ಗುರುವಾರ, ಜನವರಿ 2, 2014

ಮಸ್ಕತ್: ವಿಜ್ರಂಭಣೆಯಿಂದ ನಡೆದ ಶ್ರೀ ಆಂಜನೇಯ ಸ್ವಾಮಿ ಪೂಜೆ


ಓಮಾನ್ ಕರ್ನಾಟಕ ಆರಾಧಾನ ಸಮಿತಿಯು (ಓಂಕಾರ) ಕಳೆದ ವರ್ಷ ೨೦೧೨ ರಲ್ಲಿ ಆಯೋಜಿಸಿದ್ದಂತೆ ಈ  ಬಾರಿ ೨೭ ಡಿಸೆಂಬರ್ ೨೦೧೩ ರಂದು ಶ್ರೀ ಆಂಜನೇಯ ಪೂಜೆ ಯನ್ನು ಮಸ್ಕತ್ ನ ಶ್ರೀ ಕೃಷ್ಣ ಮಂದಿರ ಸಭಾಂಗಣದಲ್ಲಿ ಆಯೋಜಿಸಿದ್ದರು. ಬೆಳಿಗ್ಗೆ ೮:೩೦ ಪ್ರಾರ್ಥನೆ ಯಿಂದ ಶುರುವಾದ ಕಾರ್ಯಕ್ರಮಸಂಕಲ್ಪಮೂರ್ತಿ ಪ್ರತಿಷ್ಠಾಪನೆಪಂಚಾಮೃತ ಅಭಿಷೇಕಮಹಾ ಅಭಿಷೇಕಸುವರ್ಣ ಕಿರೀಟ ಸಮರ್ಪಣೆಅಲಂಕಾರಹರಿವಾಯುಸ್ತುತಿ,ಹನುಮಾನ್ ಚಾಲೀಸಭಜನೆಮಹಾ ಮಂಗಳಾರತಿ ತದನಂತರ ಮಹಾಪ್ರಸಾದ ದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯ ಗೊಳಿಸಲಾಯಿತು.

ಬೆಳಿಗ್ಗೆ ೮:೩೦ ರಿಂದ ಪೂಜೆಗೆ ಆಗಮಿಸಿದ ಸಾವಿರಾರು ಭಕ್ತರುಮಧ್ಯ್ಹಾನ ಮಹಾ ಪ್ರಸಾದ ವಿನಿಯೋಗದ ವರೆವಿಗೂ ಪಾಲ್ಗೊಂಡು ಶ್ರೀ ಆಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದು ವಿಶೇಷ ವಾಗಿತ್ತು. ಜತೆಗೆ ಹಲವಾರು ಸ್ವಯಂ ಸೇವಾ ಕಾರ್ಯಕರ್ತರುಸಾರ್ವಜನಿಕ ಭಕ್ತರು ಈ ಧಾರ್ಮಿಕ ಕಾರ್ಯಕ್ಕೆ ಆಗಮಿಸಿ ತನುಮನಧನದ ಸಹಕಾರ ನೀಡಿ ಪೂಜೆಯ ಯಶಸ್ಸಿಗೆ ಕಾರಣೀಭೂತರಾದರು. ಶ್ರೀ ಆಂಜನೇಯ ಸ್ವಾಮಿ ಪೂಜೆ ಬಹು ವಿಜ್ರಂಭಣೆ ಯಿಂದ ನಡೆದಿದ್ದಕ್ಕೆ ಈ ಸಂಧರ್ಭದಲ್ಲಿ ಸಾವಿರಾರು ಜನರು ಸಾಕ್ಷಿಗಳಾದರು. ಅದರಲ್ಲೂ ಶ್ರೀ ಕೃಷ್ಣ ಮಂದಿರ ಸಭಾಂಗಣದಲ್ಲಿ ಕನ್ನಡದ ಕಲರವ ಹಿಂದೆಂದಿಗಿಂತಲೂ ಮಾರ್ದನಿಸುತಿತ್ತು.

