ಹಿಂದೆ ಆಗ ಅಧ್ಯಕ್ಷರಾಗಿದ್ದ ಶ್ರೀ ಅನಿಲ್ ಭಾಸಗಿ ಯವರನ್ನು ಸಂದರ್ಶಿಸಿ ಪಡೆದ ಸಂದರ್ಶನ
ಪ್ರ: ನೀವು ಕನ್ನಡ ಸಂಘದಲ್ಲಿ ಎಷ್ಟುವರ್ಷಗಳಿಂದ ಕೆಲಸ ಮಾಡ್ತಾಯಿದ್ದೀರಾ?
ಅನಿಲ್ ಭಾಸಗಿ ಯವರ ಉತ್ತರ: ಸುಮಾರಾಗಿ ಒಂದೂ ವರೆ ವರ್ಷದಿಂದ ಕೆಲಸಮಾಡ್ತಾಯಿದ್ದೀನಿ, ಮೊದಲು ೭-೮ ತಿಂಗಳು, ಎಂಟರ್ಟೆನ್ ಕೊಆರ್ಡಿನೇಟರ್ ಆಗಿ ಕೆಲಸಮಾಡಿದ್ದೆ, ಈಗ ಕನ್ವೀನರ್ ಆಗಿ ಮಾಡ್ತಾ ಯಿದ್ದಿನಿ.
ಪ್ರ: ಸಂಘದ ಕಾರ್ಯಕ್ಷೇತ್ರ ಮತ್ತು ವ್ಯಾಪ್ತಿ ಯ ಬಗ್ಗೆ ವಿವರ ನೀಡಿ.
ಉ: ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸೋದು, ಮಕ್ಕಳಲ್ಲಿ ಯಿರುವ ಪ್ರತಿಭೆ ಯನ್ನು ಗುರುತಿಸಿ, ಹಾಗೆ ನಾವೆಲ್ಲರು ವೃತ್ತಿಯನ್ನು ಅರಸಿ ಒಮಾನಿ ಗೆ ಬಂದಿದ್ದೀವಿ, ನಮ್ಮಲ್ಲೂ ಸಹ ಎಲ್ಲೋ ಒಂದು ಕಡೆ ಪ್ರತಿಭೆ ಯಿರುತ್ತೆ, ಅದನ್ನು ಪ್ರದರ್ಶಿಸೋದಿಕ್ಕೆ ಒಂದು ವೇದಿಕೆ ಸಿಕ್ಕಿರಲ್ಲ, ರಾಜ್ಯದಲ್ಲಾದರೆ ೧೦ ರಲ್ಲಿ ೧೧ ಆಗುವ ಸಂಭವ ವೇ ಹೆಚ್ಚು ಆದರೆ ಇಲ್ಲಿ ಇರುವ ೫ ಜನರಲ್ಲಿ ಒಬ್ಬರಾಗಿ ಗುರುತಿಸಿಕೊಳ್ಳುವ ಅವಕಾಶ ವಿರುತ್ತೆ ಅವರಿಗಾಗಿ ಒಂದು ವೇದಿಕೆ ಯನ್ನು ಒದಗಿಸಿಕೊಡುವುದು. ಅಂತರವನ್ನು ನಾವು ಗುರುತಿಸಿ ಪ್ರೋತ್ಸಾಹ ನೀಡಿದರೆ ನಮ್ಮಲ್ಲೇ ಆ ಕಲಾವಿದ ಬೆಳೆಯಲು ಸಾಧ್ಯವಾಗುತ್ತದೆ. ಸಾಮಾಜಿಕ ಜವಬ್ದಾರಿ ಹೊಣೆ, ನಮ್ಮ ಕಾರ್ಯಕ್ರಮಗಳು ಕೇವಲ ಒಂದು ಪ್ರದೇಶಕ್ಕೆ ಸೀಮಿತವಾಗದೆ ಸಮಗ್ರ ಕರ್ನಾಟಕದ ಚಿತ್ರಣವನ್ನು ನಮಗೆ ಹಾಗು ನಮ್ಮ ಮಕ್ಕಳಿಗೆ ಪರಿಚಯ ಮಾಡಿಕೊಡುವುದು. ಇಂದಿನ ಮಕ್ಕಳಲ್ಲಿ ಕರ್ನಾಟಕ ರಾಜ್ಯದ ಕಲ್ಪನೆ ಸರಿಯಾಗಿ ಮೂಡಿಲ್ಲ ಹಾಗು ಮೂಡುತ್ತಿಲ್ಲ, ಅದರ ಅರಿವನ್ನು ನೀಡೋದು. ಕನ್ನಡಿಗರು ಅಂತ ಹೆಮ್ಮೆ ಪಡುವುದಕ್ಕೆ ನಾವು ಏನು ನಮ್ಮಲ್ಲಿ ಏನಿದೆ, ಐತಿಹಾಸಿಕ ಪರಂಪರೆ ಯುಳ್ಳ ನಮ್ಮ ರಾಜ್ಯ ದ ಇತಿಹಾಸ ದ ಸಮಗ್ರ ಚಿತ್ರಣ ವನ್ನು ಪ್ರದರ್ಶಿಸುವುದು.
