ಸೋಮವಾರ, ನವೆಂಬರ್ 16, 2020

ಕ್ಯಾಪ್ಟನ್ ಗೋಪಿನಾಥ್

 ಸೂರರೈ ಪೋಟ್ಟ್ರು !


ಹಳ್ಳಿಯ ಯುವಕನೊಬ್ಬ ಒಂದು ರುಪಾಯಿ ಗೆ ಜನರನ್ನು ವಿಮಾನದಲ್ಲಿ ಕರೆದೊಯ್ದ ರೋಚಕ ಕಥೆ ಇರುವ ತಮಿಳು‌ ಸಿನಿಮಾ. ಕನ್ನಡ ದಲ್ಲಿ‌ ಅದರ ಡಬ್ಬಿಂಗ್ ಕೂಡ ಆಗಿದೆ. ಸಿನೆಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ
ಕನ್ನಡಿಗ ಕ್ಯಾಪ್ಟನ್ ಗೋಪೀನಾಥ ಅವರ ಆತ್ಮಕಥನ ‘ಸಿಂಪ್ಲಿ ಫ್ಲೈ’ ಪುಸ್ತಕವನ್ನು ಆಧರಿಸಿ ಮಾಡಿರುವ ಸಿನಿಮಾ ಇದು.
ಆದರೆ ಪುಸ್ತಕ ದಲ್ಲಿರುವಂತೆ, ಈ ಸಿನಿಮಾದಲ್ಲಿ ಗೋಪಿನಾಥ್ ಅವರ ನಿಜ ಜೀವನ‌ದಲ್ಲಿ‌ ನಡೆದ ಬಹುತೇಕ ಸನ್ನಿವೇಶಗಳು ಇಲ್ಲ. ಕ್ಯಾಪ್ಟನ್ ಗೋಪಿನಾಥ್ ಅವರು ಹೇಳಿದಂತೆ ಇದು Heavily dramatised and fictionalised ಸಿನಿಮಾ.
ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಯುವಕರಿಗೆ ಕ್ಯಾಪ್ಟನ್ ಗೋಪಿನಾಥ್ ನಿಜಕ್ಕೂ ಸ್ಪೂರ್ತಿಯಾಗುತ್ತಾರೆ.
ಅಂತಹವರು ಅವರ Siplyfly ಪುಸ್ತಕವನ್ನು ಒಮ್ಮೆ ಓದಬೇಕು. ಅವರು ಪಟ್ಟ ಕಷ್ಟ, ಅವರ ಛಲ, ಹಟ, ಸಾಧನೆಗಳು ಎಲ್ಲವೂ ಆ ಪುಸ್ತಕದಲ್ಲಿ ದಾಖಲಾಗಿದೆ.
ಇಂಗ್ಲಿಷಿನಿಂದ ಕನ್ನಡಕ್ಕೆ ಶ್ರೀ ವಿಶ್ವೇಶ್ವರ್ ಭಟ್ ಅವರು ಬಾನಾಯಾನ ಎನ್ನುವ ಹೆಸರಿನಲ್ಲಿ ಪುಸ್ತಕವನ್ನು ಅನುವಾದಿಸಿದ್ದಾರೆ.
ಸಿನಿಮಾದಲ್ಲಿ ಇನ್ನೂ ಹಲವಾರು ನೈಜ ಸನ್ನಿವೇಶಗಳನ್ನು ಪರಿಣಾಮಕಾರಿ ಯಾಗಿ ತೋರಿಸಬಹುದಿತ್ತು, ಆದರೆ ಕೇವಲ ‘ಡೆಕ್ಕನ್ ಏರ್' ವಿಮಾನ ಸಂಸ್ಥೆಯನ್ನು ಆರಂಭಿಸಲು ಕ್ಯಾ. ಗೋಪಿನಾಥ ಅನುಭವಿಸಿದ ಸಂಕಷ್ಟ, ಅಪಮಾನ, ತೊಳಲಾಟಕ್ಕೆ‌ ಮಾತ್ರ ಈ ಚಿತ್ರದಲ್ಲಿ ಒತ್ತು ಕೊಟ್ಟಿದ್ದಾರೆ.
ಕೆಲಸ ಬಿಟ್ಟು ವಾಪಾಸು ತಮ್ಮ ಊರಿಗೆ ‌ಹಿಂತಿರುಗಿದಾಗ, ಏನೂ ಬೆಳೆಯದೆ ಇದ್ದ ಜಾಗದಲ್ಲಿ ತೋಟ ಮಾಡಿ, ನೀರಿನ ವ್ಯವಸ್ಥೆ ಇಲ್ಲದಿದ್ದಾಗ ಕತ್ತೆ ಗಳನ್ನು ಉಪಯೋಗಿಸಿ ನೀರು ತಂದಿದ್ದು, ತೋಟದಲ್ಲಿ ಗಿಡಮರಗಳು ಫಲ ಕೊಡಲು ಶುರುಮಾಡಿದ ಮೇಲೆ, ಉಪ ಕಸುಬನ್ನಾಗಿ ರೇಷ್ಮೆ ಹುಳು ಸಾಕಾಣಿಕೆ ಮಾಡಿದ್ದು, ನಂತರ ಹಾಸನದಲ್ಲಿ ಎನ್ ಫೀಲ್ಡ್ ಬುಲೆಟ್ ಶೋರೂಂ ಶುರುಮಾಡಿ,‌ ಅದರ ಜತೆ, ಪಕ್ಕದಲ್ಲಿದ್ದ ಹೋಟೆಲ್ ಅನ್ನು ‌ಕೊಂಡುಕೊಂಡು ಅದರಲ್ಲಿ ವ್ಯಾಪಾರ ಶುರುಮಾಡಿ, ನಂತರ ಮಕ್ಕಳ ವಿದ್ಯಾಭ್ಯಾಸ ಕ್ಕಾಗಿ ಬೆಂಗಳೂರಿಗೆ ಬಂದು, ಅಲ್ಲಿ ಸ್ನೇಹಿತರ ಜತೆಗೂಡಿ, ಡೆಕ್ಕನ್ ಹೆಲಿಕಾಪ್ಟರ್ ಬಾಡಿಗೆ ಕೊಡುವ‌ಕಂಪನಿ ಮಾಡಿ ಅದರಲ್ಲೂ ಸಹ ಯಶಸ್ಸು ಗಳಿಸಿ, ಕೊನೆಗೆ ಡೆಕ್ಕನ್ ಏರ್ ಕಂಪನಿ ಸ್ಥಾಪಿಸಿದ್ದು.
ಹೀಗೆ, ಅವರ ಜೀವನದಲ್ಲಿ ಒಂದರ ಮೇಲೊಂದು ಯಶಸ್ಸು ಕಂಡಿದ್ದಾರೆ.
ಅವರ ಆ ರೋಚಕ ಅನುಭವವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು, ಅವರ Simply fly ಅಥವಾ ಬಾನಾಯಾನ ಪುಸ್ತಕ ಓದಿ. ಆ ಪುಸ್ತಕದಲ್ಲಿ ತಮ್ಮ‌ ಜೀವನದ ಪ್ರತಿಯೊಂದು ಹಂತವನ್ನು ಅಲ್ಲಿ ದಾಖಲಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Click below headings