ಮಂಗಳವಾರ, ಫೆಬ್ರವರಿ 18, 2014

ಮಸ್ಕತ್: ಕಸದಿಂದ ರಸ ತಯಾರಿಸುವ ಶ್ರೀಮತಿ ಸಾವಿತ್ರಿ.

ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಯಿರುತ್ತೆ, ಅಂತವರಿಗೆ ಒಂದು ಸೂಕ್ತ ವೇದಿಕೆ ಕೊಟ್ಟರೆ ತಾವು ಏನು ಎನ್ನುವುದನ್ನು ಈ ಪ್ರತಿಭಾವಂತರು ನಿರೂಪಿಸುತ್ತಾರೆ. ಸದಾ ಕ್ರಿಯಾಶೀಲತೆ, ಚಟುವಟಿಕೆಯಿಂದ ಇರುವ ಮನಸ್ಸು ಏನೇನೆಲ್ಲ ಮಾಡಬಹುದು ಎಂದು ಇವರನ್ನು ನೋಡಿದರೆ ಗೊತ್ತಾಗುತ್ತೆ.



ಕಲೆಗೂ ಹೆಣ್ಣು ಮಕ್ಕಳಿಗೂ ಎಲ್ಲಿಲ್ಲದ ನಂಟು ಎನ್ನುವುದು ಬಹಳಷ್ಟು ಸಾಧಕರನ್ನು ನೋಡಿದಾಗ ಅನಿಸುತ್ತೆ. ಒಂದಲ್ಲ ಒಂದು ರೀತಿಯ ಕಲೆ ಪ್ರತಿಯೊಬ್ಬರ ಮನೆಯಲ್ಲಿ  ಅಜ್ಜಿ, ತಾಯಿ, ಅಕ್ಕ ತಂಗಿ, ನಾದಿನಿ, ಮಗಳು ಮೊಮ್ಮಗಳು ಹೀಗೆ ಒಬ್ಬರಿಂದ ಇನ್ನೊಬ್ಬರಿಗೂ ಹರಡುತ್ತ ಹೋಗುತ್ತೆ. ಕೊನೆ ಪಕ್ಷ ಮನೆಯಲ್ಲಿ ಯಾರೂ ಇಲ್ಲದಿದ್ದರೂ ಅಕ್ಕ ಪಕ್ಕದ ಮನೆಯವರಿಂದ ಎಲ್ಲೋ ಒಂದು ಕಡೆ ಪ್ರೋತ್ಸಾಹ ಅಥವ ಸ್ಪೂರ್ತಿ ಯಿಂದ ಕಲಿಯುತ್ತ ಹೋಗುತ್ತಾರೆ. ಅದು ಸಂಗೀತ ಇರಬಹುದು, ಚಿತ್ರಕಲೆ ಯಿರಬಹುದು. ಅಭಿನಯ ಯಿರಬಹುದು, ಕೊನೆ ಪಕ್ಷ, ವೈರ್ ಬ್ಯಾಗ್ ಹಾಕುವುದು, ಸ್ವೆಟ್ಟರ್ ಹಾಕುವುದು, ವಿಧ ವಿಧ ಡಿಸೈನ್ ಬಟ್ಟೆ ಹೊಲಿಯುವುದು, ಗೋಡೆಗೆ ಹಾಕುವ ಅಲಂಕಾರದ ವಸ್ತುಗಳು, ಟೀ ಪಾಯಿ ಮೇಲೆ ಇಡುವ ಕಲಾಕೃತಿ, ಹೂಕುಂಡ  ಅಥವ ಮನೆಗೆ ಅಲಂಕಾರದ ವಸ್ತುಗಳನ್ನು ತಯಾರಿಸುವ ಕಲೆ ಅದು ಹೇಗೋ ಕಲಿತು ಕೊಂಡು ಬಿಡ್ತಾರೆ.  ಗಂಡಸರಿಗೆ ಹೋಲಿಸಿದರೆ ಹೆಂಗಸರಿಗೆ ತಾಳ್ಮೆ ಜಾಸ್ತಿ, ಕಲಾತ್ಮಕ ವಿಷಯಗಳಲ್ಲಿ ಅವರದೂ ಮೇಲುಗೈ ಅಂತ ಹೇಳಬಹುದೇನೋ.