ಪ್ರ: ಈ ನಿಮ್ಮ ಕಲ್ಪನೆ ನಿಜವಾಗಿಯೂ ಸಾಕಾರ ಗೊಂಡಿದೆಯಾ?
ಉ: ನಾನು ಸಂಘದಲ್ಲಿ ಸಕ್ರಿಯ ವಾಗಿರುವುದು ಕೇವಲ ೧೮ ತಿಂಗಳು ಮಾತ್ರ, ಈ ಅವಧಿಯಲ್ಲಿ ಸಾಧಿಸಿದ್ದು ಬಲು ಕಡಿಮೆ, ಸಾಧಿಸಬೇಕಾದದ್ದು ಬಹಳಷ್ಟಿದೆ. ಇದಕ್ಕೂ ಮುಂಚೆ ನಡೆದ ಸಂಘದ ಚಟುವಟಿಕೆ ಗಳ ಬಗ್ಗೆ ನನಗೆ ಅಷ್ಟೊಂದು ಮಾಹಿತಿಯಿಲ್ಲ
ಪ್ರ: ಕರ್ನಾಟಕ ವಿಭಾಗ, ಭಾರತೀಯ ಸಾಮಾಜಿಕ ಸಂಸ್ಥೆ ಯ ಅಧೀನ ದಲ್ಲಿದೆ, ಹೀಗಿರುವಾಗ ನಿಮ್ಮ ಕಾರ್ಯಕ್ಷೇತ್ರ ವ್ಯಾಪ್ತಿಯನ್ನು ಮೀರಿ ಏನನ್ನಾದರು ಮಾಡಿದ್ದೀರಾ?
ಊ: ಇಲ್ಲ, ಇದುವರೆವಿಗೂ ಮಾಡಿಲ್ಲ. ISC ಅಧೀನ ನಲ್ಲಿ ಹಾಗು ಅವರು ರೂಪಿಸಿರುವ ನಿಯಮಾವಳಿಗಳಿಗೆ ಒಳಪಟ್ಟು ನಮ್ಮ ಕೆಲಸವನ್ನು ನಾವು ಮಾಡ್ತಾಯಿದ್ದೀವಿ. ಕಾರ್ಯಕ್ರಮಗಳ ವಿವರ ವನ್ನು ISC ಗೆ ರವಾನಿಸಿ ಮಾಹಿತಿ ಕೊಟ್ಟು ಮುಂದಿನ ಕೆಲಸಗಳನ್ನು ಮಾಡಬೇಕಾಗುತ್ತೆ.
ಪ್ರ: ನಿಮ್ಮ ಈಗಿನ ಕಾರ್ಯಾವಧಿ ಯಲ್ಲಿ ಯಾವುದಾದರು ಸವಾಲು ಎನಿಸುವಂತಹ( ಚಾಲೆಂಜಿಂಗ್) ಕೆಲಸವನ್ನು ನಿರ್ವಹಿಸಿದ್ದೀರಾ? ಅಂತಹ ಸಂಧರ್ಭ ಬಂದಿದೆಯಾ? ಕ್ಲಿಷ್ಟಕರವಾದ ಪರಿಸ್ಥಿತಿ ಯನ್ನು ಎದುರುಸಿದ್ದೀರಾ?
ಉ: ಹೌದು, ಸ್ಥಳೀಯ ಪ್ರತಿಭೆ ಗಳನ್ನು ಗುರುತಿಸುವುದು ಬಹುದೊಡ್ಡ ಸವಾಲು. ನಮ್ಮಲ್ಲಿರುವ ೨೧೦ ಸದಸ್ಯರಲ್ಲಿ ಯಾರು ಯಾವ ಕ್ಷೇತ್ರದಲ್ಲಿ ಪ್ರತಿಭಾವಂತರು? ಅವರಿಗೆ ಹೇಗೆ ಸೂಕ್ತ ವೇದಿಕೆ ಯನ್ನು ಒದಗಿಸುವುದು ಎನ್ನುವುದು ನಮ್ಮ ಮುಂದಿರುವ ದೊಡ್ಡ ಸವಾಲು.
ಪ್ರ: ಸಂಘದ ನಿಮ್ಮ ಕಾಲಾವಧಿ ಯಲ್ಲಿ ಏನು ಸಾಧನೆ ಮಾಡಿದ್ದೀರಾ?
ಉ: ಅಂತದ್ದೇನು ಸಾಧಿಸಿಲ್ಲ.
ಪ್ರ: ಸಂಘದ ಸದಸ್ಯರೆಷ್ಟು?
ಉ: ೨೧೦ ಜನ.
ಪ್ರ: ಸದಸ್ಯರನ್ನು ಜಾಸ್ತಿ ಮಾಡಬೇಕು ಅಂತ ಯೋಚನೆ ಯಿದೆಯಾ?
ಉ: ಹೌದು, ಇದೆ. ಸಂಘದ ಹಳೆಯ ಸದಸ್ಯರನ್ನು ಮರಳಿ ಕರೆತರುವ ಪ್ರಯತ್ನ ನಡೀತ ಯಿದೆ. ಜನ ಜಾಸ್ತಿ ಯಾದಷ್ಟು, ಕೆಲಸ ಮಾಡುವ ಹುಮ್ಮಸ್ಸು ಜಾಸ್ತಿಯಾಗುತ್ತೆ. ಖುಷಿ ಯಾಗುತ್ತೆ.
ಪ್ರ: ಸದಸ್ಯರನ್ನು ಹೆಚ್ಚು ಮಾಡುವ ಕೆಲಸ ಇಷ್ಟುದಿನ ಯಾಕೆ ಮಾಡಲಿಲ್ಲ? ಇಷ್ಟು ವರ್ಷಗಳಿಂದ ಕೇವಲ ೧೦೦ ಅಥವ ೨೦೦ ಜನರನ್ನು ನೊಂದಾಯಿಸಿಕೊಂಡು ಈ ೨೦೦ ರ ಗಡಿಯೊಳಗೆ ಯಾಕಿದ್ದೀರ?
ಉ:ಇಲ್ಲ. ನಾನು ಕನ್ವೀನರ್ ಆಗುವ ಮುಂಚೆ, ಸದಸ್ಯ ನಾಗಿದ್ದೆ. ನಾವು ಕನ್ನಡಿಗರಿಗೆ ಸಂಘ ಜೀವಿಗಳಾಗಿ, ಹೊಂದಿಕೊಂಡು ಸಾಮಾಜಿಕ ಬದ್ದತೆ ಇಟ್ಟುಕೊಂಡು ಜೀವಿಸಿಕೊಂಡು ಹೋಗುವುದರಲ್ಲಿ ಅಥವ ಅದರ ಅರಿವನ್ನು ಮೂಡಿಸಬೇಕಾಗಿದೆ.
ಪ್ರ: ಈ ವಿಷಯದಲ್ಲಿ ಸಂಘ ಎಡವಿದೆ ಅಂತ ಅನ್ನಿಸುತ್ತ?
ಉ: ಇಲ್ಲ. ಇದು ಎಲ್ಲರ ಜವಾಬ್ದಾರಿ, ಮನುಷ್ಯ ಸಂಘ ಜೀವಿ, ಸಂಘ ಹಾಗೂ ಸದಸ್ಯರ ಜವಬ್ದಾರಿ. ನನ್ನ ಅನುಭವದ ಪ್ರಕಾರ, ಇದರಲ್ಲಿ ಎರಡು ಕಾರಣಗಳಿರಬಹುದು ಒಂದು ಕನ್ನಡಿಗರಲ್ಲಿ ಆಸಕ್ತಿ ಕಡಿಮೆ ಯಿರಬಹುದು ಅಥವ ಆಸಕ್ತಿಯನ್ನು ಬೆಳೆಸುವುದಕ್ಕೆ ಸಂಘ ಪ್ರಯತ್ನಿಸದೇ ಇರಬಹುದು. ಬೇರೆ ಭಾಷೆಯವರಲ್ಲಿ ಇರುವ ಹಾಗೆ ಕನ್ನಡಿಗರಲ್ಲಿ ಭಾಷಾ ಅಭಿಮಾನ ಕಡಿಮೆಯಿರೋದು ಸಹ ಒಂದು ಕಾರಣ. ಮುಂಚೆ ಹೊರದೇಶಗಳಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಕನ್ನಡಿಗರು ಸಿಗ್ತಾಯಿದ್ದರು, ಎಲ್ಲರೂ ಒಂದುಗೂಡುವುದಕ್ಕೆ ಸಂಘ ಒಂದು ಕಾರಣವಾಗ್ತಾಯಿತ್ತು. ಆದರೆ ಈಗ, ಚಿಕ್ಕ ಚಿಕ್ಕ ಗುಂಪು ಗಳಾಗಿ,ಕೆಲವರು ಮನೆ ಮನೆ ಗಳಲ್ಲಿ ಗೆಟ್ ಟುಗೆದರ್, ಹಾಗೆ ಪಿಕ್ ನಿಕ್ ಮುಂತಾದವುಗಳಲ್ಲಿ ಒಟ್ಟಿಗೆ ಸೇರ್ತಾಯಿರೋದು, ಅಲ್ಲಿ ಅವರೇ ಮುಖ್ಯವಾಗಿರ್ತಾರೆ ಹಾಗೂ ಇಂತಹ ಚಿಕ್ಕ ಚಿಕ್ಕ ಕಾರ್ಯಕ್ರಮಗಳಲ್ಲಿ ಅವರೆಲ್ಲರಿಗೂ ಪ್ರಾಶಸ್ತ್ಯ ಸಿಗುವುದರಿಂದ, ಸಂಘದ ಎಲ್ಲ ಚಟುವುಟಿಕೆಗಳಿಗೆ ಭಾಗವಹಿಸುವುದರಲ್ಲಿ ನಿರಾಸಕ್ತಿ ಯಿರಬಹುದು. ಹಾಗೆ ಇಂದಿನ ಮಾಧ್ಯಮ ಸಹ ಒಂದು ಕಾರಣ, ಒಂದಲ್ಲೊಂದು ಚಾನೆಲ್ ನ ಲೈವ್ ಕಾರ್ಯಕ್ರಮದಲ್ಲಿ ಒಬ್ಬರಲ್ಲ ಒಬ್ಬರು ಕಲಾವಿದರು ಬರ್ತಾಯಿರ್ತಾರೆ. ಮತ್ತೊಂದು ಈಗಿನ ಕಾಲದ ಮಕ್ಕಳ ಶಿಕ್ಷಣ ಪದ್ದತಿ, ಪರಿಕ್ಷೆಗಳ ಒತ್ತಡ, ಹೀಗೆ ಮಕ್ಕಳ ಕಾರ್ಯಕ್ರಮ ಏರ್ಪಡಿಸುವುದಕ್ಕೆ ಬಹಳ ತೊಡಕುಗಳು ಜತೆಗೆ ಮಸ್ಕತ್ ನ GEOGRAPHICAL LOCATION ತೊಂದರೆ. ನೃತ್ಯ ಕಾರ್ಯಕ್ರಮ ವೇರ್ಪಡಿಸಿದರೆ, ಮಕ್ಕಳಿಗೆ ತರಬೇತಿ ಕೊಡುವುದಕ್ಕೆ ಹಾಗು ಕೇಂದ್ರ ಕ್ಕೆ ಬಿಡೋದು ಮತ್ತು ವಾಪಾಸ್ಸು ಕರೆದುಕೊಂಡು ಹೋಗೋ ತೊಂದರೆಗಳು. ಮಸ್ಕತ್ತಿನ ಸಾರಿಗೆ ವ್ಯವಸ್ಥೆ ಯ ತೊಂದರೆ. ಸಮಯದ ಅಭಾವ, ಬಹಳಜನರಿಗೆ ಆಸಕ್ತಿಯಿರುತ್ತದೆ ಆದರೆ ಹೀಗೆ ಹಲವಾರು ತೊಂದರೆಗಳಿಂದ ಜನ ದೂರ ಸರಿತಾರೆ.
ಪ್ರ: ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಲ್ಲಿ ಕನ್ನಡಿಗರಲ್ಲಿ ಆಸಕ್ತಿ ಕಡಿಮೆ ಯಿದೆಯಾ?
ಉ: ಕನ್ನಡಿಗರಲ್ಲಿ ನಿರಾಸಕ್ತಿಯಿಲ್ಲ ಆದರೆ, ಅವರ ಆಸಕ್ತಿಯನ್ನು ಗುರುತಿಸುವ ಕೆಲಸ ಮಾಡಬೇಕಾಗಿದೆ.
ಪ್ರ: ಸಂಘದಿಂದ ವರ್ಷದಲ್ಲಿ ಎಷ್ಟು ಕಾರ್ಯಕ್ರಮ ನಡೆಸಿದ್ದೀರಾ?
ಉ: ಒಂದು ೫-೬ ಕಾರ್ಯಕ್ರಮ ಮಾಡಿರಹುದು. ದೊಡ್ಡ ಪ್ರಮಾಣದಲ್ಲಿ ಅಂತದ್ದೇನೂ ಮಾಡಲಿಕ್ಕಾಗಲಿಲ್ಲ.
ಪ್ರ: ನಿಮ್ಮ ಸಂಘದ ಸಾಮಾಜಿಕ ಬದ್ಧತೆ ಏನು?
ಉ: ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸೋದು, ಅದು ನಮ್ಮ ದೊಡ್ಡ ಸಾಮಾಜಿಕ ಬದ್ದತೆ.
ಪ್ರ: ಜನರಲ್ಲಿ ಕನ್ನಡ ಅಭಿಮಾನ ವನ್ನು ಬೆಳೆಸಿ, ಅದರ ಕಿಚ್ಚನ್ನು ಹೊತ್ತಿಸುವ ಕಾರ್ಯಕ್ರಮಗಳ ಕೊರತೆ ಬಹು ಕಾಡುತ್ತಿದೆ. ನಿಮ್ಮ ಯಾವುದೆ ಕಾರ್ಯಕ್ರಮಗಳಲ್ಲಿ, ಇಂತಹ ಕೆಲಸ ಮಾಡೆಇಲ್ಲ. ಕನಿಷ್ಟ ಪಕ್ಷ ಒಂದು ಭಾಷಣ ಇಲ್ಲ, ಒಂದು ಅಭಿಮಾನದ ನುಡಿ ಇಲ್ಲ. ನೀವು ಸಿದ್ದ ಪಡಿಸಿಕೊಂಡ ಕಾರ್ಯಕ್ರಮ ಮಾಡಿ ಮುಗಿಸುವುದೆ ನಿಮ್ಮ ಆದ್ಯತೆ ಯಾಗಿ ಕಾಣುತ್ತಿದೆ. ಕಳೆದಬಾರಿಯ ೨೦೧೨ ರಾಜ್ಯೋತ್ಸವ ಕೇವಲ ಒಂದು ಆರ್ಕೆಸ್ಟ್ರಾ ಗೆ ಸೀಮಿತವಾಗಿತ್ತು. ರಾಜ್ಯೋತ್ಸವದಲ್ಲಿ ಕನ್ನಡ ಅಭಿಮಾನಕ್ಕೆ ಬೆಲೆ ಇಲ್ವಾ?
ಉ: ಅದು ಆಗಲಿಲ್ಲ, ಆದರೆ ಈ ಸಾರಿ ಖಂಡಿತ ಮಾಡ್ಬೇಕಾಗಿತ್ತು, ಕಾರಾಣಾಂತರಗಳಿಂದ ಆಗಲಿಲ್ಲ.
ಪ್ರ: ನಿಮ್ಮ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವದ ತೊಂದರೆ ಏನಾದರು ಆಗಿದೆಯಾ?
ಉ: ಇಲ್ಲ, ಹಲವಾರು ಪ್ರಾಯೋಜಕರ ಸಹಕಾರ ಹಾಗೂ ಸಂಘದ ಕಾರ್ಯಕರ್ತರ ಪರಿಶ್ರಮದಿಂದ ಅಂತಹ ತೊಂದರೆ ಆಗಿಲ್ಲ.
ಪ್ರ: ನಮ್ಮ ಸಾಮನ್ಯ ಕನ್ನಡಿಗರ ಜವಬ್ದಾರಿ ಯೇನು? ಮಸ್ಕತ್ ಕನ್ನಡಿಗರಿಂದ ನಿಮ್ಮ ನಿರೀಕ್ಷೆ ಯೇನು
ಉ: ಎಲ್ಲರೂ ಸಂಘದ ಸದಸ್ಯರಾಗಿ, ಸಂಘದ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ. ಉತ್ಸಾಹ ತೋರಿಸಿ, ಆಡಳಿತ ಮಂಡಳಿಯ ಸದಸ್ಯರಿಗಿಂತ, ಸಂಘದ ಸದಸ್ಯರು ಬಹು ಮುಖ್ಯ. ಎರಡು ಕಡೆ ಉತ್ತಮ ಭಾಂದವ್ಯ ಇರುವುದು ಒಳ್ಳೆಯದು. ಇದನ್ನು ಬೆಳೆಸುವ ಕಾರ್ಯ ಇಬ್ಬರಿಂದಲೂ ಆಗಬೇಕು.
ಪ್ರ: ನಿಮ್ಮ ಕಾರ್ಯಕ್ರಮ ಗಳ ಆಹ್ವಾನ ಹೇಗೆ. ಕಾರ್ಯಕ್ರಮವನ್ನು ಪ್ರೋತ್ಸಾಹಿಸಲು ಜನರನ್ನು ಹೇಗೆ ಆಕರ್ಷಿಸುತ್ತೀರ?
ಉ: ನಮ್ಮಲ್ಲಿ ಎರಡು ತರಹ ಕಾರ್ಯಕ್ರಮ ಇದೆ ಒಂದು, Inhouse, ಆಮೇಲೆ outdoor-open to all, Inhouse ಕಾರ್ಯಕ್ರಮಕ್ಕೆ Email ಮತ್ತು SMSಮುಖಾಂತರ ಆಹ್ವಾನ. ಹಾಗೆ outdoor-open to all ಕಾರ್ಯಕ್ರಮ ಕ್ಕೆ ಪತ್ರಿಕೆ ಗಳಲ್ಲಿ ಆಹ್ವಾನ ಕೊಡುತ್ತೀವಿ.
ಪ್ರ: ಕಾರ್ಯಕ್ರಮ ಗಳು ಮುಗಿದ ಮೇಲೆ, ಮಾಧ್ಯಮಗಳಲ್ಲಿ ಯಾಕೆ ಮಾಹಿತಿ ನೀಡ್ತಾಯಿಲ್ಲ. ಪ್ರಚಾರ ಯಾಕೆ ಮಾಡ್ತಯಿಲ್ಲ.
ಉ: ಈಗ ಶುರು ಮಾಡ್ತೀವಿ.
ಪ್ರ: ಕರ್ನಾಟಕ ರಾಜ್ಯದ ಕನ್ನಡ ಸಂಸ್ಕೃತಿ ಇಲಾಖೆ ಗೆ ನಿಮ್ಮ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಕೊಡ್ತಾಯಿದ್ದೀರಾ?
ಉ: ಇನ್ನು ಮುಂದೆ ಮಾಡ್ತೀವಿ. ಈಗ ಮಂತ್ರಿ ಯಾಗಿರುವ ಶ್ರೀ ಉಮಾಶ್ರಿ ಯವರಿಗೆ ಕಳುಹಿಸಿದ್ದೇವೆ.
ಪ್ರ: ಸಂಘದ ಚುನಾವಣೆ ಬಗ್ಗೆ ಮಾಹಿತಿ ನೀಡಿ.
ಉ: ಎರಡು ವರ್ಷಕೊಮ್ಮೆ, ಚುನಾವಣೆ ನಡೆಯುತ್ತೆ. ಈ ಸಾರಿ ಅವಿರೋಧವಾಗಿ ಆಯ್ಕೆ ಆಯ್ತು.
ಪ್ರ: ನೀವು ನಿರ್ಧಾರಗಳನ್ನು ಹೇಗೆ ತಗೋತೀರಾ? ಎಲ್ಲರ ಒಪಿನಿಯನ್ ತಗೋತೀರಾ ಅಥವ ಒಬ್ಬರ ಒಪಿನಿಯನ್ ಗೆ ಮಾತ್ರ ಮನ್ನಣೆ ಕೊಡ್ತಿರಾ?
ಉ: ಎಲ್ಲರ ಒಪಿನಿಯನ್ ಗಳನ್ನು ಪರಿಶೀಲಿಸಿ, ಉತ್ತಮ ನಿರ್ಧಾರವನ್ನು ಒಟ್ಟಿಗೆ ತಗೋತೀವಿ.
ಪ್ರ: ಸ್ಥಳೀಯ ಪ್ರತಿಭೆ ಗಳಿಗೆ ಮನ್ನಣೆ ನೀಡಿ, ಪ್ರತಿಭಾ ಪುರಸ್ಕಾರ ನೀಡ್ತಾಯಿದ್ದೀರಾ?
ಉ: ಹೌದು, ಆ ಕೆಲಸ ಪ್ರತಿ ವರ್ಷ ನಡೆಯುತ್ತೆ. ಮೊದಲಿಗೆ ನಾನು ಸಹ ಪ್ರತಿಭಾ ಪುರಸ್ಕಾರ ದ ಫಲಾನುಭವಿ. ಮಕ್ಕಳಿಗಾಗಿ ಪ್ರತಿ ವರ್ಷ, quiz, drawing competion ಇರುತ್ತೆ, ಪ್ರತಿಯೊಬ್ಬರಿಗೂ ಅವಕಾಶ ಕಲ್ಪಿಸಿಕೊಡ್ತೀವಿ.
ಪ್ರ: ಕನ್ನಡ ಸಂಘದಿಂದ ಮಕ್ಕಳಿಗಾಗಿ ಕನ್ನಡ ಕಲಿಸುವ ಕಾರ್ಯಕ್ರಮ ನಡೆಸ್ತಾಯಿದ್ದೀರಾ? ಕನ್ನಡ ಕಲಿಸುವ ಶಿಕ್ಷಕರಿಗೆ, ಸಂಘದ ವತಿಯಿಂದ ಏನಾದರೂ ಸಂಭಾವನೆ ನೀಡ್ತಾಯಿದ್ದೀರ?
ಉ: ಮಕ್ಕಳಿಗಾಗಿ ಕನ್ನಡ ತರಗತಿಗಳು ನಡೀತಾ ಇವೆ, ಶಿಕ್ಷಕರಿಗಾಗಿ ಸಂಭಾವನೆ ಇಲ್ಲ. ಅದು ಅವರ ಸಮಾಜ ಸೇವೆ, ನಾವು ಸಹ ಸ್ವಯಂ ಪ್ರೇರಣೆಯಿಂದ ಯಾವುದೇ ಸಂಭಾವನೆ ಇಲ್ಲದೆ ಸಂಘದ ಚಟುವಟಿಕೆ ಯಲ್ಲಿ ಪಾಲ್ಗೊಂಡಿದ್ದೇವೆ.
ಪ್ರ: ನಿಮ್ಮ ಆಡಳಿತ ಮಂಡಳಿಯಲ್ಲಿ ೯ ಜನ ಸದಸ್ಯರಿದ್ದು, ಎಲ್ಲ ಕೆಲಸಗಳನ್ನು ಸದಸ್ಯರ ಮುಖಾಂತರ ಮಾಡಿಸುವುದು ಬಹು ದೊಡ್ಡ ಸವಾಲು, ಆದ್ದರಿಂದ ಸಹಾಯಕ್ಕಾಗಿ Volunteers ಪಡೆ ನಿಮ್ಮಲಿದ್ದಾರ?
ಉ: ಪಡೆ ಅಂತ ಏನಿಲ್ಲ, ಉತ್ಸಾಹ ಹಾಗೂ ಆಸಕ್ತಿಯಿರುವ ಸ್ವಯಂ ಪ್ರೇರಣೆ ಯಿಂದ ಮುಂದೆ ಬರುವವರಿಗೆ ಅವಕಾಶ ಕೊಟ್ಟಿದ್ದೇವೆ.
ಪ್ರ: ಜನರಲ್ಲಿ ಕನ್ನಡ ಅಭಿಮಾನ ಬೆಳೆಸುವ ಕಾರ್ಯಕ್ರಮ ಏನು ಮಾಡಿದ್ದೀರಾ?
ಉ: ಪ್ರತಿ ಕಾರ್ಯಕ್ರಮದಲ್ಲಿ ನಾವು ಮಾಡಿದ್ದೇವೆ, ಕನ್ನಡ ಅಭಿಮಾನ ಜನರಲ್ಲಿ ಬರಬೇಕು ಅದು ಪ್ರತಿಯೊಬ್ಬರ ಜವಬ್ದಾರಿ.
ಪ್ರ: ಸಂಘದಿಂದ ಸಾಹಿತ್ಯ ಚಟುವಟಿಕೆ ಕಾರ್ಯಕ್ರಮ ಗಳು ತುಂಬಾ ಕಡಿಮೆ ಆಗ್ತಾಯಿದೆ.
ಉ: ಹಾಗೆನಿಲ್ಲ, ಹಿಂದೆ ನಡೆದಿದೆ, ಮುಂದೇನೂ ನಡೆಯುತ್ತೆ.
ಪ್ರ: ಕನ್ನಡಿಗರ ಮದ್ಯೆ ಭಾವನಾತ್ಮಕ ಬಾಂಧವ್ಯ ಬೆಳೆಸುವಂತಹ ಕೆಲಸ ಏನ್ ಮಾಡಿದ್ದೀರಾ? ಸಂಘದ ಜವಬ್ದಾರಿ ಏನು? ವರ್ಷಕ್ಕೆ ೫-೬ ಕಾರ್ಯಕ್ರಮ ಮಾಡಿ ಮುಗಿಸಿದರೆ ನಿಮ್ಮ ಜವಬ್ದಾರಿ ಮುಗಿತಾ? ಜನ ಬರ್ತಾರೋ ಬಿಡ್ತಾರೋ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇದು ಈ ವರ್ಷದ ಅಜೆಂಡಾ, ಇದು ಮುಗಿಸಬೇಕು. ಅಷ್ಟಾದ್ರೆ ಹೆಂಗೆ?
ಉ: ಅದು ಹಾಗಲ್ಲ, ಎಲ್ಲ ವಯೋಮಾನದವರನ್ನು ಬೇರೆ ಬೇರೆ ಆಸಕ್ತಿ ಯಿರುವ ಎಲ್ಲರನ್ನು ತೃಪ್ತಿ ಪಡಿಸೋದು ಕಷ್ಟ. ಅದಕ್ಕಾಗಿ ಬೇರೆ ಬೇರೆ ಕಾರ್ಯಕ್ರಮ ಮಾಡಿ ಜನರನ್ನು ರಂಜಿಸೋ ಕಾರ್ಯಕ್ರಮ ನಡೀತಾಯಿದೆ. ಇದು ಕೇವಲ ಸಂಘದ ಜವಬ್ದಾರಿಯಲ್ಲ. ಕನ್ನಡಿಗರು ಸಹ ತಮ್ಮ ತಮ್ಮ ಆಸಕ್ತಿ ಅನುಗುಣವಾಗಿ ಕಾರ್ಯಕ್ರಮ ಗಳ ವಿವರ ತೆಗೆದು ಕೊಂಡು ಬಂದರೆ ಅದನ್ನು ಪರಿಶೀಲಿಸಿ ನಾವು ನಿರ್ಧಾರ ತೆಗೆದುಕೊಂಡು ಅದನ್ನು ನಡೆಸೋದು ನಮ್ಮ ಜವಬ್ದಾರಿ.
-----****-----
ಹೊಸ ಉದ್ಯೋಗದ ಜವಬ್ದಾರಿಯನ್ನು ಹೊತ್ತು ಶ್ರೀ ಅನಿಲ್ ಭಾಸಗಿಯವರು ಮಸ್ಕತ್ ನಿಂದ ನಿರ್ಗಮಿಸುತಿದ್ದಾರೆ. ಈ ಸಂಧರ್ಭದಲ್ಲಿ ಇಷ್ಟೊಂದು ಮಾಹಿತಿ ಹಂಚಿಕೊಂಡು ನಮ್ಮ ಜತೆ ಮಾತನಾಡಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತ, ಈ ಮೇಲಿನ ಸಂದರ್ಶನ ಈಗಿರುವ ಆಡಳಿತ ಮಂಡಳಿಗೆ ಹಾಗು ಒಮಾನ್ ಕನ್ನಡಿಗರಿಗೆ ಈ ಒಂದು ಚಿಕ್ಕ ವಿಚಾರ ವಿನಿಮಯ ಎಲ್ಲೋ ಒಂದುಕಡೆ ಮಾರ್ಗದರ್ಶಿ ಯಾಗುತ್ತದೆ ಎಂದು ಭಾವಿಸುತ್ತೇನೆ.
ಕನ್ನಡ ಸಂಘ ನಿರ್ವಹಿಸುತ್ತಿರುವ ಎಲ್ಲ ಕಾರ್ಯಕ್ರಮಗಳು ಇನ್ನಷ್ಟು ತುಂಬಾ ಚೆನ್ನಾಗಿ ಮೂಡಿ ಬರಲಿ ಎಂದು ಆಶಿಸುತ್ತ, ಜತೆಗೆ ಒಮಾನ್ ನಲ್ಲಿ ನೆಲಸಿರುವ ಎಲ್ಲ ಕನ್ನಡಿಗರು ಕನ್ನಡ ಸಂಘದಲ್ಲಿ ಸದಸ್ಯತ್ವ ಪಡೆದು ಬರುವ ದಿನಗಳಲ್ಲಿ ಎಲ್ಲರು ಒಂದಾಗಿ ಮತ್ತಷ್ಟು ದೊಡ್ಡದಾಗಿ ಬೆಳೆಸೋಣ
ಲೇಖಕರು: ರಂಗನಾಥ. ಪಿ.ಎಸ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