ಭಾರತೀಯ ಸಾಮಾಜಿಕ ವೇದಿಕೆ - ಕರ್ನಾಟಕ ವಿಭಾಗ ವತಿಯಿಂದ ನವರಾತ್ರಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ನವಸಂಜೆ ಕಾರ್ಯಕ್ರಮ ದಿನಾಂಕ ೨೭.೦೯.೨೦೧೪ ರಂದು ಅತ್ಯಂತ ಯಶಸ್ವಿಯಾಗಿ ಮಸ್ಕತ್ ನ ISC-MP Hall ನಲ್ಲಿನಡೆಯಿತು. ಕಾರ್ಯಕ್ರಮದಲ್ಲಿ ಅಂತ್ಯಾಕ್ಷರಿ ಮತ್ತು ಕನ್ನಡ ಚಿತ್ರಗೀತೆಗಳ ರಸಪ್ರಶ್ನೆ ಕಾರ್ಯಕ್ರಮ, ಕನ್ನಡ ಕಲಿಕೆಯ ಮಹತ್ವ ಕುರಿತು ಹಿತನುಡಿ, ದಾಂಡಿಯ ಮತ್ತು ಘರ್ಭ ನೃತ್ಯ ಕಾರ್ಯಕ್ರಮ ವನ್ನು ಏರ್ಪಡಿಸಲಾಗಿತ್ತು.
ಕನ್ನಡ ಸಂಘದ ಕಾರ್ಯಕಾರಿ ಪ್ರಧಾನ ಸಂಚಾಲಕರಾದ ಶ್ರೀ ಪ್ರಸಾದ್ ರವರು ಪ್ರಾಸ್ತಾವಿಕ ಭಾಷಣ ಮಾಡಿ ನವ ಸಂಜೆ ಕಾರ್ಯಕ್ರಮದ ಕುರಿತು
ವಿವರ ಗಳು ಹಾಗೂ ಹೊಸ ದಾಗಿ ರೂಪುಗೊಂಡ ಸಮಿತಿಯ ಬಗ್ಗೆ
ಮಾಹಿತಿ ನೀಡಿದರು. ತದನಂತರ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಶ್ರೀಮತಿ ವಿದ್ಯಾರಾಣಿಯವರು ಕಾರ್ಯಕ್ರಮ ವನ್ನು ಮುಂದುವರೆಸಿದರು.
ಅಂತ್ಯಾಕ್ಷರಿ ಸ್ಪರ್ಧೆಗೆ ಸುಮಾರು ೪೨ ಜನರು ತಮ್ಮ ಹೆಸರನ್ನು ನೊಂದಾಯಿಸಿದ್ದರು, ೪೫ ನಿಮಿಷ ಗಳ ಕಾಲ ನಡೆದ ನಿರ್ಗಮನ ಸುತ್ತಿನಲ್ಲಿ ಪಾಲ್ಗೊಂಡಿದ್ದ ಎಲ್ಲ ೪೨
ಸ್ಪರ್ಧಿಗಳಲ್ಲಿ ೩ ಜನರನ್ನೊಳಗೊಂಡ ೬ ತಂಡಗಳ ೧೮ ಜನ ಅಂತಿಮ ಸುತ್ತಿಗೆ ಆಯ್ಕೆಯಾದರು.
ಅವರಲ್ಲಿ ಶ್ರೀ ಹಿರಿಯಣ್ಣ, ಶ್ರೀ ಮತಿ ಶ್ರೀ ಮಾತ, ಮತ್ತು ಶ್ರೀಮತಿ ಸುಮ ಶಶಿ ಪ್ರಕಾಶ್ ರವರ ತಂಡ ಪ್ರಥಮ ಸ್ಥಾನ ಗಳಿಸಿತು,
ದ್ವಿತಿಯ ಸ್ಥಾನವನ್ನು ಶ್ರೀ ರಮೇಶ್, ಶ್ರೀಮತಿ ನಿರ್ಮಲ ಶಿವಣ್ಣ ಮತ್ತು ಶ್ರೀಮತಿ ರಾಧ ರಾಮಚಂದ್ರಪ್ಪ ರವರು ಪಡೆದರು.
ನಂತರದ ಸ್ಥಾನವನ್ನು ಶ್ರೀ ಶ್ರೀನಿವಾಸ್, ಶ್ರೀ ಮತಿ ರೇಶ್ಮಾ ಹಿತೇಶ್ ಮತ್ತು ಶ್ರೀಮತಿ ಜಯಲಕ್ಷ್ಮಿ ಶೆಣೈ ರವರ ತಂಡ ಪಡೆಯಿತು.
