ಅಂದು
ಕೃಷ್ಣನಂತಿದ್ದ
ಮದುವೆಯಂತರ
ಬುದ್ದನಂತಾದ
***
ದಾರ ಹರಿದ
ಗಾಳಿಪಟ
ದಂತಾಗಿತ್ತವನ ಬದುಕು
ಮಾಂಗಲ್ಯ ಧಾರ ಣೆಯ ನಂತರ
ಅವನೀಗ ಜವಬ್ ದಾರ
***
ಅವಳದು ಸುಂದರ
ಕುಟುಂಬ
ಅವಳು ಅದರ
ಪ್ರತಿಬಿಂಬ
ಅವಳ ಅಂದಕೆ ಜಾರಿ
ಬಿದ್ದನೊಬ್ಬ ಹುಂಬ
ಇಂದು ಮನೆಯಲ್ಲಿ
ಉಜ್ಜುತ್ತಿರುವ
ಪಾತ್ರೆ ಚೊಂಬ!!!
*****
ಮದುವೆಗೆ ಮುಂಚೆ
ಅವನಿಗ್ಯಾವ ಮನೆಗೆಲಸವೂ
ಗೊತ್ತಿರಲಿಲ್ಲ
ಮದುವೆಯ ನಂತರ
ಈಗ ಮನೆಕೆಲಸಗಳಲ್ಲಿ
ಅವನನ್ನ ಮೀರಿಸುವರು
ಯಾರೂ ಇಲ್ಲ
***
ಮದುವೆಗೆ ಮುಂಚೆ
ಅವನನ್ನ ಬುದ್ದಿವಂತನೆಂದು
ಎಲ್ಲರೂ ಹೊಗಳುವವರೆ!!!
ಅವನ ಹೆಂಡತಿ ಈಗ ಪ್ರತಿ ಮಾತಿಗೂ
ಎಂತ ದಡ್ಡ ರೀ ನೀವು
ಎನ್ನುತಿದ್ದಾಳಂತೆ!!!
***
ಮಗ ಮುಂಚೆ
ಆಕಾಶವಾಣಿಯ
ಹಾಡುಗಳಿಗೆ
ಗುನುಗುತಿದ್ದನಂತೆ
ಈಗ ಆ ಶರೀರ ವಾಣಿಯ
ತಾಳಕ್ಕೆ ಕುಣಿಯುತಿದ್ದಾನೆಂದು
ಆರೋಪಿಸುತಿದ್ದಾಳೆ ಅಮ್ಮ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