ಒಮಾನ್ ಕನ್ನಡಿಗರೊಂದಿಗೆ ಕನ್ನಡ ಚಿತ್ರರಂಗದ ಹೆಮ್ಮೆಯ ಹೆಸರಾಂತ ಚಿತ್ರಸಾಹಿತಿ, ಸಂಗೀತ ಸಂಯೋಜಕರು, ಚಿತ್ರನಿರ್ದೇಶಕ ಮತ್ತು ಸಂಭಾಷಣಕಾರರು ಆದ ಕವಿರತ್ನ ಶ್ರೀ ಡಾ. ವಿ.ನಾಗೇಂದ್ರ ಪ್ರಸಾದ್ ಅವರ ಆತ್ಮೀಯ ಸಂವಾದ ಕಾರ್ಯಕ್ರಮವನ್ನು ಶನಿವಾರ 21/08/2021, Google meet (ಗೂಗಲ್ ಮೀಟ್ ) ಮುಖಾಂತರ ಆಯೋಜಿಸಲಾಗಿತ್ತು.
ಸುಮಾರು ಎರಡು ಗಂಟೆಗಳಕಾಲ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀ ಡಾ. ವಿ.ನಾಗೇಂದ್ರ ಪ್ರಸಾದ್ ಅವರು ತಮ್ಮ ಬಾಲ್ಯ, ಶಾಲಾ ಕಾಲೇಜು ನಂತರ ಚಿತ್ರರಂಗದ ಅನೇಕ ಅನುಭವಗಳನ್ನ ಮತ್ತು ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್, ಅಭಿನಯ ಚಕ್ರವರ್ತಿ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂತಾದ ನಟರೊಂದಿಗಿನ ತಮ್ಮ ಒಡನಾಟದ ಕುರಿತು ಅವರು ಮಾತನಾಡಿದರು. ಹಾಡು ರಚನೆ ಬಗ್ಗೆ, ಸಾಮಾಜಿಕ ಜವಬ್ದಾರಿ ಮತ್ತು ಸಮಾಜ ಸೇವೆ, ಮುಂತಾದ ವಿಷಯಗಳ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಹಲವಾರು ಒಮಾನ್ ಕನ್ನಡಿಗರು ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಎಲ್ಲರ ಪ್ರಶ್ನೆಗಳಿಗೆ ಉತ್ತರಿಸಿದ ಶ್ರೀ ನಾಗೇಂದ್ರ ಪ್ರಸಾದ್ ಅವರು, ಕನ್ನಡ ಚಿತ್ರರಂಗ, ಚಿತ್ರಸಾಹಿತ್ಯದ ಹಲವಾರು ವಿಷಯಗಳ ಕುರಿತು ಮನ ಬಿಚ್ಚಿ ಮಾತನಾಡಿದರು.
ಕಾರ್ಯಕ್ರಮದ ಮಧ್ಯದಲ್ಲಿ ಒಮಾನ್ ನಲ್ಲಿ ನೆಲೆಸಿರುವ ಕನ್ನಡಿಗರು, ಅವರ ಚಿತ್ರದ ಹಾಡುಗಳನ್ನ ಹಾಡಿ ಕಾರ್ಯಕ್ರಮಕ್ಕೆ ಮೆರುಗುನೀಡಿದರು. ಕಾರ್ಯಕ್ರಮದಲ್ಲಿ, ಶ್ರೀ ಡಾ. ವಿ.ನಾಗೇಂದ್ರ ಪ್ರಸಾದ್ ಅವರಿಗೆ ಶಾಲು ಹೊದಿಸಿ ಪೇಟ ಮತ್ತು ಹೂವಿನ ಹಾರ ಹಾಕಿ ಸನ್ಮಾನಿಸಲಾಯಿತು.
ಮಸ್ಕತ್ ನಿಂದಲ್ಲದೆ, ಕರ್ನಾಟಕದಿಂದ ಹಲವಾರು ಕನ್ನಡಿಗರು ಕಾರ್ಯಕ್ರಮವನ್ನು ಆನ್ ಲೈನ್ ಮುಖಾಂತರ ವೀಕ್ಷೀಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