ಪೂರ್ವಭಾವಿ ತಯಾರಿ: ಪೂಜಾಕಾರ್ಯಕ್ರಮದ ಪೂರ್ವಭಾವಿ ತಯಾರಿಕೆಯೊಂದಿಗೆ ಕಾರ್ಯಕಾರಿ ಸಮಿತಿಉತ್ಸಾಹಿ ಸ್ವಯಂ ಸೇವಾ ಕಾರ್ಯಕರ್ತರ ತಂಡ ಕಳೆದ ಹಲವಾರು ದಿನಗಳಿಂದ ವ್ಯವಸ್ಥಿತವಾಗಿ ಕಾರ್ಯಯೋಜನೆಗಳನ್ನು ಸಿದ್ದ ಪಡಿಸಿಕೊಂಡು ಪೂಜಾ ಕಾರ್ಯದ ಯಶಸ್ಸಿನಲ್ಲಿ ಭಾಗಿಗಳಾದರು. ಪೂಜೆಗಾಗಿ ಬೆಂಗಳೂರಿನಿಂದ ವಿಶೇಷವಾಗಿ ಹೂವುಪೂಜ ಸಾಮಗ್ರಿಶಲ್ಯ ಹಾಗು ಒಂದು ಸಾವಿರ ಹನುಮಾನ್ ಚಾಳಿಸಾ ಕನ್ನಡಹಿಂದಿ/ಇಂಗ್ಲೀಶ್ ಪುಸ್ತಕಗಳನ್ನು ತರಿಸಿದ್ದರು.

ಪೂಜಾ ವೇದಿಕೆ: ಶ್ರೀ ಆಂಜನೇಯ ಪೂಜಾ ವೇದಿಕೆಯನ್ನು ಸ್ವಯಂ ಸೇವಾ ಕಾರ್ಯಕರ್ತರು ಮತ್ತು ಸಮಿತಿ ಸದಸ್ಯರು ಅತೀ ಉತ್ಸಾಹದಿಂದ ಫಲ ಪುಷ್ಪಗಳಿಂದ ಅಲಂಕರಿಸಿದ್ದರು. ಸುತ್ತಲೂ ಪುಷ್ಪಾಲಂಕಾರದೊಂದಿಗೆ ಮಧ್ಯದಲ್ಲಿ ಬೃಹತ್ ಶ್ರೀ ಆಂಜನೇಯ ಚಿತ್ರಪಟ ಅದರ ಮುಂದೆ ಸುಂದರ ಶ್ರೀ ಆಂಜನೇಯ ವಿಗ್ರಹಎರಡು ಬದಿಗಳಲ್ಲಿ ಶ್ರೀ ಆಂಜನೇಯ ಮತ್ತು ಶ್ರೀ ರಾಮಲಕ್ಷ್ಮಣ ಮತ್ತು ಸೀತಾದೇವಿ ಕಟೌಟ್ ಇರಿಸಿದ್ದುಪೂಜಾ ಸಭಾಂಗಣದಲ್ಲಿ ಭಕ್ತ ಸಮೂಹವನ್ನು ಆಕರ್ಷಿಸುತ್ತಿತ್ತು.

ಪೂಜಾ ವಿಧಿ ವಿಧಾನ:- ಸರ್ವರ ಪರವಾಗಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ಸಂಕಲ್ಪದೊಂದಿಗೆ ಪೂಜಾ ವಿಧಿ ವಿಧಾನಗಳನ್ನು ಶ್ರೀ ಲಕ್ಷ್ಮಿನಾರಾಯಣ ಆಚಾರ್ಯರು ಪ್ರಾರಂಭಿಸಿದರು.  ಶ್ರೀ ಆಂಜನೇಯ ವಿಗ್ರಹ ಪ್ರತಿಷ್ಠಾಪನೆಯ ನಂತರಪಂಚಾಮೃತ ಹಾಗು ಗಂಧದ ಮಹಾಅಭಿಷೇಕ ನೆರೆವೇರಿಸಿದರು. ಮೂರ್ತಿಗೆ ಸುವರ್ಣ ಕಿರೀಟ ಧಾರಣೆ ಮಾಡಿನಂತರ ಅಲಂಕಾರಪೂಜೆ ಮತ್ತು ವಡಮಾಲ ಸಮರ್ಪಣೆ ಮಾಡಿದರು.

