ಶುಕ್ರವಾರ, ನವೆಂಬರ್ 16, 2012

ಒಮಾನಿನಲ್ಲಿ ರಜೆ ಘೋಷಣೆ ಪದ್ದತಿ

ರಜೆಗಳು ಯಾರಿಗೆ ಬೇಡ ಹೇಳಿ. ಯಾವುದಾದರೊಂದು ಕಾರಣಕ್ಕೆ ರಜೆ ಕೊಟ್ಟರೆ ಸಾಕು ಅಂತ ಕಾಯುತ್ತ ಇರುವ ಜನ ಬಹಳಷ್ಟಿದ್ದಾರೆ.  ಒಂದು ವೇಳೆ, ಆಗಸ್ಟ್ ೧೫ ಭಾನುವಾರ ಬಂದರೆ, ಬಹಳಷ್ಟು ಜನ ಅದರಲ್ಲೂ ಸರ್ಕಾರಿ ನೌಕರರು ಗೋಳಾಡದೆ ಇರುತ್ತಾರೆಯೆ? ಇಂತಹ ಸಂಧರ್ಭದಲ್ಲಿ ಶನಿವಾರ ಧ್ವಜಾರೋಹಣ ಮಾಡಿ ಛೀಮಾರಿ ಹಾಕಿಸಿ ಕೊಂಡವರು ಇದ್ದಾರೆ. ನೌಕರರ ಇಚ್ಚೆ ಯನ್ನರಿತು ಸರ್ಕಾರ ಒಂದುವೇಳೆ ಶನಿವಾರ ರಜೆ ಕೊಟ್ಟರೆ ಮಾಧ್ಯಮ ಗಳು ಮತ್ತು ಪ್ರತಿಪಕ್ಷದವರು ಸುಮ್ಮನೆ ಬಿಡುತ್ತಾರೆಯೆ? ಯಾವುದನ್ನು ಎಂದು ಆಚರಣೆ ಮಾಡಬೇಕೋ ಅಂದೇ ಆಚರಣೆ ಮಾಡಿದರೆ ಅದಕ್ಕೊಂದು ಅರ್ಥವಿದೆ ವಾದ ಮಂಡಿಸುವವರಿಗೇನು ಕಡಿಮೆ ಇಲ್ಲ.

ಉದಾಹರಣೆಗೆ ಗಣೇಶ ಹಬ್ಬ ಆಚರಣೆ ಬೆಂಗಳೂರಿನ ಗಲ್ಲಿ ಗಲ್ಲಿ ಗಳಲ್ಲಿ ಗಣೇಶ ಉತ್ಸವ ಸಮಿತಿಯವರ ಅನುಕೂಲಕ್ಕೆ ತಕ್ಕಂತೆ ಯಾವುದಾದೊರೊಂದು ದಿನ ಆಚರಿಸುತ್ತಾರೆ. ಕೆಲವೊಂದು ಕಡೆ ಕನ್ನಡ ರಾಜ್ಯೋತ್ಸವ ಆಚರಣೆ ಮತ್ತು ಗಣೇಶೋತ್ಸವವನ್ನು ಒಂದೇ ಸಾರಿ ಆಚರಿಸಿರುವ ಇದೆ.


ಗಂಗಾವತಿ ಬೀಚಿ ಎಂದೇ ಪ್ರಸಿದ್ದರಾದ ಪ್ರಾಣೇಶ್ ರವರು ಬೆಂಗಳೂರಿನ ಗಣೇಶೋತ್ಸವ ಆಚರಣೆ ಬಗ್ಗೆ ಹಲವಾರು ಬಾರಿ ಹಾಸ್ಯದ ಮೂಲಕ ಹೇಳಿದ್ದಾರೆ.

ಒಂದು ಸಾರಿ ಟಿವಿಯಲ್ಲಿ ಬ್ರಹ್ಮಾಂಡ ಖ್ಯಾತಿಯ ಜ್ಯೋತಿಷಿ ಹುಟ್ಟು ಹಬ್ಬ ಬಗ್ಗೆ ವಿವರಣೆ ಕೊಡುತಿದ್ದರು, "ಬ್ರೀಟೀಷರ ಆಳ್ವಿಕೆಯ ಫಲದಿಂದ ಈಗ ನಾವೆಲ್ಲ ಕ್ರಿಶ್ಚಿಯನ್ ಕ್ಯಾಲೆಂಡರ್ ಅನ್ನು ಅನುಸರಿಸುತಿದ್ದೇವೆ. ಆದ್ದರಿಂದ ನಮ್ಮ ಜನ ತಮ್ಮ ತಮ್ಮ ಹುಟ್ಟು ಹಬ್ಬ ಆಚರಣೇ ಮಾಡಿಕೊಳ್ಳೊ ದಿನ ಬೇರೆಯವರು ಹುಟ್ಟಿದ ದಿನದಂದು ತಮ್ಮ ಹುಟ್ಟು ಹಬ್ಬ ವನ್ನು ಆಚರಣೆ ಮಾಡಿಕೊಳ್ತಾಯಿದ್ದಾರೆ. ನಾವು ಹುಟ್ಟಿದ ಗಳಿಗೆ ಪ್ರಕಾರ, ಜನ್ಮ ನಕ್ಷತ್ರ, ಜನ್ಮ ರಾಶಿ ಇನ್ನು ಮುಂತಾದವುಗಳನ್ನು ಬರೆದಿಡುತ್ತೇವೆ. ಆದರೆ ಮುಂದಿನ ವರ್ಷ ಹುಟ್ಟಿದ ದಿನ ಬಂದರೆ ಆ ದಿನದ ನಕ್ಷತ್ರ, ರಾಶಿ, ತಿಥಿ ಗಳು ಹೊಂದಾಣಿಕೆ ಯಾಗಲ್ಲ. ಈಗ ರಾಮನವಮಿ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದಸರಾ ಹಬ್ಬ, ದೀಪಾವಳಿ ಹಬ್ಬ ಇನ್ನು ಮುಂತಾದುವುಗಳು ಪ್ರತಿ ವರ್ಷ ಕ್ರಿಶ್ಚಿಯನ್ ಕ್ಯಾಲೆಂಡರ್ ಪ್ರಕಾರ ಬೇರೆಬೇರೆ ದಿನಾಂಕ ಗಳಂದು ಬರುತ್ತೆ ಆದರೆ ಒಂದೇ ದಿನದಂದು ಮಾತ್ರ ಬರೋದಿಲ್ಲ. ವಿಷಯ ಹೀಗಿರಬೇಕಾದ್ರೆ, ಮುಂಡೇವು ಯಾರ್ಯರನ್ನೋ ಅನುಕರಣೆ ಮಾಡೋಕೆ ಹೋಗಿ ಎಡಬಿಡಂಗಿಗಳಂಗೆ ಆ ಕಡೇಗೂ ಇಲ್ಲ ಕೊನೇಗೆ ಈ ಕಡೆಗೂ ಇಲ್ಲ ಅನ್ನೋ ಪರಿಸ್ಥಿತಿನ ತಂದ್ಕೊಳ್ತಾವೆ. " ಎಂದು ಹೀಗೆ ಅವರ ಮನಸ್ಸಿಗೆ ಬಂದಂತೆ ಬೈತಾ ಇದ್ದರು.

ಸಾಮನ್ಯವಾಗಿ ನಮ್ಮ ಕರ್ನಾಟಕ ಸರ್ಕಾರ ಸಾರ್ವಜನಿಕ ರಜೆಗಳ ಪಟ್ಟಿ ಯನ್ನು ಹೊಸ ವರ್ಷ ಶುರುವಾಗುವ ಮುಂಚೇನೆ ಬಿಡುಗಡೆ ಮಾಡುತ್ತೆ. ಈ ರಜಾ ದಿನಗಳ ಆಯ್ಕೆ ಯಲ್ಲಿ ತಪ್ಪಾಗಿದ್ದರೆ, ಈ ಬದಲಾವಣೆಯನ್ನು ಆ ಸಂಧರ್ಭಗಳ ತಕ್ಕಂತೆ ಕೆಲವೊಮ್ಮೆ ಮಾಡಲಾಗಿದೆ. ಆದರೆ ಈ ರಜೆಗಳು ಭಾನುವಾರ ದಿನದಂದು ಬಂದಿವೆ ಯಂದು ಆ ಕಾರಣಕ್ಕಾಗಿ ಅದನ್ನು ಶನಿವಾರ ಅಥವ ಸೋಮವಾರ ದಿನದಂದು ಬದಲಾಯಿಸಿ ಕೊಡಲಾಗಿಲ್ಲ.
ಪ್ರಸಕ್ತ ಸಾಲಿನ ಸಾರ್ವಜನಿಕ ರಜೆ ಯಾದಿಯಲ್ಲಿ ಬಕ್ರೀದ್ ರಜೆಯನ್ನು ಅಕ್ಟೋಬರ್ 26 ಎಂದು ಘೋಷಿಸಲಾಗಿತ್ತು.  ರಾಜ್ಯ ವಕ್ಫ್ ಮಂಡಳಿ ಕೋರಿಕೆ ಮೇರೆಗೆ ಬಕ್ರೀದ್ ಅಂಗವಾಗಿ ಅಕ್ಟೋಬರ್ 26ರ ಬದಲಿಗೆ 27 ರಂದು ಸಾರ್ವಜನಿಕ ರಜೆ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿ ಆದೇಶ ಹೊರಡಿಸಿತ್ತು.