ಮಸ್ಕತ್ ನಲ್ಲಿ ವಾಸಿಸಿರುವ ಶ್ರೀಮತಿ ಸಾವಿತ್ರಿ ಯವರು ಕಸ ದಿಂದ ರಸ ಉತ್ಪಾದಿಸುವ ವಿಶಿಷ್ಟ ಕಲೆ ಯನ್ನು ಸಂಪಾದಿಸಿಕೊಂಡಿದ್ದಾರೆ. ಬಿಡುವಿನ ಸಮಯದಲ್ಲಿ ಇವರು ಮಾಡುವ ಕಲಾಕೃತಿ ಗಳು ಬಹು ವಿಶಿಷ್ಟತೆ ಯಿಂದ ಕೂಡಿದ್ದು ಮಾಲ್ ಗಳಲ್ಲಿ ಹಲವಾರು ರಿಯಾಲ್ ಗಳನ್ನು ಕೊಟ್ಟು ಖರೀದಿಸಿ ಕೊಂಡು ಬಂದಿರುವ ಹಾಗಿರುತ್ತೆ. ಕೆಲವೊಂದು ಕಲಾಕೃತಿಗಳು ಇವರ ಕೈಯಿಂದ ಅರಳಿದ್ದಾ? ಎನ್ನುವ ಸಂಶಯ ಮೂಡುತ್ತೆ. ಅಷ್ಟೊಂದು ಸುಂದರವಾಗಿ ಕಲಾಕೃತಿ ಗಳನ್ನು ಇವರು ರೂಪಿಸುತ್ತಾರೆ.
ಸೇಲ್ಸ್ ಪ್ರಮೋಶನ್ ಗೆ ಬರುವ ಪೇಪರ್ ನಿಂದ ಹಿಡಿದು ಖಾಲಿ ಯಾದ ಹಾಲಿನ ಪ್ಲಾಸ್ಟಿಕ್ ಡಬ್ಬದ ವರೆಗೂ ಬಿಸಾಡುವ ವಸ್ತುಗಳಿಂದ ವಿವಿದ ಕಲಾಕೃತಿಗಳನ್ನು ಇವರು ತಯಾರಿಸಿದ್ದಾರೆ.
ಇದಲ್ಲದೆ ಮಕ್ಕಳಿಗೆ ಶಾಲೆಯ ಎಗ್ಸಿಬಿಶನ್ ಗೆ ಬೇಕಾದ ಹಲವಾರು ಮಾಡೆಲ್ ಗಳನ್ನು ತಯಾರಿಸಿ ಶಾಲಾ ಶಿಕ್ಷಕರಿಂದ ಶಹಬಾಶ್ ಗಿರಿಯನ್ನು ಪಡೆದಿದ್ದಾರೆ.


ಮನೆಯ ಹಿತ್ತಲಿನಲ್ಲಿ ನೆಲಕ್ಕೆ ಹಾಸಿದ ಕೆಲ ಟೈಲ್ಸ್ ಮತ್ತು ಸಿಮೆಂಟ್ ಕಾಂಕ್ರೀಟ್ ನ್ನು ಕಿತ್ತು ಹಾಕಿ ಕೆಲ ಗಿಡ ಗಳನ್ನು ಬೆಳೆಸಿದ್ದಾರೆ, ಜತೆಗೆ ಹಳೆಯ ಬಾಟಲ್ ಗಳು, ಹಾಲಿನ ಡಬ್ಬ ಮತ್ತು ಖಾಲಿ ಜ್ಯೂಸ್ ಬಾಟಲ್ ಗಳಲ್ಲಿ ಮಣ್ಣು ತುಂಬಿಸಿ ಗಿಡಗಳನ್ನು ಬೆಳೆದಿದ್ದಾರೆ.

ಪ್ರತಿವರ್ಷ ಅವರ ಮನೆಯಲ್ಲಿ ನಡೆಯುವ ವರಮಹಾಲಕ್ಷ್ಮಿ ಪೂಜೆಯ ವರಮಹಾಲಕ್ಷ್ಮಿ ಅಲಂಕಾರ ಎಲ್ಲರ ಕಣ್ಣು ಸೆಳೆಯುತ್ತದೆ. ಪದೇ ಪದೇ ನೋಡಬೇಕೆನ್ನುವ ಆಸೆಯು ಆಸ್ತಿಕರಲ್ಲಿ ಹುಟ್ಟುತ್ತದೆ.