ಭಜನೆ ಮತ್ತು ಭಕ್ತಿ ಗೀತೆಗಳು: ರಾಮ ರಕ್ಷಾ ಸ್ತೋತ್ರಪವಮಾನಹರಿವಾಯು ಸ್ತುತಿಹನುಮಾನ್ ಚಾಳಿಸಾಆಂಜನೇಯ ಸ್ತೋತ್ರಗಣಪತಿಶ್ರೀಕೃಷ್ಣ,ಲಕ್ಷ್ಮಿ ದೇವಿರಾಮನಾಮಇನ್ನು ಮುಂತಾದ ದೇವರ ಹಾಡುಗಳನ್ನುಡಿವೈನ್ ಪಾರ್ಕ್ತುಳುಕೂಟಸಾಯಿ ಸಮಿತಿಮತ್ತು GSB Group ನವರು ಹಾಡಿ ಭಕ್ತರನ್ನು ಭಾವ ಪರವಶಗೊಳಿಸಿದರು,  ಕನ್ನಡದ ಭಕ್ತಿ ಗೀತೆಗಳುದೇವರ ನಾಮಭಜನೆ ಗಳಿಂದ ಸಭಾಂಗಣದಲ್ಲಿ ವಿಶೇಷ ಮೆರುಗನ್ನು ನೀಡಿತ್ತು. ತಮಿಳುನಾಡು ಚೆನ್ನೈ ನಿಂದ ವಿಶೇಷವಾಗಿ ಬಂದಿದ್ದ ಶ್ರೀ ವಾಸುದೇವರಾವ್ (ಮೂಲತಃ ಬೆಂಗಳೂರಿನವರು) ಹರಿ ವಾಯು ಸ್ತುತಿ ಪಠಣ ಮಾಡಿದರು. ಶ್ರೀಯುತರು ಹರಿವಾಯುಸ್ತುತಿ ಯಲ್ಲಿ ಪಾರಂಗತರಾಗಿದ್ದುಭಾರತ ದೇಶದ ಎಲ್ಲೆಡೆ ಹಾಗು ವಿದೇಶಗಳಲ್ಲಿ ಸಹ ಸಾವಿರಾರು ಕಡೆ ಪಠಣ ಮಾಡಿದ್ದಾರೆ.

ಮಹಾಪ್ರಸಾದ ವಿತರಣೆ: ಮಹಾಮಂಗಾಳಾರತಿಯ ನಂತರ ತೀರ್ಥ ಪ್ರಸಾದ ಸ್ವೀಕರಿಸಿದ ನಂತರ ದೇವಸ್ಥಾನದ ಆವರಣ ದಲ್ಲಿ ಅತ್ಯಂತ ರುಚಿಯಾದ ಭೋಜನವನ್ನು ಮಹಾಪ್ರಸಾದವನ್ನಾಗಿ ಸ್ವೀಕರಿಸಿದ ಭಕ್ತ ಸಮೂಹ ಓಂಕಾರ ಸಮಿತಿಯವರನ್ನು ಎಲ್ಲೆಡೆ ಪ್ರಶಂಸಿತಿದ್ದುದ್ದನ್ನು ಕಂಡು ಬಂತುಪೂಜಾಕಾರ್ಯದಲ್ಲಿ ಮಹಾಪ್ರಸಾದ ವಿತರಣೆಯ ಜವಬ್ಧಾರಿಯನ್ನು ವಹಿಸಿಕೊಂಡಿದ್ದ ಕಾರ್ಯಕರ್ತರ ತಂಡ ವಿತರಣೆ ಕಾರ್ಯವನ್ನು ಅಚ್ಚುಕಟ್ಟಾಗಿ ನೆರವೇರಿಸಿದರು.

