ಶುಕ್ರವಾರ, ಫೆಬ್ರವರಿ 7, 2014

ಚಂದ್ರನ ಒಂದು ತುಂಡು ಇಲ್ಲಿ ಬಿದ್ದಿತಂತೆ !!!

ಚಂದ್ರನ ಒಂದು ತುಂಡು ಇಲ್ಲಿ ಬಿದ್ದಿತಂತೆ. ಒಮಾನ್ ನಲ್ಲಿ ನಿಸರ್ಗ ನಿರ್ಮಿತ ಪ್ರವಾಸಿ ತಾಣಗಳಿಗೆ ಕೊರತೆ ಏನು ಇಲ್ಲ. ಪಕ್ಕದ ದುಬೈ ನಲ್ಲಿ ಮಾನವನಿರ್ಮಿತ ಪ್ರವಾಸಿ ತಾಣಗಳಿದ್ದರೆ, ಒಮಾನ್ ನಲ್ಲಿ  ನೋಡೋದಿಕ್ಕೆ ನೈಸರ್ಗಿಕ ನಿರ್ಮಿತ ಹಲವಾರು ಪ್ರದೇಶಗಳು ಇವೆ. ಇವುಗಳಲ್ಲಿ ಬಹು ಪ್ರಸಿದ್ದ ವಾದ ಒಂದು ತಾಣ "ಬಿಮ್ಮ ಸಿಂಕ್ ಹೋಲ್". ಮಸ್ಕತ್ ನಿಂದ ಸೂರ್ ರಸ್ತೆಯಲ್ಲಿ ಕುರಿಯತ್ ಮಾರ್ಗವಾಗಿ ಸುಮಾರು ೧೩೦ ಕಿ.ಮಿ. ದೂರ ಪ್ರಯಾಣಿಸಿದರೆ, "ಬಿಮ್ಮ ಸಿಂಕ್ ಹೋಲ್" ಸೂಚನಾ ಫಲಕ ಕಾಣಿಸುತ್ತೆ, ಆ ಮಾರ್ಗವಾಗಿ ಸಂಚರಿಸಿದರೆ ದಿಬಾಬ್ ಮತ್ತು ಹವಿಯತ್ ನಜ್ಮ್ ಪಾರ್ಕ್ ಸೂಚನಾ ಫಲಕ ಕಾಣಿಸುತ್ತೆ.
ಪಾರ್ಕ್ ಒಳಗೆ ಸ್ವಲ್ಪ ನಡೆದು ಹೋದರೆ ಸುತ್ತಲೂ ಸಮತಟ್ಟವಾದ ಭೂಮಿ ಅದರ ಮಧ್ಯದಲ್ಲಿ ದೊಡ್ಡ ಬಾವಿಯ ಹಾಗೆ ಕಾಣಿಸುವ ಸುಮಾರು ೪೦ ಮೀಟರ್ ಅಗಲ ಮತ್ತು ೨೦ ಮೀಟರ್ ಆಳ ವಿರುವ ಅತಿ ಸುಂದರ ಆಳವಾದ ನೀರಿನ ಹೊಂಡ ಕಾಣಿಸುತ್ತೆ. ನೀಲಿ ಬಣ್ಣದ ನೀರು, ಸ್ವಲ್ಪ ಹಸಿರು ಮಿಶ್ರಿತ ಹಾಗೂ ಕಡು ನೀಲಿ ಪದರ ದಂತೆ ಕಾಣುವ ನೀರು ಬಹಳ ಆಕರ್ಷಕ ವಾಗಿದೆ. ಗಲ್ಫ್ ಕಡಲ ತೀರದಿಂದ ಸುಮೂರು ೫೦೦ ಮೀಟರ್ ದೂರದಲ್ಲಿ ರುವುದರಿಂದ, ಸಮುದ್ರದ ಉಪ್ಪು ನೀರು ಹಾಗು ಅಂತರ್ಜಲ ಎರಡು ಮಿಶ್ರಿತ ವಾಗಿರುವುದರಿಂದ ನೀರು ತುಂಬಾ ಆಕರ್ಷಕ ಬಣ್ಣ ದಲ್ಲಿ ಕಾಣುತ್ತೆ.
ಜನ ಈ ನೀರಿನಲ್ಲಿ ಈಜಿ ಆಟವಾಡುತ್ತಾರೆ, ಕೆಲವರು ನೀರಿನಲ್ಲಿ ಕಾಲಿಟ್ಟು ಸಣ್ಣ ಸಣ್ಣ ಮೀನಿನಿಂದ ಕಾಲ್ಬೆರಳುಗಳನ್ನು ಕಚ್ಚಿಸಿಕೊಳ್ಳುತ್ತಾರೆ, ಇದು ಒಂಥರಾ ದುಡ್ಡು ಕೊಡದೆ ಫಿಶ್ ತೆರಪಿ ಮಾಡಿಸಿ ಕೊಂಡ ಹಾಗಿರುತ್ತೆ.