ಪ್ರೋತ್ಸಾಹ ಮತ್ತು ಸೂಕ್ತ ಮಾರ್ಗದರ್ಶನದ ವಿದ್ದಿದ್ದರೆ ಇನ್ನೂ ಹೆಚ್ಚಿನದನ್ನೂ ಸಾಧಿಸಬಹುದಿತ್ತು ಎನ್ನುವ ಕೊರಗು ಅವರಿಗಿದೆ. ಜತೆಗೆ ಮಸ್ಕತ್ ನಲ್ಲಿ ಸೂಕ್ತ  ಕಚ್ಚಾ ಸಾಮಗ್ರಿಗಳ ಕೊರತೆ ಯಿರುವುದು ಸಹ ಅವರ ಹೊಸತನದ ಆಲೋಚನೆ ಗಳಿಗೆ ಕಡಿವಾಣ ಬಿದ್ದಂತಾಗಿದೆ.  ಸಮಾನ ಮನಸ್ಕರು ಒಂದೆಡೆ ಸೇರಿ ಚರ್ಚಿಸುವ ಹಾಗೂ ವಿಚಾರ ವಿನಿಮಯ ನಡೆಸುವ  ಆಸೆ ಅವರಿಗಿದೆ. ತಮಗೆ ಗೊತ್ತಿರುವ ಕೆಲ ಕಲಾಕೃತಿ ಗಳನ್ನು ಮಸ್ಕತ್ ನಲ್ಲಿ ವಾಸಿಸುವ ಆಸಕ್ತಿ ಯಿರುವ ಗೃಹಿಣಿಯರಿಗೆ ಕಲಿಸುವ ಆಲೋಚನೆ ಅವರಿಗೆ ಇದೆ, ಆಸಕ್ತಿಯಿದ್ದವರು ಅವರನ್ನು ಸಂಪರ್ಕಿಸಬಹುದು.





ಶ್ರೀಮತಿ ಸಾವಿತ್ರಿ ಯವರಿಗೆ ಮನೆ ಹಿತ್ತಲು ಅಥವ ಮುಂದೆ ಚಿಕ್ಕ ಕೈತೋಟ ಮಾಡಬೇಕು ಎನ್ನುವ ಆಸೆ ಯಿತ್ತು, ಆದರೆ ಅವರ ಫ್ಲಾಟಿನ ಸುತ್ತ ಕಾಂಕ್ರೀಟ್ ನೆಲ ಹಾಗು ಟೈಲ್ಸ್ ಗಳಿದ್ದು, ಗಿಡಗಳನ್ನು ಬೆಳೆಸುವುದಕ್ಕೆ ಸೂಕ್ತ ಜಾಗವಿರಲಿಲ್ಲ. ಅದಕ್ಕೆ, ಕೆಲ ಟೈಲ್ಸ್ ಗಳನ್ನು ಒಡೆದು ಅಲ್ಲಿ ಮಣ್ಣನ್ನು ಹಾಕಿ ಚಿಕ್ಕ ತೋಟ ಕ್ಕೆ ಬೇಕಾದ ತಯಾರಿ ಮಾಡಿದರು. ಕೈಕೆಸರಾದರೆ ಬಾಯಿ ಮೊಸರು ಅನ್ನುವಂತೆ, ಅದರ ಫಲವನ್ನು ಮೇಲಿನ ಫೋಟೊ ಗಳಲ್ಲಿ ಅದನ್ನು ಕಾಣಬಹುದು.


ಕುಂಡ ಗಳಿಗೆ ಪರ್ಯಾಯವಾಗಿ, ಹಳೆಯ ಪ್ಲಾಸ್ಟಿಕ್ ಬಾಟಲ್, ಹಾಲಿನ ಕ್ಯಾನ್ ಮತ್ತು ಜ್ಯೂಸ್ ಕಾಲಿ ಡಬ್ಬಗಳನ್ನು ಉಪಯೋಗಿಸಿ ಗಿಡಗಳನ್ನು ಬೆಳೆದಿದ್ದಾರೆ. ಶ್ರಮಕ್ಕೆ ತಕ್ಕ ಪ್ರತಿ ಫಲವನ್ನು ನಾವು ಅಲ್ಲಿ ಕಾಣ ಬಹುದು.


ಸಾಮಾನ್ಯವಾಗಿ ಮನೆಯ ಹಿತ್ತಲಿನಲ್ಲಿ ನೀರು ಬಿಡುವ ಪೈಪ್ ಇರದಿದ್ದರೆ, ಜಗ್ ನಿಂದ ಗಿಡಕ್ಕೆ ನೀರು ಹಾಕುತ್ತಾರೆ, ಆದರೆ ಇವರು  ಖಾಲಿಯಾದ ಪ್ಲಾಸ್ಟಿಕ್ ಬಾಟಲಿಯಲ್ಲಿನ ಮುಚ್ಚಳದಲ್ಲಿ ಹಲವಾರು ತೂತುಗಳನ್ನು ಮಾಡಿ, ಗಿಡಕ್ಕೆ ನೀರನ್ನು ಸಮನಾಂತರವಾಗಿ ಹಾಯಿಸುವ ವಿಧಾನವನ್ನು ಪಾಲಿಸುತಿದ್ದಾರೆ. ಇದರಿಂದ ಮಣ್ಣಿನ ಬೇರು ಸಡಿಲವಾಗುವುದಿಲ್ಲ ಹಾಗೂ ಮಣ್ಣು ಗಿಡದ ಕಾಂಡದಿಂದ ಜರಗುವುದಿಲ್ಲ. ಮಾರುಕಟ್ಟೆಯಲ್ಲಿ ಇದಕ್ಕಾಗಿ  ಹಲವಾರು ಉಪಕರಣಗಳು ದೊರೆಯುತ್ತವೆ, ಆದರೆ ಇವರು ಖಾಲಿ ಮಾಡಿ ಬಿಸಾಡುವ ಪ್ಲಾಸ್ಟಿಕ್ ಬಾಟಲಿಯಿಂದ ಆಧುನಿಕ ಉಪಕರಣ ತಯಾರಿಸಿ ತಮ್ಮ ಕುಶಲತೆ ಯನ್ನು ಮೆರೆದಿದ್ದಾರೆ.

ವರಮಹಾಲಕ್ಷ್ಮಿ ಹಬ್ಬದ ಪೂಜೆ ಗಾಗಿ ಇವರು ಮಸ್ಕತ್ ನಲ್ಲಿ ಕೈಗೆಟುಕುವ ದರದಲ್ಲಿ ಅತಿ ಖರ್ಚು ವೆಚ್ಚವಿಲ್ಲದೆ ದೊರೆಯುವ ಸಾಮಗ್ರಿಗಳಿಂದ ಸರಳವಾಗಿ ಅಲಂಕಾರ ಮಾಡುತ್ತಾರೆ. ಅಲಂಕಾರ ಮಾಡಿದ ನಂತರ ಪೂಜಾ ಪೀಠವನ್ನು ನೋಡಿದರೆ ತುಂಬಾ ಆಕರ್ಷಕ ವಾಗಿ ಕಾಣುತ್ತದೆ, ಅಲಂಕಾರಕ್ಕಾಗಿ ತುಂಬಾ ಹಣ ವ್ಯಯಿಸಿದ್ದಾರೆನೋ ಅಂತ ಅನಿಸುವುದು ಸಹಜ.


ಹಳೆ ಪೇಪರ್, ಪ್ಲಾಸ್ಟಿಕ್ ಬಾಟಲ್, ಜೇಡಿ ಮಣ್ಣು, ಕ್ಲೇ, ಗೋಧಿ, ಮೈದ ಹಿಟ್ಟು, ಖಾಲಿ ಎಣ್ಣೆ ಬಾಟಲ್, ವಾಟರ್ ಫಿಲ್ಟರ್ ಒಳಗಿರುವ, ಊಲನ್ ನಂತಿರುವ ದಾರ, ಬಟ್ಟೆ, ಜ್ಯೂಸ್ ಕುಡಿಯುವ ಸ್ಟ್ರಾ, ಪಿಸ್ತಾ ಬೀಜದ ಸಿಪ್ಪೆ, ಲಬಾನ್ ಡಬ್ಬ, ಹೀಗೆ ಒಂದೇ ಎರಡೆ, ಹಲವಾರು ಸಾಮಗ್ರಿಗಳನ್ನು ಉಪಯೋಗಿಸಿ ಸುಂದರವಾದ ಫ್ಲವರ್ ವಾಸ್ ಗಳನ್ನು ತಯಾರಿಸಿ ಮನೆ ತುಂಬಾ ಜೋಡಿಸಿದ್ದಾರೆ.