ಸೇವಾ ವಿವರ: ಸಾರ್ವಜನಿಕರಿಗೆಮಹಾಪ್ರಸಾದ ಸೇವೆಸರ್ವ ಸೇವೆಹರಿವಾಯುಸ್ತುತಿ/ ಹನುಮಾನ್ ಚಾಲಿಸಾ ಪಾರಾಯಣಹಾಗೂ ವಡಮಾಲೆ ಸಮರ್ಪಣೆ ಸೇವೆಯ ಸೌಲಭ್ಯ ನೀಡಿದ್ದರುಸೇವೆಸಲ್ಲಿಸಿದ ಭಕ್ತರಿಗೆಫಲ ಪುಷ್ಪತಾಂಬೂಲದೊಂದಿಗೆ ಸೇವೆಗೆ ತಕ್ಕಂತೆ ಓಂಕಾರ ಮುದ್ರಿತ ಬೆಳ್ಳಿನಾಣ್ಯ ಗಳನ್ನು ನೀಡಲಾಯಿತು

ಓಂಕಾರ ಸಮಿತಿಯ ವಿಶೇಷ ವೇನೆಂದರೆಇಲ್ಲಿ ಅಧ್ಯಕ್ಷಉಪಾದ್ಯಕ್ಷಖಜಾಂಚಿ ಎನ್ನುವ ಯಾವುದೇ ಹುದ್ದೆ ಗಳನ್ನು ಹೊಂದಿಲ್ಲದೆ ಎಲ್ಲ ಕಾರ್ಯಕರ್ತರು ಸ್ವಯಂ ಪ್ರೇರಣೆ ಯಿಂದ ತಮಗೆ ವಹಿಸಿದ ಕೆಲಸವನ್ನು ಕೆಲಸವನ್ನು   ಅಚ್ಚುಕಟ್ಟಾಗಿ ಜವಬ್ದಾರಿಯಿಂದ ನಿರ್ವಹಿಸಿ ಜನರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆಈ ಸಮಿತಿಯುಇದುವರೆಗೂ ಶ್ರೀ ಆಂಜನೇಯ ಪೂಜೆಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ,  ಶತಾವಧಾನಿ ಡಾರಾ. ಗಣೇಶ್ ರವರಿಂದ ಓಂಕಾರ ಜ್ಞಾನಾಮೃತ - ೨೦೧೩ಮತ್ತು  ಡಾ. ವಿಧ್ಯಾಭೂಷಣರವರಿಂದ ನಾದಾಮೃತ - ೨೦೧೩ ಕಾರ್ಯಕ್ರಮಗಳನ್ನು ಏರ್ಪಡಿಸಿ ಮಸ್ಕತ್ ಕನ್ನಡಿಗರಿಗೆ ಭಕ್ತಿಜ್ಞಾನಾ ಮತ್ತು ಸಂಗೀತ ರಸದೌತಣವನ್ನು ನೀಡಿದೆ.

ಓಮಾನ್ ಕರ್ನಾಟಕ ಆರಾಧಾನ ಸಮಿತಿಯು ಶ್ರೀ ಆಂಜನೇಯ ಪೂಜೆಯನ್ನು ಅಯೋಜಿಸಿಭಕ್ತಾಧಿಬಂಧುಗಳಿಗೆ ಅವಕಾಶವನ್ನು ಕಲ್ಪಿಸಿ ಯಶಸ್ಸು ಪಡೆದ ಸರ್ವರಿಗೂ ನಾವು ಒಮಾನ್ ಕನ್ನಡಿಗರ ಪರವಾಗಿ ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.


ಲೇಖಕರು: ಪಿ.ಎಸ್.ರಂಗನಾಥಮಸ್ಕತ್
















1 ಕಾಮೆಂಟ್‌:

Click below headings