ಸ್ಪರ್ಧೆಯಲ್ಲಿ ಜಯಶಾಲಿಯಾದ ಮೂರುತಂಡಗಳಿಗೆ ಕ್ರಮವಾಗಿ ಮೊದಲನೆ, ಎರಡನೇ ಮತ್ತು ಮೂರನೇ ಬಹುಮಾನವನ್ನು ನೀಡಲಾಯಿತು.
ಅಂತ್ಯಾಕ್ಷರಿ ಕಾರ್ಯಕ್ರಮದ ಮಧ್ಯೆ ಸಭಿಕರಿಗೂ ಸಹ ಸ್ಪರ್ಧೆಯಲ್ಲಿ ರಸಪ್ರಶ್ನೆ ಗಳಿಗೆ ಉತ್ತರ
ನೀಡಲು ಅವಕಾಶವಿತ್ತು, ಸುಮಾರು ೧೦ ಜನ ಅದೃಷ್ಟ ಸಭಿಕರು ಸರಿ ಉತ್ತರ
ನೀಡಿ ಬಹುಮಾನ ಗಳಿಸಿದರು.
ಅಂತ್ಯಾಕ್ಷರಿ ಮತ್ತು ರಸಪ್ರಶ್ನೆ ಕಾರ್ಯಕ್ರಮವನ್ನು ಶ್ರೀ ಜಾನಕೀನಾಥ್ ರವರು ಶ್ರೀಮತಿ ಸುಪ್ರಿತಾರಾವ್, ಶ್ರೀಮತಿ ಪ್ರೇಮಾ ಮತ್ತು ಶ್ರೀ ದೀಪಕ್ ರಾವ್ ರವರ ಸಹಯೋಗ ದೊಂದಿಗೆ ಅತ್ಯಂತ
ಯಶಸ್ವಿಯಾಗಿ ನಡೆಸಿಕೊಟ್ಟರು.
ಈ ಮಧ್ಯೆ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯ ವ್ಯಕ್ತಿಗಳಿಗೆ ಕನ್ನಡ ಸಂಘದ ಕಾರ್ಯಕಾರಿ ಪ್ರಧಾನ
ಸಂಚಾಲಕರಾದ ಶ್ರೀ ಪ್ರಸಾದ್ ರವರು ಮತ್ತು ಸಹ ಸಂಚಾಲಕರಾದ ಶ್ರೀ ಸಂಜಯ್ ಜೋಗ್ ರವರು ಹೂಗುಚ್ಚ ನೀಡಿ
ಬರ ಮಾಡಿಕೊಂಡರು.
ನಾಡಗೀತೆ ಜಯ ಭಾರತ ಜನನಿಯ ತನುಜಾತೆ ಮತ್ತು ಹಚ್ಚೇವು ಕನ್ನಡದ ದೀಪ ಗೀತೆಗಳನ್ನು ಸಂಘದ ಸದಸ್ಯರ
ಶ್ರೀಮತಿ ಸುಮನ ಶಶಿಧರ್, ಶ್ರೀಮತಿ ಅನುಪಮ ಪ್ರಸಾದ್, ಶ್ರೀಯುತ ರಾಜು, ಡಾ.ಸಂತೋಷ್, ಶ್ರೀಮತಿ ಗೀತಾ ಭಟ್ ಮತ್ತು ಶ್ರೀ ರವಿಪ್ರಕಾಶ್ ರವರ
ಅತ್ಯಂತ ಸೊಗಸಾಗಿ ಹಾಡಿ ಮಸ್ಕತ್ ಕನ್ನಡಿಗರ ಕನ್ನಡಭಿಮಾನವನ್ನು ಜಾಗೃತಿ ಗೊಳಿಸುವಲ್ಲಿ ಯಶಸ್ವಿಯಾದರು.
ಸಂಘದ ಕೆಲ ಸದಸ್ಯರು ನವರಾತ್ರಿ ಹಬ್ಬದ ಪ್ರಯುಕ್ತ ಕೆಲ ಪೋಸ್ಟರ್ ಗಳನ್ನು ಸಿದ್ಧಪಡಿಸಿ ಕೊಂಡು
ಬಂದಿದ್ದು ವಿಶೇಷವಾಗಿತ್ತು. ಹಬ್ಬದ ಕುರಿತು ಹಲವಾರು ಮಾಹಿತಿಗಳನ್ನು ಚಾರ್ಟ್ ಗಳಲ್ಲಿ ವರ್ಣ ರಂಜಿತ
ಚಿತ್ರ ಗಳ ಸಮೇತ ನೀಡಿದ್ದರು.
ಮಸ್ಕತ್ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಕೆಯ ಮಹತ್ವ ದ ಕುರಿತು ಹಿತ ವಚನವನ್ನು ಶ್ರೀ ಯೋಗಾನಂದ್ ರವರು ನೀಡಿದರು, ಶ್ರೀಯುತರು ಹಲವಾರು ವರ್ಷಗಳ ಕಾಲ ಕನ್ನಡ ಸಂಘದಲ್ಲಿ ಸೇವೆಸಲ್ಲಿದ್ದು,
ಮಸ್ಕತ್ ನಲ್ಲಿ ಮಕ್ಕಳಿಗೆ ಕನ್ನಡ ಕಲಿಸಲು ಸುಮಾರು ೧೦ ವರ್ಷಗಳ ಕಾಲ ಕನ್ನಡ ತರಗತಿಗಳನ್ನು
ನಡೆಸಿದ್ದಾರೆ. ಮಸ್ಕತ್ ನ ಕನ್ನಡ ಶಾಲೆಗಳಲ್ಲಿ ಕಲಿತ ಮಕ್ಕಳು ಕರ್ನಾಟಕ ರಾಜ್ಯದಲ್ಲಿ ವೃತ್ತಿ ಶಿಕ್ಷಣ
ತರಗತಿಗಳಿಗೆ CET ಗೆ ರಾಜ್ಯದಿಂದ ಪ್ರವೇಶ ಪಡೆಯಲು ಹಾಗು ದಿನನಿತ್ಯದ ವ್ಯವಹಾರ
ಗಳಿಗೆ ಕನ್ನಡ ಕಲಿಯುವುದರಿಂದ ಆಗುವ ಉಪಯೋಗಗಳ ಕುರಿತು ಹಲವಾರು ಮಾಹಿತಿಗಳನ್ನು ನೀಡಿದರು ಹಾಗು ಅದರ
ಪ್ರಯೋಜನ ಪಡೆದ ಪೋಷಕರ ಬಗ್ಗೆ ವಿವರ ಸಹ ನೀಡಿದರು.
ಮಾ. ಅನುಪ್ ಸಾರಂಗ್, ಕನ್ನಡ ಸಂಘದ ಮುಂದಿನ ಕಾರ್ಯಕ್ರಮವಾದ ಕರ್ನಾಟಕ
ಉತ್ಸವದ ಕುರಿತು ಕಿರು ಪರಿಚಯ ನೀಡಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯ ಅಥಿತಿಗಳಾದ ಭಾರತೀಯ ಸಾಮಾಜಿಕ ವೇದಿಕೆ ಯ ಅಧ್ಯಕ್ಷರಾದ ಶ್ರೀ
ಸತೀಶ್ ನಂಬಿಯಾರ್ ಮತ್ತು ಬ್ಯಾಂಕ್ ಮಸ್ಕತ್ ನ ಶ್ರೀ ರಾಮಕೃಷ್ಣ ರವರು ವಿಜೇತ ಸ್ಪರ್ಧಿಗಳಿಗೆ ಬಹುಮಾನ ವಿತರಣೆ ಮಾಡಿದರು.
ಸಂಘದ ವತಿಯಿಂದ ಗಣ್ಯ ಅಥಿತಿ ಗಳಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು, ಭಾರತೀಯ ಸಾಮಾಜಿಕ ವೇದಿಕೆ ಯ ಅಧ್ಯಕ್ಷರಾದ ಶ್ರೀ ಸತೀಶ್ ನಂಬಿಯಾರ್ ರವರು
ಕಾರ್ಯಕ್ರಮದ ಕುರಿತು ಕನ್ನಡದಲ್ಲಿ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಹೊಸದಾಗಿ ರೂಪುಗೊಂಡ ಸಮಿತಿಯು
ಅತಿ ಕಡಿಮೆ ಕಾಲಾವಧಿಯಲ್ಲಿ ನವಸಂಜೆ ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಿ ಸಭಿಕರಿಗೆ
ಮನರಂಜನೆ ನೀಡುವುದರಲ್ಲಿ ಯಶಸ್ಸು ಕಂಡಿದೆ. ಈ ಸಮಿತಿಯಿಂದ ಇಂತಹ ಹಲವಾರು ಕಾರ್ಯಕ್ರಮಗಳು ಸತತವಾಗಿ
ಬರಲಿ ಜನರ ಮೆಚ್ಚುಗೆಯನ್ನು ಗಳಿಸಲಿ ಎಂದು ಹಾರೈಸಿದರು.
ಮುಖ್ಯ ಪ್ರಾಯೋಜಕರಾದ ಬ್ಯಾಂಕ್ ಮಸ್ಕತ್ ನ ಶ್ರೀ ರಾಮಕೃಷ್ಣ ರವರು ಮಾತನಾಡಿ, ಕಾರ್ಯಕ್ರಮ ತುಂಬ ಅಚ್ಚುಕಟ್ಟಾಗಿ ಮೂಡಿ ಬಂದಿದ್ದು, ಇನ್ನು ವಿವಿಧ ರೀತಿಯ ಸದಭಿರುಚಿ ಕಾರ್ಯಕ್ರಮಗಳನ್ನು ರೂಪಿಸಿ ಆಯೋಜಿಸಿ ಕನ್ನಡ ಸಂಘದ ಹೆಸರನ್ನು ರಾರಾಜಿಸುವಂತೆ ಮಾಡುವ ಜವಬ್ದಾರಿ ಸಂಘದ ಮೇಲಿದೆ,
ಜನ ನಿಮ್ಮ ಮೇಲೆ ಇನ್ನು ತುಂಬ ನೀರಿಕ್ಷೆ ಯನ್ನು ಇಟ್ಟುಕೊಂಡಿದ್ದಾರೆ, ನಮ್ಮ ಪ್ರೋತ್ಸಾಹ ಎಂದಿನಂತೆ ಮುಂದುವರೆಯುತ್ತೆ. ನಿಮ್ಮ ಎಲ್ಲ ಕಾರ್ಯಕ್ರಮಗಳು ಯಶಸ್ಸು ಕಾಣಲಿ
ಎಂದು ಹಾರೈಸಿದರು.
ಸಂಘದ ಖಜಾಂಚಿ ಶ್ರೀ ಸುಧೀರ್ ಶೆಟ್ಟಿ ಯವರು ಡಿಜೆ ಜೆಸನ್ ರವರ ಪರಿಚಯ ನೀಡಿದರು, ಜೆಸನ್ ರವರು ಚಿಕ್ಕವಯಸ್ಸಿನಲ್ಲಿಯೆ ಡಿಜೆ ಸಂಗೀತ ಸಂಯೋಜನೆಯಲ್ಲಿ ಹಲವಾರು ಆಲ್ಬಮ್ ಗಳನ್ನು ತಂದಿದ್ದು ಕರಾವಳಿಯಲ್ಲಿ ಬಹಳಷ್ಟು ಹೆಸರು ಮಾಡಿದ್ದಾರೆ. ಇವರ ಸಂಗೀತ ಸಂಯೋಜನೆ ಯಲ್ಲಿ ನವಸಂಜೆ ಕಾರ್ಯಕ್ರಮದಲ್ಲಿ ದಾಂಡಿಯ ಮತ್ತು ಘರ್ಭ ನೃತ್ಯ ಕಾರ್ಯಕ್ರಮ ನಡೆಯಿತು. ಕಿರಿ ಮತ್ತು ಹಿರಿಯರೆನ್ನದೆ ಎಲ್ಲವಯೋಮಾನದವರು ಕನ್ನಡ ಚಿತ್ರಗೀತೆಗಳಿಗೆ ಒಂದು ಘಂಟೆಗೂ ಹೆಚ್ಚು ಹೊತ್ತು ಕುಣಿದು ಕುಪ್ಪಳಿಸಿದ್ದು ನವಸಂಜೆ ಕಾರ್ಯಕ್ರಮಕ್ಕೆ ಮೆರಗು ನೀಡಿತು. ಸಂಘದ ವತಿಯಿಂದ ಡಿಜೆ ಜೆಸನ್ ರವರಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು
ಕಾರ್ಯಕ್ರಮದ ಕೊನೆಗೆ ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಶ್ರೀಮತಿ ಸುಪ್ರಿತಾರಾವ್ ರವರು ಕಾರ್ಯಕ್ರಮದಲ್ಲಿ
ಭಾಗಿಯಾದ ಎಲ್ಲರಿಗೂ ವಂದನೆಗಳನ್ನು ಅರ್ಪಿಸಿದರು. ತದನಂತರ ಸ್ವಾಗತ್ ಗ್ರೂಪ್ ಆಫ್ ಹೋಟೆಲ್ಸ್ ನ ಬಲ್ಲಾಳ್
ರವರ ತಂಡ ತಯಾರಿಸಿದ ರುಚಿಕರವಾದ ಭೋಜನವನ್ನು ಸಂಘದ ಸದಸ್ಯರು ಸವಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