಯರ ನೆನಪಿನಲ್ಲಿ ಬದುಕುವ ನಿಮ್ಮ ಗುಣ ಅನುಕರಯ. ಶುಭವಾಗಲಿ.
    ಕಾಮೆಂಟ್ ಕಾಲಮ್ ನಲ್ಲಿ ಕಾಮೆಂಟ್ ವೇರಿಫಿಕೇಶನ್ ತೆಗೆದರೆ ಉತ್ತಮ.

    ಪ್ರತ್ಯುತ್ತರಅಳಿಸಿ