ರಾಮ ಮತ್ತು ಶಾಮ ಎನ್ನುವ ಇಬ್ಬರು ಸ್ನೇಹಿತರು ಒಂದು ಮರುಭೂಮಿಯಲ್ಲಿ ನಡೆದು ಕೊಂಡು
ಹೋಗುತಿದ್ದರು, ಮನಸ್ಸಿಗೆ ತೋಚಿದ್ದನ್ನ ಹರಟುತ್ತ ಸಾಗುತಿದ್ದರು. ಹೀಗೆ ಒಂದು ವಿಷಯದ ಬಗ್ಗೆ
ಚರ್ಚಿಸುವಾಗ ಇಬ್ಬರ ನಡುವೆ ವಾಗ್ವಾದ ನಡೆಯಿತು.
ವಾಗ್ವಾದ ಜೋರಾದಾಗ,ರಾಮನ ಕೆನ್ನೆಗೆ
ಶಾಮ
ಜೋರಾಗಿ ಬಾರಿಸಿದ.
ಹೊಡೆಸಿಕೊಂಡ ಸ್ನೇಹಿತ ಮನಸ್ಸಿನಲ್ಲಿ ನೋವನ್ನು ಅನುಭವಿಸುತ್ತ ಏನನ್ನೂ ಹೇಳದೆ ಒಂದು ಕಡೆ ಮರಳಿನ
ಮೇಲೆ ”ಇಂದು ನನ್ನ
ಆತ್ಮೀಯ ಸ್ನೇಹಿತ ಶಾಮ ನನ್ನ ಕೆನ್ನೆಗೆ ಹೊಡೆದ”
ಎಂದು
ಬರೆದನು.
ಮರುಭೂಮಿಯಲ್ಲಿ ನೀರು
ಸಿಗುವವರೆಗೂ ಹಾಗೇಯೆ ನಡೆಯುತ್ತ ಸಾಗುತಿದ್ದರು, ಒಂದು ಕಡೆ ನೀರಿನ ಕೊಳ ಕಾಣಿಸಿತು,
ಮರಳುಗಾಡಿನಲ್ಲಿ ನೀರನ್ನು ಕಂಡ ತಕ್ಷಣ ನೀರಲ್ಲಿ ಆಟವಾಡಲು ಶುರುಮಾಡಿದರು.
ಹೀಗೆ ಆಟವಾಡುತ್ತಿರುವಾಗ ಕಪಾಳಕ್ಕೆ
ಹೊಡೆಸಿಕೊಂಡಿದ್ದ ರಾಮ ನೀರಲ್ಲಿ ಮುಳುಗಲಾರಂಬಿಸಿದ. ಅದನ್ನು ಕಂಡು
ಶಾಮ
ಅವನನ್ನು ಅಪಾಯದಿಂದ ಪಾರುಮಾಡಿ ದಡದ ಮೇಲೆ ತಂದು, ಹೊಟ್ಟೆಯ ಮೇಲ್ಭಾಗವನ್ನು ಜೋರಾಗಿ ಅಮುಕಿ,
ಕುಡಿದಿದ್ದ ನೀರನ್ನು ಬಾಯಿಯಿಂದ ಹೊರ ತೆಗೆಸಿದ. ಸ್ವಲ್ಪ ಸಮಯದ ನಂತರ ಅಪಾಯದಿಂದ ಪಾರಾದ ರಾಮ
ಎಚ್ಚರಗೊಂಡು,
ಶಾಮನಿಗೆ ಧನ್ಯವಾದ ವನ್ನು ಅರ್ಪಿಸಿ, ಅಲ್ಲಿಯ ಬಂಡೆಯೊಂದರ ಮೇಲೆ “ಇಂದು
ನನ್ನ ಸ್ನೇಹಿತ ಶಾಮ ನನ್ನನ್ನು ಸಾವಿನ ದವಡೆಯಿಂದ ಕಾಪಾಡಿದ” ಎಂದು ಕಲ್ಲಿನಿಂದ ಕೆತ್ತಿದ. ಇದನ್ನು
ಗಮನಿಸಿದ ಶಾಮ “ನಿನಗೆ ನೋವಾಗುವ ಹಾಗೆ ನಿನ್ನನ್ನು ಹೊಡೆದಿದ್ದನ್ನು ಅಲ್ಲಿ ಯಾಕೆ ಮರಳಿನ ಮೇಲೆ ಬರೆದೆ, ಆದರೆ ಇಲ್ಲಿ ಯಾಕೆ
ಕಲ್ಲಿನ ಮೇಲೆ ಬರೆದಿದ್ದೀಯಾ?
ಅದಕ್ಕೆ ರಾಮ ನಸುನಗುತ್ತ ಉತ್ತರಿಸಿದ “ನಮ್ಮನ್ನು
ನೋಯಿಸಿದವರ, ಘಾಸಿ ಗೊಳಿಸಿದವರ, ಹೊಡೆದವರ, ಮೋಸ ಮಾಡಿದವರ ಅಥವ ತೊಂದರೆ ಮಾಡಿದವರ ಕುರಿತು ಮರಳಿನ
ಮೇಲೆ ಬರೆಯಬೇಕು, ಕ್ಷಮೆ ಎನ್ನುವ ಗಾಳಿ ಅದನ್ನೆಲ್ಲ ಅಳಿಸಿ ಹಾಕುತ್ತೆ,
ಆದರೆ
ನಮಗೆ ಒಳ್ಳೆಯದನ್ನು ಮಾಡಿದವರ ಕುರಿತು ಕಲ್ಲಿನ ಮೇಲೆ ಬರೆದರೆ ಮಳೆ ಬಿರುಗಾಳಿ ಸಿಡಿಲು ಎಂಥದೇ
ಬಂದರೂ ಅದು ಅಳಿಸಿ ಹೋಗುವುದಿಲ್ಲ”.
ನೀತಿ: ನಿಮ್ಮ ನೋವುಗಳನ್ನು
ಮರಳಿನ ಮೇಲೆ ಬರೆಯಿರಿ ಮತ್ತು ಲಾಭಗಳನ್ನು ಕಲ್ಲಿನ ಮೇಲೆ ಬರೆಯುವುದನ್ನು ಕಲಿಯಿರಿ
ಭಾವಾನುವಾದ: ಪಿ.ಎಸ್.ರಂಗನಾಥ
Nijavaddu .... Sahaya madidavarna maribardu Andre kalla mele kettabeku
ಪ್ರತ್ಯುತ್ತರಅಳಿಸಿtumba oleya vichar....
ಪ್ರತ್ಯುತ್ತರಅಳಿಸಿನಿಜಕ್ಕೂ ಸ್ನೇಹದ ಮಹ್ತವವನ್ನು ಈ ಕತೆ ಹೇಳುತ್ತೆ.
ಪ್ರತ್ಯುತ್ತರಅಳಿಸಿನಿಮ್ಮ ಬ್ಲಾಗ ಚೆನ್ನಾಗಿದೆ
ಪ್ರತ್ಯುತ್ತರಅಳಿಸಿNijaa chanda aitri
ಪ್ರತ್ಯುತ್ತರಅಳಿಸಿgood blog
ಪ್ರತ್ಯುತ್ತರಅಳಿಸಿnice blog i agree that above information
ಪ್ರತ್ಯುತ್ತರಅಳಿಸಿDistrict News