ನಾವಿರುವ ಒಮಾನಿನಲ್ಲಿ, ರಜೆಗಳನ್ನು ಜನರ ಅನುಕೂಲಕ್ಕೆ ತಕ್ಕಂತೆ ಬೇರೆದಿನಗಳಂದು ಬದಲಾಯಿಸಿ ಕೊಡಲಾಗುತ್ತೆ. ಉದಾ: Prophet Mohammed’s Ascension anniversary 17 June 2012 ರಂದು ಘೋಷಣೆ ಯಾಗಿತ್ತು. ಆದರೆ ರಜೆ ಕೊಟ್ಟಿದ್ದು ೧೬ ರಂದು ಖಾಸಗಿ ಕಂಪನಿಗಳಿಗೆ ಹಾಗು ೧೬ ಮತ್ತು ೧೭ ರಂದು ಸರಕಾರಿ ಕಛೇರಿಗಳಿಗೆ ರಜೆ ಕೊಡಲಾಗಿತ್ತು. ಕಾರಣ ವೇನೆಂದರೆ, ಒಮಾನಿ ನಲ್ಲಿ ವಾರದ ರಜೆ ಗುರುವಾರ ಮತ್ತು ಶುಕ್ರವಾರ ರಂದು ಇರುತ್ತದೆ. ಸಾರ್ವಜನಿಕರ ಅನುಕೂಲಕ್ಕಾಗಿ ಒಂದೇಸಾರಿ ಮೂರು ದಿನಗಳ ರಜೆ ಯನ್ನು ಅನುಭವಿಸಲು ಈ ಬದಲಾವಣೆ ಮಾಡಲಾಗಿತ್ತು.

೧೫ ನವೆಂಬರ್ ೨೦೧೨, ಇಸ್ಲಾಮಿಕ್ ಹೊಸ ವರುಷ ದಿನಾಚರಣೆ ಮತ್ತು ೧೮ ನವೆಂಬರ್ ೨೦೧೨ ಒಮಾನ್ ರಾಷ್ಟ್ರೀಯ ದಿನಾಚರಣೆ ಮತ್ತು ಸುಲ್ತಾನ್ ಕಾಬೂಸ್ ರವರ ಹುಟ್ಟುಹಬ್ಬದ ದಿನ, ಆದರೆ ರಜೆ ಕೊಟ್ಟಿದ್ದು ಮಾತ್ರ ೧೭ನವೆಂಬರ್ ೨೦೧೨ ಶನಿವಾರದಂದು, ಕಾರಣ ಗುರುವಾರದಿಂದ ಶನಿವಾರ ದವರೆಗೆ ರಜೆಯ ಪ್ರಯೋಜನ ಸಾರ್ವಜನಿಕರಿಗೆ ದೊರಕಲಿ ಎನ್ನುವ ಉದ್ದೇಶ ದಿಂದ. ಈ ರಜೆ ಘೋಷಣೆ ಯಾಗಿದ್ದು ಅದೂ ಕೊನೆ ಘಳಿಗೆ ಯಲ್ಲಿ.   ಇನ್ನೂ ೨೭ ಮತ್ತು ೨೮ ರಂದು ಒಮಾನ್ ರಾಷ್ಟ್ರೀಯ ದಿನಾಚರಣೆ ಗಾಗಿ ಮೀಸಲಿಟ್ಟಿದ್ದಾರೆ ಆದರೆ ಅದು ಇನ್ನೂ ಘೋಷಣೆ ಯಾಗಿಲ್ಲ. ಇದು ಈ ವರ್ಷದ ಕೆಲ ಬದಲಾವಣೆಗಳಷ್ಟೆ, ಪ್ರತಿ ವರ್ಷವೂ ಇಂತಹ ಹಲವಾರು ಬದಲಾವಣೆಗಳಿದ್ದು, ಒಮಾನಿನ ಸರ್ಕಾರ ಸರ್ಕಾರಿ ಹಾಗೂ ಖಾಸಗಿ ಉದ್ಯೋಗಿಗಳ ಅನುಕೂಲಕ್ಕೆ ತಕ್ಕಂತೆ ಆಗಿದ್ದಾಂಗೆ ಮಾರ್ಪಾಡುಗಳನ್ನು ಮಾಡುತ್ತಲೆ ಇರುತ್ತದೆ. ದುಬೈ ಒಮಾನಿನಿಂದ ಕೇವಲ ೧೫೦ ಕಿ.ಮಿ ದೂರದಲ್ಲಿದೆ, ಆದರೆ ಒಮಾನಿನ ರಜೆಯ ವಿಚಾರವಾಗಿ ನನ್ನ ಕೆಲ ದುಬೈ ಗೆಳೆಯರು ನಮ್ಮ ರಜೆ ಘೋಷಣೆ ಪದ್ದತಿ ಬಗ್ಗೆ ಅಸೂಯೆ ಪಟ್ಟಿದ್ದುಂಟು. :)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