ಪೆನ್ಸ್, ಪೆನ್ಸಿಲ್, ಮಕ್ಕಳಿಗೆ ಶಾಲೆಯಲ್ಲಿ ಕೊಡುವು ಸರ್ಕ್ಯುಲರ್, ದಿನ ಪತ್ರಿಕೆಗಳು, ಮ್ಯಾಗಜೀನ್ ಇನ್ನು ಮುಂತಾದ ವಸ್ತುಗಳನ್ನು ಜೋಡಿಸಿಟ್ಟುಕೊಳ್ಳುವುದಕ್ಕೆ , ಕಾರ್ನ್ ಪ್ಲೇಕ್ಸ್, ಚಾಕೋಪಿಕ್ಸ್ ಮುಂತಾದ ಖಾಲಿಡಬ್ಬಗಳಿಗೆ, ಬೈಂಡಿಗ್ ಪೇಪರ್ ಉಪಯೋಗಿಸಿ, ತಯಾರಿಸಿದ ಚಿಕ್ಕ ಶೆಲ್ಫ್.

ಮನೆಯ ಗೋಡೆಯ ಮೇಲಿನ ಸುಂದರ ಚಿತ್ತಾರ.

ಶಾಲೆಯಲ್ಲಿ ನಡೆದ ಎಗ್ಸಿಬಿಷನ್ ಗಾಗಿ ತಯಾರಿಸಿದ ಒಂದು ಸುಂದರಕಲಾಕೃತಿ. 


ಶಾಲೆಯ ವಾರ್ಷಿಕೋತ್ಸವ ಕ್ಕಾಗಿ ನಡೆದ ಮಗಳು ಧರಿಸಿ ನರ್ತಿಸ ಬೇಕಾಗಿದ್ದ ಏರೋಪ್ಲೇನ್ ಮಾದರಿ.


ಮನೆಯಲ್ಲಿ ತಯಾರಿಸಿದ ಗ್ರೀಟಿಂಗ್ ಕಾರ್ಡ್. 

3 ಕಾಮೆಂಟ್‌ಗಳು:

  1. shrimathi savitri avara kale nijakku adbhuta vaagide . avarau maneyalle balasi bisaaduva halavaaru saamaanugalainda isthu sundaravaada kala kruthigala tayarisiddu nijakku shlaaghaneeya , naanu arathi pakkada dubai nalli vaasaviruvavvalu . blog list ninda haage surf maadutha illige bande , thnks for showcasing shrimathi savithris talent my heart congratz to her.

    ಪ್ರತ್ಯುತ್ತರಅಳಿಸಿ
  2. ಒಳ್ಳೆಯ ಹವ್ಯಾಸ ಮತ್ತು ಮತ್ತು ಬಿಸಾಡುವ ವಸ್ತುಗಳಿಂದ ಆಕರ್ಷಕ ಕಲಾ ಕೃತಿಗಳು ತುಂಬಾ ಚೆನ್ನಾಗಿವೆ ,ಇವರಿಗೆ ಮತ್ತು ಇಂಥ ಪ್ರತಿಭೆಗಳನ್ನು ಪರಿಚಯಿಸುತ್ತಿರುವ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ,ಬಿಡುವು ಇದ್ದಾಗ ನನ್ನ ಬ್ಲಾಗ್ http://laxmipras.blogspot.com ಮತ್ತು http://laxmihavyaka.blogspot.com ಓದಿ ಅಭಿಪ್ರಾಯಿಸಿ

    ಪ್ರತ್ಯುತ್ತರಅಳಿಸಿ
  3. ಶ್ರೀಮತಿಯವರ ಕ್ರಿಯಾಶೀಲತೆ ಅದ್ಭುತವಾಗಿದೆ ಸರ್, ಅಭಿನಂದನೆಗಳು..ಕಸದಿಂದ ರಸ ಇದೊಂದು ಬರಹ ಮಾತ್ರವಾಗಿರದೆ ಇನ್ನೊಬ್ಬರಲ್ಲಿ ಕ್ರಿಯಾಶೀಲತೆಗೆ ಪ್ರೇರಣೆಯಾಗಿ ಮನೆಮನೆಗೇ ತಲುಪಲಿ ಎಂದು ಹಾರೈಸುವೆ..ಅವರಿಗೊಂದು ಶರಣು ಸರ್..💐

    ಪ್ರತ್ಯುತ್ತರಅಳಿಸಿ

Click below headings