ಸಿಂಕ್ ಹೋಲ್ ನ ಒಳಗೆ ಇಳಿಯಲು ಮೆಟ್ಟಿಲುಗಳನ್ನು ಮಾಡಲಾಗಿದೆ, ಮೇಲೆ ಸುರಕ್ಷೆ ಗಾಗಿ ೪ ಅಡಿಯ ರಕ್ಷಣಾ ಗೋಡೆ ಯಿದೆ. ಸುಸಜ್ಜಿತ  ಶೌಚಾಲಯ ಸಹಿತ ಉದ್ಯಾನವನ, ಹತ್ತಿರದಲ್ಲಿ ಸುಂದರ ಸಮುದ್ರ ತೀರ, ಒಟ್ಟಿನಲ್ಲಿ ಸುಂದರ ಸಂಜೆ ಕಳೆಯಲು ಹೇಳಿ ಮಾಡಿಸಿದ ಜಾಗವಿದು.
ಬಹುತೇಕ ವಿದೇಶಿ ಪ್ರವಾಸಿಗರು ಅದರಲ್ಲೂ ಯುರೋಪಿಯನ್ನರು ಇಲ್ಲಿಗೆ ಅತಿ ಹೆಚ್ಚು ಭೇಟಿ ಕೊಡುತ್ತಾರೆ, ಇಲ್ಲಿನ ನಗರ ಪಾಲಿಕೆ ಯವರು ಒಂದು ವಿಹಾರಕ್ಕಾಗಿ ಉದ್ಯಾನ ಮಾಡಿದ್ದಾರೆ, ಒಮಾನಿಗಳು ಇಲ್ಲಿ ಬಾರ್ಬೆಕ್ಯೂ ಮಾಡಿ ಸಮಯಕಳೆಯುತ್ತಾರೆ.  ವಾರ ಪೂರ್ತಿ ಕೆಲಸದ ದಣಿವನ್ನು ನಿವಾರಿಸುಕೊಳ್ಳುವುದಕ್ಕೆ ಒಂದು ದಿನದ ಹೊರ ಸಂಚಾರವನ್ನು ಯೋಜಿಸಿದಲ್ಲಿಹತ್ತಿರದಲ್ಲಿ ವಾದಿ ಶಾಬ್, ವಾದಿ ತಿವಿ ಸ್ಥಳಗಳಿದ್ದು, ಮಾರ್ಗ ಮಧ್ಯದಲ್ಲಿ ಸಿಂಕ್ ಹೋಲ್ ಗೆ ಬೇಟಿ ನೀಡುವ ಯೋಜನೆ ಹಾಕಿ ಕೊಂಡರೆ ಒಂದು ದಿನದ ಪ್ರವಾಸ ಮನಕ್ಕೆ ಮುದ ನೀಡುವುದರಲ್ಲಿ ಸಂಶಯವಿಲ್ಲ.

ಗೂಗಲ್ ಮ್ಯಾಪ್ ನಿಂದ ಕಾಣುವ ಚಿತ್ರಣ

ಸ್ಥಳೀಯರ ಪ್ರಕಾರ ಉಲ್ಕೆಯೊಂದು ಬಿದ್ದು ಇಂತಹ ದೊಡ್ಡ ಹೊಂಡ ವಾಗಿದೆ ಎಂದುಹೇಳುತ್ತಾರೆ, ಕೆಲವರು ಚಂದ್ರನ ಒಂದು ತುಂಡು ಬಿದ್ದು ಹೀಗೆ ಆಗಿದೆ ಎನ್ನುತ್ತಾರೆ ಆದರೆ ಭೂಗರ್ಭ ಶಾಸ್ತ್ರಜ್ನರ ಪ್ರಕಾರ ಇಲ್ಲಿರುವ ಅತಿ ಹೆಚ್ಚು ಸುಣ್ಣದಕಲ್ಲು ಗಳು ಸವೆದು ಸವೆದು ನೆಲದ ಪದರ ಜರುಗಿ ಭೂಮಿ ಕುಸಿದಿರಬಹುದೆಂದು ಅಂದಾಜಿಸಿದ್ದಾರೆ.

ಭೂಗರ್ಭ ಶಾಸ್ತ್ರಜ್ನರ ಪ್ರಕಾರ ಸಿಂಕ್ ಹೋಲ್ ಗಳು ರೂಪು ಗೊಳ್ಳುವುದು ಹೀಗೆ,
 

10 Of The Largest Sinkholes In The World
1. Qattara Depression, West of Cairo, Egypt
2. Berezniki, Russia
3. Guatemala City (2007)
5. Texas Devils Sinkhole
6. Sarisarinama Sinkholes, Venezuela
7. Bimmah sinkhole, Oman
8. Agrico Gypsum Stack, Florida
9. Macungie Sinkhole, Pennsylvania
10. Daisetta Sinkhole, Texas

ಪ್ರಪಂಚದ ಕೆಲವೇ ಕೆಲವು ಇಂತಹ ಸಿಂಕ್ ಹೋಲ್ ಗಳಲ್ಲಿ ಒಮಾನ್ ಬಿಮ್ಮ ಸಿಂಕ್ ಹೋಲ್ ಸಹ ಇದರಲ್ಲಿ ಒಂದು ಎನ್ನುವುದು ಒಮಾನಿಗಳಿಗೆ ಹೆಮ್ಮೆಯಿದೆ. ಇದು ಅತಿ ಪುರಾತನವಾದದ್ದರಿಂದ, ಇಲ್ಲಿನ ಸರ್ಕಾರ ಇದನ್ನು ಸಂರಕ್ಷಿಸಿ, ಒಮಾನ್ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಇದನ್ನು ಸೇರಿಸಲಾಗಿದೆ.
 

ಪಿ.ಎಸ್.ರಂಗನಾಥ


1 ಕಾಮೆಂಟ್‌: